ಕೌತಾಳಂ ಶ್ರೀ ಗುರುಜಗನ್ನಾಥದಾಸರು

varthajala
0

(ದಿನಾಂಕ 8-10-2025, ಬುಧವಾರ ಗುರುಗಳ ಆರಾಧನೆ ಪ್ರಯುಕ್ತ ಈ ಲೇಖನ)

ಶ್ರೀಮದ್ರಾಘವೇಂದ್ರತೀರ್ಥರು ಹಾಗೂ ಇಭರಾಮಪುರ ಅಪ್ಪಾವರ ವಿಶೇಷ ಕರುಣಾಸುಪಾತ್ರರಾದ ಶ್ರೀಗುರುಜಗನ್ನಾಥದಾಸರ್ಯರ ಆರಾಧನೆ 

ದಾಸೀಕೃತಾಶೇಷಜನಂ    ದಾಸವರ್ಯಾಂಘ್ರಿಮಾನಸಂ |

ವಶೀಕೃತಗುರುಂವಂದೇ

ವಾಗ್ಙ್ಮನಃಸ್ವಾಮಿಶರ್ಮಕಂ ||


*ಶ್ರೀ ವೆಂಕಟಗಿರಿ ಆಚಾರ್ಯರಿಗೆ ಸಂತಾನ ಅನುಗ್ರಹ*

ಶ್ರೀ ವೆಂಕಟಗಿರಿ ಆಚಾರ್ಯರು ಹಾಗೆ ಶ್ರೀ ಇಭರಾಮಪುರದ ಅಪ್ಪಾವರ ಸ್ನೇಹಿತರು. ಒಬ್ಬರಿಗೊಬ್ಬರು ಅಣ್ಣ ತಮ್ಮನ ಸಂಬಂಧದ ಹಾಗೆ ಇತ್ತು. ಶ್ರೀ ವೆಂಕಟಗಿರಿ ಆಚಾರ್ಯರು ಒಂದು ಸಂದರ್ಭದಲ್ಲಿ ಇಭರಾಮಪುರಕ್ಕೆ ಬಂದಿರುತ್ತಾರೆ. ಬಂದ ಸಂದರ್ಭದಲ್ಲಿ ಅಪ್ಪಾವರು ಪ್ರಾಣದೇವರ ಪೂಜೆಯಲ್ಲಿ ನಿರತರಾಗಿರುತ್ತಾರೆ, ಆಚಾರ್ಯರು ನೊಂದ ಮನಸ್ಸಿನಿಂದ ಅಪ್ಪಾವರಲ್ಲಿ ಪ್ರಾರ್ಥನೆ ಮಾಡುತ್ತಾರೆ, ಅಣ್ಣಾ ಎಲ್ಲರಿಗೂ ಅನುಗ್ರಹ ಮಾಡ್ತಿಯಾ ನನಗೆ ಸಂತಾನ ಇಲ್ಲ ಅಂತ ಬೇಡಿಕೊಳ್ಳುತ್ತಾರೆ. ಅಪ್ಪಾವರು ತಮ್ಮ ಉಪಾಸ್ಯಮೂರ್ತಿಯಾದ ಪಂಚಮುಖಿ  ಪ್ರಾಣದೇವರಿಗೆ ಅಭಿಷೇಕ ಮಾಡಿ ಮುತ್ತು ಕೊಡುತ್ತಾ "ವೆಂಕಟಗಿರಿ ನಿನಗೆ ಮುತ್ತಿನಂತಹ ಮಗ ಹುಟ್ಟುತ್ತಾನೆ ಎಂದು ಆಶೀರ್ವಾದ ಮಾಡುತ್ತಾರೆ.

ಅಪ್ಪಾವರ ಆಶೀರ್ವಾದದಿಂದ ಗಂಡು ಮಗ ಆಗುತ್ತೆ. ಅವರೇ ಮುಂದೆ ಸ್ವಾಮಿರಾಯ ಆಚಾರ್ಯರಿಂದ ಶ್ರೀ ಗುರುಜಗನ್ನಾಥದಾಸರು (೧೮೩೭-೧೯೧೮] ಅಂತ ಜಗನ್ಮಾನ್ಯರಾಗುತ್ತಾರೆ.

*ಸ್ವಪ್ನದಲ್ಲಿ ಪಾಠ*

ಶ್ರೀ ಸ್ವಾಮಿರಾಯ (ಶ್ರೀ ಗುರುಜಗನ್ನಾಥದಾಸರು) ಶ್ರೀಹರಿಯ ಕೃಪೆಗೆ ಗುರುವೇ ಕಾರಣ ಅತಿರೋಹಿತ ವಿಮಲವಿಜ್ಞಾನಿಗಳಾದ ವಾಯು ದೇವರ ಮೊರೆ ಹೋಗಬೇಕೆಂದು ನಿಶ್ಚಯಸಿದರು.

ಸ್ವಗ್ರಾಮ ಕೌತಾಲಂ ಹತ್ತಿರವಾದ ಬುಡಮಲದೊಡ್ಡಿ ಎಂಬ ಪವಿತ್ರ ಕ್ಷೇತ್ರ ಸಾಧನೆಗೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಯಾರಿಗೂ ಹೇಳದೆ ಪ್ರಯಾಣ ಬೆಳೆಸುತ್ತಾರೆ. ಆ ಕ್ಷೇತ್ರದಲ್ಲಿಯ ವಾಯು ದೇವರ ಸೇವೆ ಆರಂಭಿಸುತ್ತಾರೆ. ಶ್ರೀ ಸ್ವಾಮಿರಾಯರ ಸೇವೆ ಸ್ವೀಕರಿಸಿದ ಮುಖ್ಯಪ್ರಾಣದೇವರು ಸ್ವಪ್ನದಲ್ಲಿ ನಾಲಿಗೆಯ ಮೇಲೆ ಬೀಜಾಕ್ಷರ ಬರೆದು ಸ್ವಗ್ರಾಮಕ್ಕೆ ತೆರಳು ನಿನಗೆ ಉಪದೇಶ ಆಗುತ್ತೆ ಎಂದು ಅನುಗ್ರಹಿಸುತ್ತಾರೆ. 

ವಾಯುದೇವರ ಆಜ್ಞೆಯಂತೆ ಸ್ವಗ್ರಾಮಕ್ಕೆ ತೆರುಳುತಾರೆ. ರೂಡಿನಾಮ ಸಂವತ್ಸರ ಶ್ರಾವಣ ಶುದ್ಧ  ವರಮಹಾಲಕ್ಷ್ಮಿ  ದಿನದಂದು ಸ್ವಪ್ನದಲ್ಲಿ ಅಪರೋಕ್ಷ ಜ್ಞಾನಿಗಳಾದ ಶ್ರೀ ಇಭರಾಮಪುರ ಅಪ್ಪಾವರ ಸಮಕ್ಷಮದಲ್ಲಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಗುರು ಉಪದೇಶ ಕೊಡುತ್ತಾರೆ. ರಾಯರು ಹಾಗೂ ಅಪ್ಪಾವರ ವಿಶೇಷ ಅನುಗ್ರಹದಿಂದ ಮಹಾಜ್ಞಾನಿಗಳಾದರು.

ದಾಸರು ಸ್ವತಃ ಅವರೇ ತಮ್ಮ ಕನ್ನಡದ ರಾಘವೇಂದ್ರ ವಿಜಯದ ಆದಿಯಲ್ಲಿ

ಈ ವಿಷಯವನ್ನು  ಕೆಳಕಂಡಂತೆ ಸ್ಪಷ್ಟಪಡಿಸಿರುವರು:

ವೇದ ಶಾಸ್ತ್ರ ಪುರಾಣ ಕಥೆಗಳನ್ನೋದಿ ಕೇಳದ್ವನಲ್ಲ 

ತತ್ವದ ಹಾದಿ ತಿಳಿದವನಲ್ಲ ಬುಧಜನಸಂಗ ಮೊದಲಿಲ್ಲ

ಮೋದತೀರ್ಥಪದಾಬ್ಜ ಮಧುಕರರಾದ ಶ್ರೀ ಗುರುರಾಘವೇಂದ್ರರ

ಪಾದಪದ್ಮ ಪರಾಗಲೇಶದ ಸ್ಪರ್ಶ ಮಾತ್ರದಲಿ ||

ಕೃತಿಯ ಮಾಡುವ ಶಕುತಿ ಪುಟ್ಟಿತು

ಮತಿಯ ಮಾಂದ್ಯವು ತಾನೆ ಪೋಯಿತು

ಯತುನವಿಲ್ಲದೆ ಸಕಲ 

ವೇದಗಳರ್ಥ ತಿಳಿದಿಹದು

ಪತಿತ ಪಾವನರಾದ ಗುರುಗಳ ಆತುಳ ಮಹಿಮೆಯವನಾದ ಬಲ್ಲನು ಮತಿಮತಾಂವರ ಬುಧರಿಗಸದಳ ನರರ ಪಾಡೇನು||

*ಶಿಷ್ಯ ಸಂಪತ್ತು *

ಶ್ರೀಗುರು ಜಗನ್ನಾಥದಾಸರಿಂದ ಎಂಟು ಜನ ಅಂಕಿತ ಪಡೆದು ದೀಕ್ಷೆಯನ್ನು ಹೊಂದಿದವರು : 

ವರದವಿಠಲರು ವರದೇಶವಿಠಲರು

ಆನಂದವಿಠಲರು

ವರದೇಂದ್ರವಿಠಲರು

ಸುಂದರವಿಠಲರು

ಮುದ್ದು ಗುರುಜಗನ್ನಾಥವಿಠಲರು

ಜಗದೀಶವಿಠಲರು

ಶ್ರೀನಿವಾಸವಿಠಲರು

ದಾಸಾರ್ಯರ ಸಾಹಿತ್ಯ ಸಂಪತ್ತು :

೧.ಸಂಸ್ಕೃತ ಗ್ರಂಥಗಳು.

ಬ್ರಹ್ಮಸೂತ್ರ ಭಾಷ್ಯ ತತ್ವಪ್ರದೀಪಿಕಾ.

ಬ್ರಹ್ಮಸೂತ್ರ ಭಾಷ್ಯಾರ್ಥ ಸಂಗ್ರಹ.

ಅಧಿಕರಣಸಾರ ಸಂಗ್ರಹ.

ಬ್ರಹ್ಮಸೂತ್ರ ಪ್ರಕಾಶಿಕಾ

ಪರಾಪರತತ್ವ ದೀಪಿಕಾ.

ದಶೋಪನಿಷತ್ ಖಂಡಾರ್ಥ ವಿವರಣ.

ಭಾಗವತ ವಿಜಯಧ್ವಜೀಯಾನುವಾದ.(ಕನ್ನಡ)

ಹರಿಕಥಾಮೃತಸಾರ ಚಂದ್ರಿಕಾ.

ಹರಿಕಥಾಮೃತಸಾರ ಪರಿಮಳ.

(ಕನ್ನಡ)

ಜಯತೀರ್ಥ ಸ್ತೋತ್ರ ವ್ಯಾಖ್ಯಾನ.

ಸತ್ತತ್ತ್ವ ರತ್ನಮಾಲಾ ವ್ಯಾಖ್ಯಾನ.

ಮನೋರಮಾ. (ಜೈಮಿನಿ ಭಾರತ ವ್ಯಾಖ್ಯಾನ).

ಪ್ರಾಣಾಗ್ನಿ ಹೋತ್ರ ಕಲ್ಪ.

ಪ್ರಾತಃಕಾಲಾನು ಚಿಂತನ.

ಸ್ನಾನ ಸಂಕಲ್ಪ.

೨.ಸಂಸ್ಕ್ರತ ಸ್ತೋತ್ರಗಳು.

ಶ್ರೀವೆಂಕಟೇಶ ಸ್ತವರಾಜ.

ಲಕ್ಷ್ಮೀ ಸ್ತವರಾಜ.

ಶ್ರೀರಾಘವೇಂದ್ರ ಮಹಾತ್ಮ್ಯೆ.

ಶ್ರೀರಾಘವೇಂದ್ರ ಸಹಸ್ರನಾಮಾವಳಿ ಸ್ತೋತ್ರ.

ಶ್ರೀರಾಘವೇಂದ್ರ ಆಪಾದಮೌಳಿ ಸ್ತೋತ್ರ.

ಶ್ರೀರಾಘವೇಂದ್ರಾಷ್ಟಕ.

ಶ್ರೀರಾಘವೇಂದ್ರ ಅಶ್ವಧಾಟಿ ಸ್ತೋತ್ರ.

ಶ್ರೀರಾಘವೇಂದ್ರ ಪ್ರಾರ್ಥನಾ.

ಶ್ರೀರಾಘವೇಂದ್ರ ಕರಾವಲಂಬನ ಸ್ತೋತ್ರ.

ಶ್ರೀರಾಘವೇಂದ್ರ ಸರ್ವಕರ್ಮಸಮರ್ಪಣ ಸ್ತೋತ್ರ.

ಶ್ರೀವರದೇಂದ್ರ ಸ್ತೋತ್ರ.

ಶ್ರೀವರದೇಂದ್ರ ಕರಾವಲಂಬನ ಸ್ತೋತ್ರ.

ಶ್ರೀಜಗನ್ನಾಥದಾಸಾರ್ಯ ಸ್ತೋತ್ರ.

ಶ್ರೀಜಗನ್ನಾಥದಾಸಾರ್ಯ ಕರಾವಲಂಬನ ಸ್ತೋತ್ರ. 

೩. ಕನ್ನಡ ಕೃತಿಗಳು

ಶ್ರೀವೆಂಕಟೇಶ ಸ್ತವರಾಜ.

ಶ್ರೀಲಕ್ಷ್ಮೀ ಹೃದಯ. 

ಶ್ರೀ ಪ್ರಹ್ಲಾದ ಚರಿತ್ರೆ.

ಶ್ರೀರಾಘವೇಂದ್ರ ವಿಜಯ.

೨೦೦ಕ್ಕೂ ಹೆಚ್ಚು ಕೀರ್ತನೆ, ಸುಳಾದಿಗಳು, ಉಗಾಭೋಗಗಳು ರಚಿಸಿ ಶ್ರೀ ಗುರುಜಗನ್ನಾಥದಾಸರು ದಾಸಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 

*ಶ್ರೀ ಇಭರಾಮಪುರಾಧೀಶ*

ವಿಷ್ಣುತೀರ್ಥಾಚಾರ್ ಇಭರಾಮಪುರ

Post a Comment

0Comments

Post a Comment (0)