ಅರಮನೆ ಮೈದಾನ ಪ್ರಿನ್ಸಸ್ ಶೀರಿನ್ ನಲ್ಲಿ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ವತಿಯಿಂದ 30ನೇ ಸಿಗಾಫೇರ್ ಬಿ ಟು ಬಿ ಗಾರ್ಮೆಂಟ್ಸ್ ಸಿದ್ದ ಉಡುಪುಗಳ ಪ್ರದರ್ಶನ ಮಾರಾಟ ಮೇಳ ಮೂರುದಿನಗಳ ಕಾಲ ಜರುಗಲಿದೆ.
ಎಫ್.ಕೆ.ಸಿ.ಸಿ.ಐ. ಅಧ್ಯಕ್ಷರಾದ ಎಂ.ಜಿ.ಬಾಲಕೃಷ್ಣರವರು ಮತ್ತು ನಿರ್ದೇಶಕರಾದ ರಾಜ್ ಪುರೋಹಿತ್, ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯನ್ ಅನುರಾಗ್ ಸಿಂಗ್ಲಾ, ಉಪಾಧ್ಯಕ್ಷ ನರೇಶ್ ಲಕನ್ ಪಾಲ್, ಕಾರ್ಯದರ್ಶಿ ರಾಜೇಶ್ ಚಾವತ್, ಖಜಾಂಚಿ ತೇಜಸ್ ಮೆಹ್ತಾ, ಗೋವಿಂದ ಮುಂದ್ರ, ನಿರ್ದೇಶಕ ರಾಜ್ ಟೇಕಡಿಪಾಲ್ ರವರು ದೀಪ ಬೆಳಗಿಸಿ ಉದ್ಘಾಟನೆ ನೇರವೆರಿಸಿದರು.
ಎಫ್ ಕೆ.ಸಿ.ಸಿ.ಐ. ಅಧ್ಯಕ್ಷರಾದ ಎಂ.ಜಿ.ಬಾಲಕೃಷ್ಣ ರವರು ಮಾತನಾಡಿ ಸೌತ್ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ವತಿಯಿಂದ 30ವರ್ಷದಿಂದ ಏಕ್ಸಪೋ ನಡೆಯುತ್ತಿದೆ, ರಾಜ್ಯ ಮತ್ತು ರಾಷ್ಟ್ರಗಳಿಂದ ಗಾರ್ಮೆಂಟ್ಸ್ ಉದ್ಯಮದವರು ತಮ್ಮ ಸಿದ್ದ ಉಡುಪುಗಳ ಪ್ರದರ್ಶನ ಮೇಳದಲ್ಲಿ ಭಾಗವಹಿಸಿ , ತಮ್ಮ ಸಂಸ್ಥೆ ಬಟ್ಟೆಗಳ ಪ್ರದರ್ಶನ ಮಾರಾಟ ಮಾಡಲಿದ್ದಾರೆ.
ರಾಜ್ಯದಲ್ಲಿ ಗಾರ್ಮೆಂಟ್ಸ್ ಉದ್ಯಮ ಹೆಚ್ಚು ವೇಗವಾಗಿ ಬೆಳಯುತ್ತಿದೆ ಸಿಗಾಫೇರ್ ನಿಂದ ಮಾರಾಟಗಾರರು, ಖರೀದಿಗಾರರಿಗೆ ಅನುಕೂಲವಾಗಲಿದೆ. ಗಾಮೆಂಟ್ಸ್ ಉದ್ಯಮದಲ್ಲಿ ಉತ್ತಮ ಭವಿಷ್ಯವಿದೆ.
ಎಫ್ ಕೆ.ಸಿಸಿಐ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರ ಗಾಮೆಂಟ್ಸ್ ಉದ್ಯಮಕ್ಕೆ ಸಹಕಾರ ನೀಡುತ್ತಿದೆ, ವಿದೇಶಗಳಿಗೆ ರಾಜ್ಯದ ಸಿದ್ದ ಉಡುಪುಗಳು ಹೊರ ದೇಶಗಳಿಗೆ ರಫ್ತು ಆಗುವುದರಿಂದ ಹೆಚ್ಚಿನ ತೆರಿಗೆ ಸಿಗುತ್ತದೆ. ರಾಜ್ಯದಲ್ಲಿ ಗಾಮೆಂಟ್ಸ್ ಉದ್ಯಮ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಲಭಿಸಿದೆ ಎಂದು ಹೇಳಿದರು.
ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಅನುರಾಗ್ ಸಿಂಗ್ಲಾರವರು ಮಾತನಾಡಿ ಇಂದು ಗಾರ್ಮೆಂಟ್ಸ್ ಉದ್ಯಮ ದಕ್ಷಿಣ ಭಾರತದಲ್ಲಿ ಮತ್ತು ಬೆಂಗಳೂರಿನಲ್ಲಿ ಅತಿವೇಗವಾಗಿ ಬೆಳದಿದೆ. ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ವತಿಯಿಂದ ಮೂರು ದಿನಗಳ ಕಾಲ ಸಿದ್ದ ಉಡುಪುಗಳ ಪ್ರದರ್ಶನ, ಮಾರಾಟ ಮಳಿಗೆಗಳು ಮೇಳದಲ್ಲಿ ಇರಲಿದೆ. ಪ್ರಖ್ಯಾತ ನೂರಾರು ಗಾರ್ಮೆಂಟ್ಸ್ ಬ್ರಾಂಡೆಡ್ ಸಂಸ್ಥೆಯ ಉದ್ಯಮಿಗಳು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ., 100ಕ್ಕೂ ಹೆಚ್ಚು ಮಳಿಗೆಗಳು ಇರಲಿದೆ. ಹೋಲ್ ಸೇಲ್ ಮತ್ತು ರೀಟೇಲ್ ಮಾರಾಟಗಾರರಿಗೆ ಸುರ್ವಣ ಅವಕಾಶವಾಗಲಿದೆ.
ಬೆಂಗಳೂರುನಗರ ಗಾರ್ಮೆಂಟ್ಸ್ ಉದ್ಯಮ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಗಾರ್ಮೆಂಟ್ಸ್ ಉದ್ಯಮ ಆರಂಭಿಸಲು ಮತ್ತು ಸಿದ್ದ ಉಡುಪುಗಳು ನವನವೀನ ಶೈಲಿಗಳು ಫ್ಯಾಶನ್ ಶೋ ಸಹ ಏರ್ಪಡಿಸಲಾಗಿದೆ.
ಕಳೆದ ಬಾರಿ ಸಿಗಾಫೇರ್ ನಿಂದ ನೂರಾರು ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ ಮತ್ತು ಈ ಬಾರಿ ಸಾವಿರಾರು ಗಾ್ಮೆಂಟ್ಸ್ ಉದ್ಯಮದಲ್ಲಿ ಇರುವವರು ಭೇಟಿ ನೀಡಲಿದ್ದಾರೆ. ಇದರಿಂದ ಗಾರ್ಮೆಂಟ್ಸ್ ನಿಂದ ನೇರ ಮಾರಾಟಗಾರರಿಗೆ ಸಿದ್ದ ಉಡುಪುಗಳು ದೊರಕಲಿದೆ ಎಂದು ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಅನುರಾಗ್ ಸಿಂಗ್ಲಾರವರು ಹೇಳಿದರು.