ಪ್ರಕೃತಿ ಮಡಿಲಲ್ಲಿ ಹಸಿರು ಯೋಗಾಸನ ; ಹಸಿರು - ಉಸಿರು, ಆರೋಗ್ಯ ಉದ್ದೇಶದ ಯೋಗ ಜನಜಾಗೃತಿ ಅಭಿಯಾನ ಉದ್ಘಾಟಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್*
ಬೆಂಗಳೂರು : ಆಧ್ಯಾತ್ಮಕವಾಗಿ ಮಹತ್ವದ ತಾಣ, ಪರಿಸರ ನಿಧಿ, ಪಂಚನದಿಗಳ ಉಗಮ ಸ್ಥಾನ ನಂದಿಬೆಟ್ಟ ಸಂರಕ್ಷಣೆ ಉದ್ದೇಶದಿಂದ ನಂದಿಬೆಟ್ಟದ ತಪ್ಪಲಿನ ಜೆ.ಎಂ.ಮ್ಯಾರೀಯಟ್ ಗ್ಘಾಲ್ ಶೇರ್ ಕ್ಲಬ್ ನಲ್ಲಿ ಆಯುಷ್ ಇಲಾಖೆ ಸಹಯೋಗದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಹರಿತ್ ಯೋಗ - ಹಸಿರು ಯೋಗ ದಿನವನ್ನು ಆಚರಿಸಲಾಯಿತು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅಂತರಾಷ್ಟ್ರೀಯ ಮಾನವತಾವಾದಿ ಡಾ.ಸಂಜನಾ ಜಾನ್, ಮಾಜಿ ಕುಲಪತಿ ಡಾ.ವೇಣುಗೋಪಾಲ್, ಅಂತರಾಷ್ಟ್ರೀಯ ಕ್ರೀಡಾಪಟು ಮಂಜುನಾಥ್ ಹೆಗ್ಡೆ, ಯು ಹೆಚ್.ಆರ್.ಎಸ್.ಎಫ್ ಅಧ್ಯಕ್ಷ ಸಿ.ಡಿ.ಕಿರಣ್ ಯೋಗ ದಿನಾಚರಣೆಗೆ ಚಾಲನೆ ನೀಡಿದರು, ನೂರಾರು ಯೋಗಪಟುಗಳು ಭವ್ಯ ಪರಿಸರದಲ್ಲಿ ಯೋಗಾಸನ ಮಾಡಿದರು. ಜೂ. 21 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಒಂದು ತಿಂಗಳ ಕಾಲ ಪರಿಸರ ಸ್ನೇಹಿ ಕ್ರಮಗಳು ಮತ್ತು ಹಸಿರು ಯೋಗ ಕುರಿತು ಜನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಮಾತನಾಡಿ ನಮ್ಮ ಋಷಿ,ಮುನಿಗಳು ಸಾವಿರಾರು ವರ್ಷಗಳ ಹಿಂದೆ ಇಡೀ ಪ್ರಪಂಚಕ್ಕೆ ಕೊಡುಗೆಯಾಗಿ ಆರ್ಯುವೇದ ಮತ್ತು ಯೋಗವನ್ನು ಬಳುವಳಿಯಾಗಿ ನೀಡಿದ್ದಾರೆ. ನಮ್ಮ ದೇಶ ಆಧ್ಯಾತ್ಮಿಕ, ಆರ್ಯವೇದ, ಯೋಗದಲ್ಲಿ ಇಡಿ ಪ್ರಪಂಚಕ್ಕೆ ವಿಶ್ವಗುರುವಾಗಿದೆ. ಪ್ರಧಾನಿ ನರೇಂದ್ರಮೋದಿ ಅವರು ಇಡೀ ವಿಶ್ವಕ್ಕೆ ಯೋಗದ ಮಹತ್ವ ಸಾರಿದ ಮಹಾನ್ ನಾಯಕ ಎಂದರು.
ಯು.ಹೆಚ್.ಆರ್.ಎಸ್.ಎಫ್ ಅಧ್ಯಕ್ಷ ಸಿ.ಡಿ.ಕಿರಣ್ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಯೋಗ ದಿನಾಚರಣೆಯನ್ನು ಇಡಿ ವಿಶ್ವವು ಅಚರಿಸುತ್ತಿದೆ. ಇದರ ಪ್ರಯುಕ್ತ ಪರಿಸರದ ಜೊತೆಯಲ್ಲಿ ಯೋಗದ ಮಹತ್ವ ತಿಳಿಸಲು ಹರಿತ್ ಯೋಗ ಅಚರಿಸಲಾಗುತ್ತಿದೆ. ಪ್ರಕೃತಿ ಜೊತೆ ಯೋಗವನ್ನು ಸಮನ್ಯಗೊಳಿಸುವ, ಹಸಿರು ಉಸಿರಾಗಿ ಮಾಡುವ, ಮಣ್ಣಿನ ಫಲವತ್ತತೆ, ಗಿಡ ಮರಗಳನ್ನು ಬೆಳೆಸುವುದು, ಪ್ರಕೃತಿಯನ್ನು ರಕ್ಷಣೆ ಮಾಡುವುದು ಹರಿತ್ ಯೋಗದ ಮೂಲ ಉದ್ದೇಶವಾಗಿದೆ ಎಂದರು.
ಹರಿತ್ ಯೋಗ ಎಂದರೆ ಹಸಿರು ಯೋಗ ಎಂದರ್ಥ. ಯೋಗ ದೇಹ ಮತ್ತು ಮನಸ್ಸಿಗೆ, ಹಸಿರು ಬೆಳದು ಉಸಿರಾಗಿ ಬಳಸಿಕೊಂಡು ಆರೋಗ್ಯವಂತರಾಗಿ ಬಾಳುವ ಉದ್ದೇಶ ಹೊಂದಲಾಗಿದೆ. ಹಸಿರು ಯೋಗದ ಪ್ರಯುಕ್ತ ತಾಯಿಯ ಹೆಸರಿನಲ್ಲಿ ಸಸಿ ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶ್ಯೂನ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸಲಾಯಿತು.
ಕೇಂದ್ರ ಸರ್ಕಾರದ ಆಯುಷ್ ಇಲಾಖೆ, ಬಿಸ್ಲೇರಿ, ಎಫ್.ಹೆಚ್.ಆಂಡ್ ಆರ್ .ಎ.ಇಂಡಿಯಾ ಮತ್ತು ದಾವೋಸ್ ಮೀಡಿಯಾಕಮ್, ಪ್ರಸ್ಟೀಜ್ ಗ್ರೂಪ್ಸ್ ಸಯೋಗದಲ್ಲಿ ಯೋಗ ದಿನ ಆಚರಿಸಲಾಯಿತು.