ಪಾಕಿಸ್ತಾನಕ್ಕೆ ಜೈ ಎಂದ ಮೆಹಬೂಬಾ ಮುಫ್ತಿ..!

varthajala
0

 



ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಧೆ ಮೆಹಬೂಬಾ ಮುಫ್ತಿ ಮತ್ತು ವಿವಾದದಲ್ಲಿ ಸಿಲುಕಿದ್ದಾರೆ, ಪಾಕಿಸ್ತಾನ ವಾಯುಪಡೆಯ ಅಧಿಕಾರಿ ಔರಂಗಜೇಬ್ ಅಹ್ಮದ್ ಅನ್ನು ಶ್ಲಾಘಿಸಿರೋ ಮುಫ್ತಿ ಪಾಕಿಸ್ತಾನಗಳು ಆಧುನಿಕ ವಾಯು ಯುದ್ಧಕ್ಕಾಗಿ ತಮ್ಮ ಪಡೆಗಳಿಗೆ ತರಬೇತಿ ನೀಡುತ್ತಿದ್ದಾರೆ, ಅದರೆ ಭಾರತದಲ್ಲಿ ಕೆಲವರು ಮೊಘಲ್ ಚಕ್ರವರ್ತಿ ಔರಂಗಜೇಬ್ ರನ್ನು ಶಿಕ್ಷಿಸಲು ಅಂಗಡಿಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಮುಫ್ತಿ ಕಿಡಿಕಾರಿದ್ದಾರೆ, 

ಹೈದರಾಬಾದ್ ನಲ್ಲಿ ಕರಾಚಿ ಬೇಕರಿಯನ್ನು ಉದ್ರಕ್ತರ ಗುಂಪೊಂದು ಧ್ವಂಸ ಮಾಡುತ್ತಿರುವ ವೀಡಿಯೊ ಹಂಚಿಕೊಂಡಿರುವ ಮುಫ್ತಿ ನ್ಯೂಸ್ ಚಾನೆಲ್ ಗಳು ವಿಷಕಾರಿ ಸುದ್ಧಿ ಮಾಡುತ್ತಿವೆ, ನಮ್ಮ ದೇಶದಲ್ಲಿ ಮತಾಂಧ ಸಂಘಟನೆಗಳು ಅಂಗಡಿಗಳನ್ನು ಧ್ವಂಸ ಮಾಡುತ್ತಿವೆ, ಮಸೀದಿಗಳನ್ನು ಕೆಡವುತ್ತಿದೆ, ಎಂದೋ ಸತ್ತ ಮೊಘಲ್ ಚಕ್ರವರ್ತಿ ಔರಂಗಜೇಬ್ ನನ್ನು ಶಿಕ್ಷಿಸಲು ಸಮಾಧಿಗಳನ್ನು ಆಗೆಯುತ್ತಿವೆ, ಅದರೆ ಪಾಕಿಸ್ತಾನದ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್ ಆಧುನಿಕ ವಾಯು ಯುದ್ಧಕ್ಕಾಗಿ ತನ್ನ ಪಡೆಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ, 

ದೇಶದ ಸಮಸ್ಯೆಗಳ ಬಗ್ಗೆ ಮಾತಾಡಬೇಕಾದ ಚಾನೆಲ್ ಗಳು ದೇಶಕ್ಕೆ ಬೇಡದ ಸುದ್ದಿ ಮಾಡುವುದರಲ್ಲಿ ಬ್ಯುಸಿಯಾಗಿವೆ, ಅದ್ದರಿಂದ ಭಾರತ ಎಚ್ಚರಗೊಳ್ಳುವ ಸಮಯ ಬಂದಿದೆ ಎಂದು ಮುಫ್ತಿ ಹೇಳಿದ್ದಾರೆ,

 

ಉಗ್ರರನ್ನೇ ಸಮರ್ಥಿಸಿಕೊಂಡಿದ್ದ ಪಾಕಿಸ್ತಾನದ ಔರಂಗ್‍ಜೇಬ್


2029ರ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರವಿದೆ ಎಂಬುದನ್ನು ಪಾಕಿಸ್ತಾನ ಒಪ್ಪಿಕೊಂಡಿತ್ತು, ಅದನ್ನು ಹೇಳಿದ್ದು ಬೇಜರೂ ಅಲ್ಲ, ಖುದ್ದು ಪಾಕಿಸ್ತಾನದ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್.

ವಿದೇಶಿ ಪತ್ರಕರ್ತರ ಜೊತೆ ಮಾತನಾಡಿದ್ದ ಔರಂಗಜೇಬ್ ಅಹ್ಮದ್ ಪಾಕಿಸ್ತಾನದ ಭೂಮಿ, ಆಕಾಶ ಅಥವಾ ಜಲ ಗಡಿಗೆ ಅಪಾಯವಾದರೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಪುಲ್ವಾಮಾದಲ್ಲಿ ನಮ್ಮ ತಂತ್ರಗಾರಿಕೆಯ ಅದ್ಭುತ ಪ್ರದರ್ಶನದಿಂದ ನಾವು ಸಾಬೀತುಪಡಿಸಿದ್ದೇವೆ ಎಂದು ಹೊಗಳಿದ್ದ ಅಂಥಾ ಅಧಿಕಾರಿಗೆ ಮೆಹಬೂಬಾ ಮುಫ್ತಿ ಬಹುಪರಾಕ್ ಹಾಕುತ್ತಿದ್ದಾರೆ, 

 

Post a Comment

0Comments

Post a Comment (0)