ಸಾಹೆಬ್ರೆ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಿರಿ..!

varthajala
0

 




ಪಹಲ್ಗಾಮ್‌ ದಾಳಿಯಲ್ಲಿ ನಮ್ಮ ದೇಶದ ಜನರು ಪ್ರಾಣ ಕಳೆದುಕೊಂಡರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಿರಿ. ಪಾಕಿಸ್ತಾನದ ಮನೆಮನೆಗೆ ನುಗ್ಗಿ ಹೊಡೆಯಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಗುಡುಗಿದರು.

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ವತಿಯಿಂದ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಬುದ್ಧಿಕಲಿಸಬೇಕು ಎಂದು ಹೇಳಿದರು.

ಪಹಲ್ಗಾಮ್‌ ಘಟನೆಗೆ ರಾಹುಲ್‌ ಗಾಂಧಿ ಅವರು ಮೋದಿಜಿ ಅವರು ಕೈಗೊಳ್ಳುವ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಡೀ ದೇಶದ ನೂರನಲವತ್ತು ಕೋಟಿ ಜನರು ಮೋದಿ ಅವರ ಜೊತೆಗಿದೆ. ದಯಮಾಡಿ ತಾವು ಪಾಕಿಸ್ತಾನದ ಒಳಗಡೆ ನುಗ್ಗಿ ಆತಂಕವಾದವನ್ನು ಬೆಂಬಲಿಸುವ ಆ ದೇಶಕ್ಕೆ ಬುದ್ಧಿ ಕಲಿಸಿ ಎಂದು ಹೇಳಿದರು.

Post a Comment

0Comments

Post a Comment (0)