ಭಾರತದ ವಿರುದ್ಧ ಸದಾ ವಿಷ ಹರಡುವ ಬಾಂಗ್ಲಾದೇಶದ ಇಸ್ಲಾಮಿಸ್ಟ್ ಗಳ ಹೊಸ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಸೂಸೈಡ್ ಬಾಂಬ್ ಅನ್ನು ಕೋಲ್ಕತ್ತಾಗೆ ಕಳುಹಿಸಿ ಆ ಪ್ರದೇಶವನ್ನು ವಶಪಡಿಸಿಕೊಳ್ಳಲುತ್ತೇನೆ ಎಂದು ಮುಸ್ಲಿಂ ಸಂಘಟನೆಯ ನಾಯಕ ನೋರ್ವ ಹೇಳಿದ್ದಾನೆ.
ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಗಳು ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಬಾಂಗ್ಲಾದೇಶದ ಸೈನ್ಯವು ಈಗ ಹೋಗಿ ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಿ ಎಂದರೆ, ನಾನು ಒಂದು ಯೋಜನೆಯನ್ನು ಮಾಡುತ್ತೇನೆ, 70 ಫೈಟರ್ ಜೆಟ್ ಗಳು ಬಿಡಿ ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಲು ನಾನು ಏಳು ವಿಮಾನಗಳನ್ನು ಸಹ ಬಳಸುವುದಿಲ್ಲ ಎಂದಿದ್ದಾನೆ.
ಕೋಲ್ಕತಾವನ್ನು ವಶಪಡಿಸಿಕೊಳ್ಳಲು 70 ವಿಮಾನ ಯಾಕೆ? ಅಲ್ಲಿ ಯಾರು ವಾಸಿಸುತ್ತಾರೆ, ಜನ ಹೇಗೆ ಎಂಬ ಬಗ್ಗೆ ನನಗೆ ಗೊತ್ತು, ಅಲ್ಲಿರುವವರು ಪ್ರತಿಮೆಯನ್ನು ಪೂಜಿಸುವವರು ಅವರು ಎಷ್ಟು ದುರ್ಬಲರು ಎಂದು ನನಗೆ ಗೊತ್ತು, ಅವರು ರಕ್ತ ನೋಡಿದರೆ ಭಯ ಬೀಳುತ್ತಾರೆ ಎಂದು ಇಸ್ಲಾಮಿಸ್ಟ್ ಹೇಳಿಕೊಂಡಿದ್ದಾನೆ.
ಕೋಲ್ಕತಾವನ್ನು ಆಕ್ರಮಿಸಿಕೊಳ್ಳಿ ಎಂದು ಒಂದೇ ಒಂದು ಸಲ ಸರ್ಕಾರ ತಿಳಿಸಿದರೆ ಈ ಕೂಡಲೇ ಸೂಸೈಡ್ ಬಾಂಬರ್ ಗಳನ್ನು ಕೋಲ್ಕತ್ತಾದತ್ತ ನಮ್ಮ ಆತ್ಮಹತ್ಯಾ ಬಾಂಬರ್ ಗಳನ್ನು ಕಳುಹಿಸಲು ಸಿದ್ಧನಿದ್ದೇನೆ ಹಾಗೆ ಕೋಲ್ಕತಾವನ್ನು ವಶಕ್ಕೆ ಪಡೆಯುತ್ತೇವೆ ಎಂದು ಮುಸ್ಲಿಮ ನಾಯಕ ಹೇಳಿದ್ದಾನೆ.