ಫ್ರಾನ್ಸ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಕಾನ್ ಫಿಲ್ಮ್ ಫೆಸ್ಟಿವಲ್ 2025 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ನೆಕ್ಲೆಸ್ ಧರಿಸಿದ ಭಾರತದ ನಟಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ, ರಾಜಸ್ತಾನದ ಮೂಲದ ನಟಿ ರುಚಿ ಗುಜ್ಜರ್ ದುಬಾರಿ ಲೆಚ್ಚದ ಲೆಹೆಂಗಾ ಧರಿಸಿ ಯುವರಾಣಿಯಂತೆ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಿಂಚಿದ್ದು, ಈ ವೇಳ ಅವರು ಧರಿಸಿದ್ದ ನೆಕ್ಲೆಸ್ ಎಲ್ಲರ ಗಮನ ಸೆಳೆದಿದೆ,
ನಟಿ ರುಚಿ ಗಜ್ಜರ್ ತಮ್ಮ ಉಡುಪಿಗೆ ಸರಿಹೊಂದುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ನೆಕ್ಲೆಸ್ ಧರಿಸಿದ್ದು, ಈ ಮೂಲಕ ಪ್ರಧಾನಿಗಳಿಗೆ ಗೌರವ ಸೂಚಿಸಿರುವುದಾಗಿ ಖುಷಿ ಹಂಚಿಕೊಂಡಿದ್ದಾರೆ,
ಈ ವಿಶೇಷವಾದ ನೆಕ್ಲೆಸ್ ಆಭರಣ ವಿನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ಬಲದ ಸಂಕೇತ, ವಿಶ್ವ ಮಟ್ಟದಲ್ಲಿ ಭಾರತ ಬೆಳವಣೆಯಾಗುತ್ತಿರುವುದರ ಸಂಕೇವಿದು, ಈ ಮೂಲಕ ಪ್ರಧಾನಿ ಮೋದಿಯವರಿಗೆ ಗೌರವ ಸೂಚಿಸುತ್ತಿದ್ದೇನೆ ಎಂದು ನಟಿ ಹೇಳಿದ್ದಾರೆ,
ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟಿ ರುಚಿ ಗುಜ್ಜರ್ ನರೇಂದ್ರ ಮೋದಿ ಅವರ ಭಾವ ಚಿತ್ರವಿರುವ ನೆಕ್ಲೆಸ್ ಧರಿಸಿರುವ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,