ಉದ್ಯೋಗದಾತರಿಗೆ SPREE 2025 ಮತ್ತು ELI ಯೋಜನೆಗಳ ಜಾಗೃತಿ ಕಾರ್ಯಕ್ರಮ

varthajala
0

ಕಾರ್ಮಿಕರ ರಾಜ್ಯ ವಿಮಾ ನಿಗಮ, ಉಪ ಪ್ರಾದೇಶಿಕ ಕಛೇರಿ, ಬೊಮ್ಮಸಂದ್ರದಲ್ಲಿ ಇತ್ತೀಚೆಗೆ SPREE ಮತ್ತು ELI ಯೋಜನೆಗಳ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಂಟಿ ನಿರ್ದೇಶಕರಾದ ಶ್ರೀಮತಿ ಕಣಿತ ಸೆಲ್ವಿ ಮಾತನಾಡಿ, ಈ ಯೋಜನೆಯಡಿ ಗುತ್ತಿಗೆ ಮತ್ತು ತಾತ್ಕಾಲಿಕ ಕಾರ್ಮಿಕರು ಸೇರಿದಂತೆ ಇಎಸ್‍ಐ ಕಾಯ್ದೆ ಅಡಿಯಲ್ಲಿ ಅರ್ಹತೆ ಇದ್ದು ಇನ್ನೂ ನೋಂದಣಿಯಾಗದ ಉದ್ಯೋಗದಾತರು ಮತ್ತು ಉದ್ಯೋಗಿಗಳು ಯಾವುದೇ ಪರಿಶೀಲನೆ ಅಥವಾ ಹಿಂದಿನ ಅವಧಿಯ ಬಾಕಿ ಬೇಡಿಕೆ ಇಲ್ಲದೆ ನೋಂದಾಯಿಸಿಕೊಳ್ಳಲು ಇದೇ 2025 ರ ಡಿಸೆಂಬರ್ 31 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

 10 ಮತ್ತು ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಉದ್ಯೋಗದಾತರು ತಮ್ಮ ಕಾರ್ಖಾನೆ ಮತ್ತು ಘಟಕಗಳು (ಅಂಗಡಿಗಳು, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು, ಸಿನಿಮಾ ಹಾಲ್, ರಸ್ತೆ ಸಾರಿಗೆ ಘಟಕಗಳು, ವಾರ್ತಾ ಪತ್ರಿಕಾ ಘಟಕ, ಖಾಸಗಿ ವೈದ್ಯಕೀಯ ಸಂಸ್ಥೆಗಳು, ವಿದ್ಯಾಸಂಸ್ಥೆ, ಮುನ್ಸಿಪಲ್, ಕಾರ್ಪೋರೇಷನ್‍ಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಕಾರ್ಮಿಕರು, ನೋಂದಾಯಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ. ಅಲ್ಲದೇ ತಾತ್ಕಾಲಿಕ ಸಾಂದರ್ಭಿಕ ಗುತ್ತಿಗೆ ಕಾರ್ಮಿಕರು) ಒಳಗೊಂಡಂತೆ ತಮ್ಮಲ್ಲಿ ಕಾರ್ಯನಿರ್ವಹಿಸುವ ಅರ್ಹ ಕಾರ್ಮಿಕರನ್ನು ನೋಂದಾಯಿಸಿಕೊಳ್ಳಬಹುದು.

ಈ ಯೋಜನೆಯಡಿ ಉದ್ಯೋಗದಾತರಿಗೆ ತಮ್ಮ ಹಿಂದಿನ ಅವಧಿಯ ಯಾವುದೇ ದಾಖಲೆಗಳ ಪರಿಶೀಲನೆ, ಪಾವತಿಯ ಬೇಡಿಕೆಗಳು ಇರುವುದಿಲ್ಲ. ಹಿಂದಿನ ವಂತಿಕೆ ಪಾವತಿಯ ಬಾದ್ಯತೆ ಇರುವುದಿಲ್ಲ. ನೋಂದಣಿಯಾದ ಕಾರ್ಮಿಕರು ತಮಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ವೈದ್ಯಕೀಯ ಆರೈಕೆ ಜೊತೆಗೆ ಅನಾರೋಗ್ಯ, ಪ್ರಸವ, ಅಪಘಾತ, ಉದ್ಯೋಗಕ್ಕೆ ಸಂಬಂಧಿಸಿದ ಮರಣಕ್ಕೆ ನಗದು ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ವಿಶೇಷ ನೋಂದಣಿ ಅಭಿಯಾನ – SPREE 2025, ಕ್ಷಮಾದಾನ ಯೋಜನೆ 2025, ಪ್ರಧಾನಮಂತ್ರಿ ಅಭಿವೃದ್ಧಿ ಭಾರತ ಉದ್ಯೋಗ ಯೋಜನೆ (ELI ಯೋಜನೆ) 2025 ಸೇರಿದಂತೆ ಪ್ರತಿ ಯೋಜನೆಯ ಉಪಯೋಗಗಳ ಬಗ್ಗೆ ಉದ್ಯೋಗದಾತರಿಗೆ, ಸೌಲಭ್ಯಗಳು ಮತ್ತು ಅನುಸರಣೆ ಅಗತ್ಯತೆಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಯಿತು. ಕಾರ್ಯಕ್ರಮವು ಸಂವಾದಾತ್ಮಕ ಆಗಿದ್ದು, ಉದ್ಯೋಗದಾತರಿಂದ ಬಂದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳು ಮತ್ತು ಯೋಜನೆಗಳ ಬಗ್ಗೆ ವಿವರವಾದ ವಿವರಣೆ ನೀಡಲಾಯಿತು.

ಯೋಜನೆಗಳ ಪ್ರಮುಖ ಅಂಶಗಳು:

SPREE 2025 ಯೋಜನೆಯಡಿಯಲ್ಲಿ, ಉದ್ಯೋಗದಾತರು 2025ರ ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಯಾವುದೇ ಹಿಂದಿನ ಬಾಕಿ ವಸೂಲಿ ಕ್ರಮಗಳ ಭಯವಿಲ್ಲದೇ ತಮ್ಮನ್ನು ಇಎಸ್‍ಐ ಕಾಯ್ದೆಯ ಅಡಿಯಲ್ಲಿ ನೋಂದಾಯಿಸಬಹುದು.

ಅಮ್ನೆಸ್ಟಿ ಯೋಜನೆ 2025 ಅಕ್ಟೋಬರ್ 1 ರಿಂದ ಪ್ರಾರಂಭವಾಗಿ ಒಂದು ವರ್ಷದ ಅವಧಿ ಇರುತ್ತದೆ, ಮೊಕದ್ದಮೆಗಳನ್ನು ಕಡಿಮೆ ಮಾಡುವುದು ಮತ್ತು ಇಎಸ್‍ಐ ಕಾಯ್ದೆಯಡಿ ಅನುಸರಣೆ ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ಪ್ರಧಾನಮಂತ್ರಿ ಅಭಿವೃದ್ಧಿ ಭಾರತ ಉದ್ಯೋಗ ಯೋಜನೆ (ELI  ಯೋಜನೆ) 2025 ಆಗಸ್ಟ್ 1ರಿಂದ ಎರಡು ವರ್ಷಗಳವರೆಗೆ ಇರುತ್ತದೆ, ಇದರ ಉದ್ದೇಶ 3.5 ಕೋಟಿಗಿಂತ ಹೆಚ್ಚು ಉದ್ಯೋಗ ಸೃಷ್ಟಿ ಆಗಿದೆ. ಈ ಜಾಗೃತಿ ಕಾರ್ಯಕ್ರಮದ ಮುಖ್ಯ ಉದ್ದೇಶ ಉದ್ಯೋಗದಾತರ ಹೆಚ್ಚಿನ ಪಾಲ್ಗೊಳ್ಳುವಿಕೆ ಹಾಗೂ ನೋಂದಣಿ ಮತ್ತು ಅನುಸರಣೆ ಮೂಲಕ ಅರ್ಹ ಫಲಾನುಭವಿಗಳಿಗೆ ಇಎಸ್‍ಐ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವುದು ಆಗಿದೆ.

SPREE / ಅಮ್ನೆಸ್ಟಿ /ELI ಯೋಜನೆ ಕುರಿತು ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26786391 ಹಾಗೂ ಜಾಲತಾಣ Sro-bommasandra@esic.nic.in ಗೆ ಸಂಪರ್ಕಿಸಬಹುದು.

ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಸಂಜೀವ್ ಕುಮಾರ್, ಹಾಗೂ ಹೆಚ್ ಎ ಎಲ್ ಶಾಖಾ ವ್ಯವಸ್ಥಾಪಕ ವಿಶ್ವನಾಥ್ ಕೆ.ಎಸ್ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

VK DIGITAL NEWS: 

ಉದ್ಯೋಗದಾತರಿಗೆ SPREE 2025 ಮತ್ತು ELI ಯೋಜನೆಗಳ ಜಾಗೃತಿ ಕಾರ್ಯಕ್ರಮ


































Post a Comment

0Comments

Post a Comment (0)