ಕು|| ಧನ್ಯಶ್ರೀ ಭರತನಾಟ್ಯ ರಂಗ ಪ್ರವೇಶ

varthajala
0

 ಬೆಂಗಳೂರು : ನಗರದ ಪ್ರತಿಷ್ಠಿತ ನೃತ್ಯ ಸಂಸ್ಥೆಯಾದ *ಕಲಾಮಾಯೆ ನೃತ್ಯ ಶಾಲೆಯ ಗುರು  ವಿದುಷಿ ಲತಾ ಕೆ ಶಂಕರ್ ಅವರ ಗರಡಿಯಲ್ಲಿ ನೃತ್ಯಭ್ಯಾಸ ಮಾಡುತ್ತಿರುವ ಉದಯೋನ್ಮುಖ ನೃತ್ಯ ಕಲಾವಿದೆ ಕು|| ಎ.ಡಿ. ಧನ್ಯಶ್ರೀ ಅವರ ರಂಗ ಪ್ರವೇಶ ಕಾರ್ಯಕ್ರಮವು ದಿನಾಂಕ ಮೇ 4 ರಂದು ಭಾನುವಾರ ಸಂಜೆ 4:00ಕ್ಕೆ ಜೆಸಿ ರಸ್ತೆಯಲ್ಲಿರುವ ಎ ಡಿ ಎ ರಂಗಮಂದಿರದಲ್ಲಿ ನಡೆಯಲಿದೆ. 


ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾದ ಡಾ.ವಿದ್ಯಾ ರಾವ್ (ಡ್ಯಾನ್ಸ್ ರಿಸರ್ಚ್ ಸ್ಕಾಲರ್), ಯೋಗ ನಿಧಿ ಡಾ|| ಲತಾ ಶೇಖರ್ (ಯೋಗ ಥೆರಫಿಸ್ಟ್), ಡಾ||ಜೋಗಿಲ ಸಿದ್ದರಾಜು, {ಅಂತರಾಷ್ಟ್ರೀಯ ಜಾನಪದ ಗಾಯಕರು, ಜಾನಪದ ವಿದ್ವಾಂಸರು} ಹಾಗೂ ಶ್ರೀಮತಿ ಸುಮನ ಎಸ್. ಕೆ. {ಕನ್ನಡ ವಿದ್ವಾಂಸರು ಮತ್ತು ಬರಹಗಾರರು ಆಗಮಿಸುತ್ತಿದ್ದಾರೆ.

Post a Comment

0Comments

Post a Comment (0)