ತೋಟಗಾರಿಕಾ ಮೇಳ – 2025ನೇ ಸಾಲಿನ ಶ್ರೇಷ್ಠ ತೋಟಗಾರಿಕಾ ರೈತ ಮತ್ತು ರೈತ ಮಹಿಳೆಯರ ಆಯ್ಕೆಗೆ ಅರ್ಜಿ ಅಹ್ವಾನ

varthajala
0

 ಬೆಂಗಳೂರು, ಅಕ್ಟೋಬರ್ 17, (ಕರ್ನಾಟಕ ವಾರ್ತೆ): ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ 2025ನೇ ಡಿಸೆಂಬರ್ 21 ರಿಂದ 23 ರ ವರೆಗೆ “ಮೌಲವರ್ಧನೆ ಮತ್ತು ರಫ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ” ಎಂಬ ಧ್ಯೇಯದೊಂದಿಗೆ ತೋಟಗಾರಿಕಾ ಮೇಳವನ್ನು ವಿಶ್ವವಿದ್ಯಾಲಯದ ಮುಖ್ಯ ಅವರಣದಲ್ಲಿ ಹಮ್ಮಿಕೊಳ್ಳಲಾಗಿದೆ.


ತೋಟಗಾರಿಕಾ ಮೇಳದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ರಾಜ್ಯದ 24 ಜಿಲ್ಲೆಗಳಿಗೆ, ಪ್ರತಿ ಜಿಲ್ಲೆಗೆ ಒಬ್ಬರಂತೆ ಶ್ರೇಷ್ಠ ತೋಟಗಾರಿಕಾ ರೈತ ಮತ್ತು ರೈತ ಮಹಿಳೆಯರನ್ನು ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಯಸುವ ರೈತ ಮತ್ತು ರೈತ ಮಹಿಳೆಯರು ಅರ್ಜಿ ನಮೂನೆಯನ್ನು ಬೀದರ್ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಡೀನ್, ತೋಟಗಾರಿಕಾ ಮಹಾವಿದ್ಯಾಲಯ, ಹಳ್ಳದಕೇರಿ ಫಾರ್ಮಾ, ಹೈದ್ರಾಬಾದ್ ರಸ್ತೆ, ಬೀದರ್ – 585 403, ದೂರವಾಣಿ ಸಂ. 08482-225792, ಮೊಬೈಲ್ ಸಂಖ್ಯೆ, 9480696385 ಅಥವಾ ಇ-ಮೇಲ್ dean.cohbidar@uhsbagalkot.edu.in, ಬಾಗಲಕೋಟೆ ಜಿಲ್ಲೆಯವರು ಡೀನ್, ತೋಟಗಾರಿಕಾ ಮಹಾವಿದ್ಯಾಲಯ ಉದ್ಯಾನಗರಿ, ಬಾಗಲಕೋಟೆ – 587 103, ದೂರವಾಣಿ ಸಂ. 08354 - 230601, ಮೊಬೈಲ್ ಸಂಖ್ಯೆ, 9449872876 ಅಥವಾ ಇ-ಮೇಲ್ dean.cohbagalkot@uhsbagalkot.edu.in, ವಿಜಯಪುರ ಜಿಲ್ಲೆಯವರು ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತಿಡಗುಂದಿ - 586 119À ಜಿಲ್ಲಾ ವಿಜಯಪುರ ಮೊಬೈಲ್ ಸಂ 9480696390 ಅಥವಾ ಇ-ಮೇಲ್ hrec.tidagundi@uhsbagalkot.edu.in,  ಬೆಳಗಾವಿ ಜಿಲ್ಲೆಯವರು ಡೀನ್ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕಾ ಮಹಾ ವಿದ್ಯಾಲಯ, ಅರಭಾವಿ - 591 130 ತಾ: ಗೋಕಾಕ, ಜಿಲ್ಲೆ ಬೆಳಗಾವಿ ದೂರವಾಣಿ ಸಂ. 08332-220701, ಮೊಬೈಲ್ ದೂರವಾಣಿ 9449872860  ಅಥವಾ ಇ-ಮೇಲ್ dean.coharabhavi@uhsbagalkot.edu.in, ಧಾರವಾಡ ಮತ್ತು ಗದಗ ಜಿಲ್ಲೆಯವರು ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರು, ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಪಿ.ಬಿ ರಸ್ತೆ, ಕುಂಬಾಪೂರ – 580 005 ಜಿಲ್ಲೆ ಧಾರವಾಡ ದೂರವಾಣಿ ಸಂ. 0836-2000381, ಮೊಬೈಲ್ ದೂರವಾಣಿ ಸಂ. 9449872863 ಅಥವಾ ಇ-ಮೇಲ್ adredharwad@uhsbagalkot.edu.in, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎಆರ್ – ಕೆ.ಎಚ್. ಪಾಟೀಲ್ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ, ಗದಗ ಮೊಬೈಲ್ ಸಂ 9480552339 ಅಥವಾ ಇ-ಮೇಲ್ kvk.gadag@icar.gov.in,  ಹಾವೇರಿ ಜಿಲ್ಲೆಯವರು ಡೀನ್, ದಾ.ಸಿ.ಲಿಂದೇ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾ ವಿದ್ಯಾಲಯ, ದೇವಿ ಹೊಸೂರು, ಹಾವೇರಿ – 581 110 ಮೊಬೈಲ್ ಸಂ. 9480696396 ಅಥವಾ ಇ-ಮೇಲ್ cheft.devihosur@uhsbagalkot.edu.in, ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯವರು ಡೀನ್, ತೋಟಗಾರಿಕಾ ಮಹಾವಿದ್ಯಾಲಯ, ಮುನಿರಾಬಾದ – 583 233 ಜಿಲ್ಲಾ ಕೊಪ್ಪಳ ದೂರವಾಣಿ ಸಂ. 08539-270453 ಮೊಬೈಲ್ ಸಂ. 9480696399 ಅಥವಾ ಇ-ಮೇಲ್ dean.cohkoppal@uhsbagalkot.edu.in, ಉತ್ತರಕನ್ನಡ ಜಿಲ್ಲೆಯವರು ಡೀನ್, ತೋಟಗಾರಿಕಾ ಮಹಾವಿದ್ಯಾಲಯ, ಬನವಾಸಿ ರಸ್ತೆ, ಶಿರಸಿ - 581401 ಮೊಬೈಲ್ ಸಂ. 9449872866 ಅಥವಾ ಇ-ಮೇಲ್ dean.cohsirsi@uhsbagalkot.edu.in, ಮೈಸುರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯವರು ಡೀನ್ ತೋಟಗಾರಿಕಾ ಮಹಾವಿದ್ಯಾಲಯ, ಯಲಚನಹಳ್ಳಿ, ಇಲವಾಲ ಹೋಬಳಿ, ಮೈಸೂರು – 571130 ಜಿಲ್ಲೆ ಮೈಸೂರು ದೂರವಾಣಿ ಸಂ. 0821 – 2970413 ಮೊಬೈಲ್ ಸಂ 9449872870 ಅಥವಾ ಇ-ಮೇಲ್ dean.cohmysore@uhsbagalkot.edu.in, ಹಾಸನ ಜಿಲ್ಲೆಯವರು ಮುಖ್ಯಸ್ಥರು, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಅರಸಿಕೆರೆ, ಹಾಸನ ಜಿಲ್ಲೆ, ಮೊಬೈಲ್ ಸಂ. 7975187614 ಅಥವಾ ಇ-ಮೇಲ್ hrecarasikere@uhsbagalkot.edu.in, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು ಡೀನ್, ತೋಟಗಾರಿಕಾ ಮಹಾವಿದ್ಯಾಲಯ, ವಿದ್ಯಾರಣ್ಯಪುರ, ಜಿ.ಕೆ.ವಿ.ಕೆ ಅಂಚೆ, ಬೆಂಗಳೂರು – 560 065 ದೂರವಾಣಿ ಸಂ. 080 – 29720568 / 29720560 ಮೊಬೈಲ್ ಸಂ 9449872875 ಅಥವಾ ಇ-ಮೇಲ್ dean.cohbengaluru@uhsbagalkot.edu.in, ರಾಮನಗರ ಮತ್ತು ತುಮಕೂರು ಜಿಲ್ಲೆಯವರು ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರು, ಪ್ರಾದೇಸಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ವಿದ್ಯಾರಣ್ಯಪುರ, ಬೆಂಗಳೂರು – 560065 ದೂರವಾಣಿ ಸಂ. 080-29720521 ಮೊಬೈಲ್ ಸಂ. 9448902528 ಅಥವಾ ಇ-ಮೇಲ್ rhrecb.gkvk@uhsbagalkot.edu.in, ಮತ್ತು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯವರು ಡೀನ್, ತೋಟಗಾರಿಕಾ ಮಹಾವಿದ್ಯಾಲಯ, ಟಮಕ ರಸ್ತೆ, ಕೋಲಾರ – 563 101 ದೂರವಾಣಿ ಸಂ. 08152, ಮೊಬೈಲ್ ಸಂ. 9480696384 ಅಥವಾ ಇ-ಮೇಲ್ dean.cohkolar@uhsbagalkot.edu.in, ಇವರಿಂದ ಅಥವಾ ಬಾಗಲಕೋಟದ ಅಂತರ್ ಜಾಲತಾಣ www.uhsbagalkot.karnataka.gov.in  ಕ್ಕೆ ಭೇಟಿ ನೀಡಿ ಅರ್ಜಿಗಳನ್ನು ಪಡೆದುಕೊಂಡು ಅರ್ಜಿ ನಮೂನೆಯನ್ನು ಭರ್ತಿ ಮಾಡಿ 2025ನೇ ನವೆಂಬರ್ 05ರ ಒಳಗಾಗಿ ಸಂಬಂಧಿಸಿದ ಜಿಲ್ಲೆಯ ಅಧಿಕಾರಿಗಳಿಗೆ ಸಲ್ಲಿಸುವುದು.

ಅರ್ಜಿದಾರರು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಯಾವುದೇ ಕೃಷಿ / ತೋಟಗಾರಿಕೆ/ ಪಶುಸಂಗೋಪನೆ ಮತ್ತು ಐಸಿಎಆರ್ ಪ್ರಶಸ್ತಿಗಳನ್ನು ತಮ್ಮ ಹಾಗೂ ತಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಪಡೆದಿರಬಾರದು.

ಅರ್ಜಿದಾರರು ನಿಗದಿತ ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ನೀಡಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಆಯ್ಕೆ ಸಮಿತಿಯು ಪರಿಶೀಲಿಸಿ ಕಿರುಪಟ್ಟಿ ಮಾಡಿದ ಮೂರು ಕ್ಷೇತ್ರಗಳಿಗೆ ಮಾತ್ರ ಕ್ಷೇತ್ರ ವೀಕ್ಷಣೆ ಕೈಗೊಳ್ಳಲಾಗುವುದು. ಆಯ್ಕೆಯಾದ ವಿಶ್ವವಿದ್ಯಾಲಯದ ನಿಯಮ ಹಾಗೂ ಆಯ್ಕೆ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ವೆಂಕಟೇಶಲು ಅವರ ಮೊಬೈಲ್ ಸಂಖ್ಯೆ: 9480696381/08354-230101, ಡಾ.ದೀಪಾ ತೇರದಾಳ, ಸಹಾಯಕ ಪ್ರಾಧ್ಯಾಪಕರು, ಮೊಬೈಲ್ ಸಂಖ್ಯೆ 7899285785, ಡಾ.ವಿರೇಶ ಹಿರೇಮಠ, ಸಹಾಯಕ ಪ್ರಾಧ್ಯಾಪಕರು ಹಾಗೂ ತಾಂತ್ರಿಕ ಅಧಿಕಾರಿಗಳು ಮೊಬೈಲ್ ಸಂ. 8660390753, ಶ್ರೀಪಾದ ವಿ, ಸಹಾಯಕ ಪ್ರಾಧ್ಯಾಪಕರು ಮೊಬೈಲ್ ಸಂ. 9448344103,  ಎಂ.ಎ. ವಾಸೀಮ್ ಸಹಾಯಕ ಪ್ರಾಧ್ಯಾಪಕರು ಮೊಬೈಲ್ ಸಂ. 7259793847, ಪಿ.ಬಿ.ದೇಸೂರ, ಸಹಾಯಕ ಆಡಳಿತಾಧಿಕಾರಿಗಳು ಮೊಬೈಲ್ ಸಂ. 8884612692 ಇವರನ್ನು ಅಥವಾ ಇ-ಮೇಲ್ de@ushbagalkot.edu.in   ಗೆ ಸಂಪರ್ಕಿಸಬಹುದು ಎಂದು ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)