ಶಿಡ್ಲಘಟ್ಟ : ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಹೆಚ್ಚು ವಿದ್ಯಾವಂತರಾಗಿರುತ್ತಾರೆ. ನಾವು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ನಮಗೆ ಅವರಿಗಿಂತ ಕಡಿಮೆ ವಿದ್ಯಾಭ್ಯಾಸ ಎಂದು ಯಾವತ್ತೂ ಹೋಲಿಕೆ ಮಾಡಿಕೊಳ್ಳಬಾರದು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳೆ ಅನೇಕ ಸರ್ಕಾರಿ ಹುದ್ದೆಗಳನ್ನು ಪಡೆದು ಉನ್ನತ ಸ್ಥಾನದಲ್ಲಿ ಇರುತ್ತಾರೆ ಎಂದು ಬೀರಪ್ಪನಹಳ್ಳಿಯ ಹಳೆಯ ವಿದ್ಯಾರ್ಥಿ ನಾಗೇಶ್ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ವೈ ಹುಣಸೇನಹಳ್ಳಿ ಗೇಟ್ ಬಳಿ ಇರುವ ಕದಿರಿನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬೀರಪ್ಪನಹಳ್ಳಿಯ ಹಳೆಯ ವಿದ್ಯಾರ್ಥಿ ನಾಗೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಲೇಖನ ಸಾಮಗ್ರಿ ವಿತರಸಿ ಮಾತನಾಡಿದರು.
ಇಂದಿನ ಮಕ್ಕಳು ದೃಢಸಂಕಲ್ಪ ಮಾಡಿ ನಿಖರವಾದ ಗುರಿಯನ್ನು ಹೊಂದಿ ವಿದ್ಯೆಯನ್ನು ಕಲಿಯಲೇ ಬೇಕೆಂಬ ಛಲವನ್ನ ಹೊಂದಿದ್ದರೆ ನಾವು ಎಲ್ಲಿ ಓದಿದರೂ ನಮ್ಮ ಛಲವನ್ನ ಸಾಧಿಸುವತ್ತ ಗಮನ ಹರಿಸಬೇಕು. ಇವತ್ತು ನಾನು ಈ ಹಂತಕ್ಕೆ ಬೆಳೆ ಬೇಕಾದರೆ ನನ್ನ ಕುಟುಂಬ ತೀರ ಬಡತನದಲ್ಲಿತ್ತು ಅಂದು ನಾನು ಸುಮಾರು ಮೂರು ಕಿಲೋಮೀಟರ್ ದೂರ ನಡೆದುಕೊಂಡು ಶಾಲೆಗೆ ಬರುತ್ತಿದ್ದೆ ಮತ್ತು ಹೋಗುತ್ತಿದ್ದೆ. ನನ್ನ ಬಡತನವನ್ನು ಮೆಟ್ಟಿ ನಿಂತು ನನ್ನ ಗುರಿಯನ್ನು ತಲುಪಿದ್ದೇನೆ.
ನಾನು ಒಂದನೇ ತರಗತಿಯಿಂದ ನಾಟಕೋತರ ಪದವಿಯವರೆಗೂ ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದು ಇಂದು ಸಾಫ್ಟ್ ವೇರ್ ಇಂಜಿನಿಯರಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ ನಾನು ಸುಮಾರು ದೇಶಗಳ ಜನರ ಸಂಪರ್ಕವನ್ನು ಪಡೆದು ಸಾಫ್ಟ್ ವೇರ್ ಇಂಜಿನಿಯರಿಂಗ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ ಅದೇ ರೀತಿ ಮುಂದಿನ ದಿನಗಳಲ್ಲಿ ನೀವು ಸಹ ನಿಮ್ಮ ಆಲೋಚನಾ ಶಕ್ತಿಯನ್ನು ಬಳಸಿಕೊಂಡು ನಿಮ್ಮ ಏಕಾಗ್ರತೆಯನ್ನ ಗ್ರಹಿಸಿ ಉನ್ನತ ಮಟ್ಟದ ಹುದ್ದೆಯನ್ನು ಅಲಂಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕಿ ಹಂಸವೇಣಿ ಮಾತನಾಡಿ, ನಮ್ಮೂರಿನ ಶಾಲೆಯ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಸಹಾಯ ಮಾಡುವ ಉದ್ದೇಶದಿಂದ ಹಳೇ ವಿದ್ಯಾರ್ಥಿ ನಾಗೇಶ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪುಸ್ತಕ, ಇತರ ಓದಿನ ಪರಿಕರಗಳನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ. ಮಕ್ಕಳು ಇದನ್ನು ಬಳಸಿಕೊಂಡು ಚೆನ್ನಾಗಿ ಓದಿ ಸಾಧನೆ ಮಾಡಬೇಕು. ನಂತರ, ತಾವೂ ಮುಂದೆ ಬಡ ಮಕ್ಕಳ ಓದಿಗೆ ಸಹಾಯ ಮಾಡಬೇಕೆಂದು ಕಿವಿಮಾತು ಹೇಳಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ನಾಗೇಶ್ ಹಾಗೂ ಅವರ ತಾಯಿ ರುಕ್ಮಿಣಿಯಮ್ಮ ಲೇಖನ ಸಾಮಗ್ರಿ ಹಾಗೂ ಸಿಹಿ ಹಂಚಿದರು. ಈ ಸಂದರ್ಭದಲ್ಲಿ ನಾಗೇಶ್ ಅವರ ತಾಯಿ ರುಕ್ಮಿಣಿಯಮ್ಮ, ಶಿಕ್ಷಕಿಯರಾದ ಕುಸುಮ,ಮಾಲಾಶ್ರೀ,ಗಾಯತ್ರಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಶಿಡ್ಲಘಟ್ಟ