ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2025-26 ನೇ ಶೈಕ್ಷಣಿಕ ಸಾಲಿನ ಒಂದು ವರ್ಷದ ಕೃಷಿ ಪರಿಕರಗಳ ವಿಸ್ತರಣಾ ಸೇವೆ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಬಯಸುವವರು 20 ವರ್ಷದ ಮೇಲ್ಪಟ್ಟ ಎಸ್.ಎಸ್.ಎಲ್.ಸಿ ಪಾಸಾದವರು 2025ರ ಆಗಸ್ಟ್ 14 ರೊಳಗೆ ವಿಸ್ತರಣಾ ನಿರ್ದೇಶಕರು, ಕೆÀಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಕಛೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು.
ಈ ಡಿಪ್ಲೋಮಾ 2 ಸೆಮಿಸ್ಟರ್‍ಗಳ ಕೋರ್ಸ್ ಆಗಿದ್ದು 20 ಸಾವಿರ ರೂ. ಶುಲ್ಕವಿರುತ್ತದೆ. ವಿಶ್ವವಿದ್ಯಾಲಯದ ವೆಬ್‍ಸೈಟ್ www.uahs.edu.in ನಿಂದ ಅರ್ಜಿ ಪಡೆದು, ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ The Comptroller, KSNUAHS, Iruvakki, Shivamogga-577412 payabale at Shivamogga ಇವರ ಹೆಸರಿನಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 200/- ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳು ರೂ. 100/- ಗಳ ಡಿಡಿ ಜೊತೆಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.