ಡಾ. ಎಸ್. ಕೆ. ಕರೀಂಖಾನ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ : ಜಾಣಗೆರೆ ವೆಂಕಟರಾಮಯ್ಯ

varthajala
0

 ಜಾನಪದ ಕಲೆ, ಸಾಹಿತ್ಯ ಕ್ಷೀಣಿಸುತ್ತಿದ್ದ ಕಾಲದಲ್ಲಿ ಅದರ ಉಳಿವಿಗಾಗಿ ಶ್ರಮಿಸಿದವರು ಡಾ. ಎಸ್. ಕೆ. ಕರೀಂಖಾನ್. ಎಲ್ಲಾ ಸಾಹಿತ್ಯಕ್ಕೆ ಮೂಲ ಬೇರು ಜನಪದ ಸಾಹಿತ್ಯ. ಜನಪದ ಗೀತೆಗಳು ಸಿನಿಮಾ ಹಾಡುಗಳನ್ನು ಕನ್ನಡ ಮಾತೃಭಾಷೆಯವರನ್ನು ಮೀರಿಸುವಷ್ಟು ಮಟ್ಟಿಗೆ ಕನ್ನಡ ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಜನಪದ ಸಾಹಿತ್ಯಕ್ಕೆ, ಜನಪದ ಕಲೆಗೆ ಗೌರವ ತಂದುಕೊಟ್ಟಿದ್ದಾರೆ. ಸಾಗರ ತಾಲ್ಲೂಕಿನಲ್ಲಿ 5000 ಅಡಿ ಎತ್ತರದಲ್ಲಿರುವ ಮೆಗಾಲೆ ಎಂಬ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ಮಾಡಿ ಅಲ್ಲಿನ ಸಂಸ್ಕøತಿಯ ಬಗ್ಗೆ ಚಿತ್ರೀಕರಣ ಮಾಡಿದ್ದಾರೆ. ಅಜನ್ಮ ಬ್ರಹ್ಮಚಾರಿಯಾಗಿದ್ದ ಅವರು ಜಾನಪದ ಜಂಗಮ, ಅವರ ಕೊಡುಗೆ ನಾಡಿಗೆ ಅಪಾರವೆಂದು ಸ್ಮರಿಸಿದರು. ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಊರೂರು ಸುತ್ತಿ ಜನಪದ ಕಲೆಗಳ ಸಂಗ್ರಹ ಮಾಡಿ, ಜನಪದ ಸಾಹಿತ್ಯ ರಚನೆ, ಗೀತೆ ರಚನೆ, ಜಾನಪದ ಕಲೆ ರಕ್ಷಣೆ ಮಾಡಿರುವ ಇವರ ಹೆಸರಿನಲ್ಲಿ ಸರ್ಕಾರ ಜಾನಪದ ಕಲೆ, ಸಾಹಿತ್ಯ, ಸಂಸ್ಕøತಿಗೆ ದುಡಿದವರಿಗೆ ಪ್ರಶಸ್ತಿ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಈ ಬಗ್ಗೆ ಸಾಹಿತಿಗಳ ನಿಯೋಗವೊಂದನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯೋಣವೆಂದರು.

ಆಶಯ ನುಡಿಗಳನ್ನಾಡಿದ ಲೇಖಕ ರಾ.ನಂ. ಚಂದ್ರಶೇಖರ, ಡಾ. ಎಸ್. ಕೆ. ಕರೀಂಖಾನ್ ಸ್ವಾತಂತ್ರ್ಯ ಹೋರಾಟ ಹಾಗೂ ಏಕೀಕರಣ ಚಳವಳಿಯಲ್ಲಿ ಮಾಡಿದ ಕೆಲಸ ದೊಡ್ಡದು. ಅವರು ನಿಜ ಅರ್ಥದಲ್ಲಿ ತ್ಯಾಗಿಗಳೆಂದರು. ಅಪಾರವಾದ ಪ್ರತಿಭೆಯಿದ್ದರು ಅವರಿಗೆ ಸಿಗಬೇಕಾದ ಗೌರವ, ಸ್ಥಾನಮಾನಗಳು ಸಿಗಲಿಲ್ಲೆಂದು ನೊಂದು ನುಡಿದರು. ಅವರೊಬ್ಬ ಮಹಾ ಸ್ವಾಭಿಮಾನಿಗಳೆಂದರು. ಅಜ್ಞಾತ ಕವಿಗಳ ನೂರಾರು ಹಾಡುಗಳು ನಾಶವಾಗಬಾರದೆಂದು ಅವುಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸುಮಾರು 8 ಸಾವಿರ ಕಿ.ಮೀ. ಸುತ್ತಿ ಜಾನಪದ ಪ್ರದರ್ಶನ ಕಲೆಗಳ ಕುರಿತಾದ 240 ಗಂಟೆಗಳ ಅವಧಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಅವರು ಮಾತನಾಡಿ ಇಸ್ಲಾಂ ಧರ್ಮದವರಾಗಿ, ಉರ್ದು ಮನೆ ಮಾತಾಗಿದ್ದರೂ ಕನ್ನಡ ಮತ್ತು ಸಂಸ್ಕøತವನ್ನು ಅಧ್ಯಯನ ಮಾಡಿದ್ದರು. ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರೂ ಜಾನಪದ, ಭಗವದ್ಗೀತೆ, ಭಾಗವತ, ಶಿವಪುರಾಣಗಳ ಚಾರಿತ್ರಿಕ ಸಂಗತಿಗಳನ್ನು ನಿಂತಲ್ಲಿಯೇ ಹೇಳುವಷ್ಟು ಪ್ರತಿಭಾವಂತರಾಗಿದ್ದರು. 

ಕವಿ ಸಿದ್ಧಯ್ಯ ಪುರಾಣಿಕರ ಪ್ರೇರಣೆಯಿಂದ ಬಳ್ಳಾರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಬಿ. ಶಿವಮೂರ್ತಿ ಶಾಸ್ತ್ರಿಗಳ ಜೊತೆಗೆ ಕೊಡಗು, ಚಾಮರಾಜನಗರ ಹಾಗೂ ಗಡಿ ಪ್ರದೇಶಗಳಲ್ಲಿ  ಪ್ರವಾಸ ಮಾಡಿ ಕರ್ನಾಟಕ ಏಕೀಕರಣದ ಮಹತ್ವವನ್ನು ಕನ್ನಡ ಜನತೆಗೆ ಮನವರಿಕೆ ಮಾಡಿಕೊಟ್ಟರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಏಳು ಸಾರಿ ಬಂಧನಕ್ಕೊಳಗಾಗಿದ್ದಾರೆ. ಇವರೊಬ್ಬ ಕನ್ನಡದ ಸಂತ ಎಂದರು.

ಈ ಸಂದರ್ಭದಲ್ಲಿ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ನಾಡೋಜ ಡಾ. ಮನು ಬಳಿಗಾರ್ ಕರೀಂಖಾನ್ ಕುಟುಂಬಸ್ಥರು, ಇತರರು ಉಪಸ್ಥಿತರಿದ್ದರು.

VK DIGITAL NEWS:ಧರ್ಮಸ್ಥಳ ಪ್ರಕರಣ: ಮೃತದೇಹಗಳನ್ನು ಹೂತಿಟ್ಟ ಜಾಗ ತೋರಿಸಿದ ಸಾಕ್ಷಿ ದೂರುದಾರ





Post a Comment

0Comments

Post a Comment (0)