ಪಾಕಿಸ್ತಾನದೊಳ ಉಗ್ರರ ತಾಣವನ್ನು ಭಾರತ ಪತ್ತೆ ಹಚ್ಚಿದ್ದು ಹೇಗೆ? ಇದಕ್ಕೆ ಕಾರಣ ಇವರೇ

varthajala
0

 

ನವದೆಹಲಿ: ಪಾಕಿಸ್ತಾನದಲ್ಲಿ ಅಡಗಿ ಕೂತಿದ್ದ ರಕ್ತಪಿಪಾಸು ಉಗ್ರರ ಮೇಲೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ, ಭಯೋತ್ಪಾದಕರ ವಿರುದ್ಧ ಭಾರತ ದಿಟ್ಟ ಕ್ರಮ ಕೈಗೊಂಡಿದ್ದು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ದಲ್ಲಿ ಒಂಬತ್ತು ಭಯೋತ್ಪಾದಕ ಅಡಗುತಾಣಗಳನ್ನು ನಾಸಪಡಿಸಿದೆ ಮತ್ತು ಸರಿಸುಮಾರು 80 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿದೆ, 

ಪಾಕಿಸ್ತಾನದೊಳಿನ ಭಯೋತ್ಪಾದಕ ಶಿಬಿರಗಳ ಬಗ್ಗೆ ಭಾರತ ಇಷ್ಟು ನಿಖರವಾದ ಗುಪ್ತಚರ ಮಾಹಿತಿಯನ್ನು ಹೇಗೆ ಪಡೆದುಕೊಂಡಿತು ಎಂಬ ಕುತೂಲಕಾರಿ ಮಾಹಿತಿ ಇಲ್ಲಿದೆ, 

ಪಾಕಿಸ್ತಾನ ಮತ್ತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿರುವ ಭಯೋತ್ಪಾದಕರನ್ನು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಧೆ ಪತ್ತೆಹಚ್ಚಿ ಅವರ ಸ್ಧಳಗಳ ಕುರಿತು ಭಾರತ ಖಚಿತ ಮಾಹಿತಿ ನೀಡಿದ್ದೇ ಭಾರತೀಯ ರಕ್ಷಣಾ ಪಡೆಗಳ ಯಶಸ್ಸಿಗೆ ಕಾರಣ.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸುವುದರಿಂದ ಭಯೋತ್ಪಾಕರನ್ನು ಪತ್ತೆಹಚ್ಚುವಲ್ಲಿ ಪಕ್ಕಾ ಇರುತ್ತದೆ,NTRO   ಅನ್ನು ಭಾರತದ ಕಣ್ಣು ಮತ್ತು ಕಿವಿಗಳು ಎಂದೇ ಕರೆಯಲಾಗುತ್ತದೆ, 

NTRO ನೀಡಿದ ಮಾಹಿತಿ ಆಧರಿಸಿ ಭಾರತವು ಪಾಕಿಸ್ತಾನದೊಳಗಿನ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸುವ ಮೂಲಕ ಬಲವಾದ ಮತ್ತು ಸ್ಪಷ್ಟವಾದ ಸಂದೇಶವನ್ನು ರವಾನಿಸಲು ಸಾಧ್ಯವಾಗಿದೆ, 

ಈ ಕ್ರಮದೊಂದಿಗೆ ಭಾರತವು ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ..

Post a Comment

0Comments

Post a Comment (0)