ಬೀದರ್: ತಮಗೆ ಭೂಗತಲೋಕ ಪಾತಕಿಗಳಿಂದ ಜೀವ ಬೆದರಿಕೆ ಕರೆ ಬಂದಿರುವುದಾಗಿ ವಿಧಾನಸಭಾ ಸ್ಪಿಕರ್ ಯು.ಟಿ.ಖಾದರ್ ತಿಳಿಸಿದ್ದಾರೆ, ಶುಕ್ರವಾರ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹಿಂದೆಯೂ ಸಹ ಹಲವು ಬಾರಿ ಜೀವ ಬೆದರಿಕೆ ಕರೆಗಳು ಬಂದಿತ್ತು ಎಂದಿದ್ದಾರೆ,
ಪ್ರತಿಯೊಬ್ಬರೂ ಎಲ್ಲಿ ಹುಟ್ಟಬೇಕು, ಎಲ್ಲಿ ಸಾಯಬೇಕು ಎಂದು ಆ ದೇವರು ನಿರ್ಧರಿಸಿರುತ್ತಾಎ, ನೆಮ್ಮದಿಯಾದ ಸಾವು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ, ದೇವರು ಇಟ್ಟಹಾಗೇ ಆಗುತ್ತದೆಯೇ ಹೊರತು ನಮ್ಮ ಕೈಯಲ್ಲಿ ಏನು ಇಲ್ಲ ಎಂದು ಖಾದರ್ ನುಡಿದರು, ಅಲ್ಲದೆ ಈಗ ನಿಮ್ಮ ಕೈಲಿ ಮಾತಾಡುತ್ತಿದ್ದೇನೆ ಮರಳಿ ಮತ್ತೆ ಮನೆಗೆ ವಾಪಸ್ ಹೋಗುವ ಯಾವ ಭರವಸೆಯೂ ಇಲ್ಲ ಎಂದರು,