ಬೆಂಗಳೂರು : ಶ್ರೀ ನರಸಿಂಹಸ್ವಾಮಿ ಜಯಂತೋತ್ಸವದ ಪ್ರಯುಕ್ತ ತ್ಯಾಗರಾಜನಗರದ 3ನೇ ಬ್ಲಾಕ್ ನಲ್ಲಿರುವ ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೇ 8 ರಂದು ಏರ್ಪಡಿಸಲಾಗಿತ್ತು.
ಈ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು|| ದಿವ್ಯಶ್ರೀ ರಂಗನಾಥನ್ ಸ್ಯಾಕ್ಸೋಫೋನ್ ವಾದನ ನುಡಿಸಿದರು. ಸಹವಾದ್ಯದಲ್ಲಿ ಶ್ರೀ ಶಶಿಧರ್ (ಪಿಟೀಲು), ಶ್ರೀ ಕಾರ್ತೀಕ್ ಪ್ರಣವ್ (ಮೃದಂಗ) ಸಾಥ್ ನೀಡಿದರು.