ವಾಯುಪಡೆ ಬಗ್ಗೆ ಶ್ರೇಷ್ಠ ಜ್ಞಾನ ಹೊಂದಿದ್ದ ಭಾರತ ಪುರಾಣಗಳಲ್ಲಿಯೇ ಮಹತ್ತರ ಸಾಧನೆ ಮಾಡಿದೆ

varthajala
0

 ಚಾಮರಾಜನಗರ: ಭಾರತೀಯ  ವಾಯುಪಡೆಗೆ ವಿಶೇಷ ಗೌರವವಿದೆ. ಇಡೀ ಜಗತ್ತಿನಲ್ಲಿ ವಾಯುಪಡೆಯ ಬಗ್ಗೆ ಶ್ರೇಷ್ಠವಾದ ಜ್ಞಾನವನ್ನು ಹೊಂದಿದ್ದ ಭಾರತ ಪುರಾಣಗಳಲ್ಲಿಯೇ ಮಹತ್ತರವಾದ ಸಾಧನೆಯನ್ನು ಮಾಡಿದೆ. ಆಧುನಿಕ ವಿಜ್ಞಾನಿಗಳು ಮತ್ತಷ್ಟು ಹೊಸ ಸ್ವರೂಪವನ್ನು ನೀಡಿರುವುದರಿಂದ ಜಗತ್ತು ಎಂದು ತುಂಬಾ ಹತ್ತಿರವಾಗಿದೆ ಎಂದು ಸಂಸ್ಕೃತಿಯ ಚಿಂತಕ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು. 

ಅವರು ನಗರದ ಜೈ ಹಿಂದ್ ಕಟ್ಟೆಯಲ್ಲಿ   ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಭಾರತೀಯ ವಾಯುಪಡೆದೆ ದಿನ ಆಚರಣೆಯ ಸಂದರ್ಭದಲ್ಲಿ ಮಾತನಾಡುತ್ತಾ ಭಾರತೀಯ ವಾಯುಪಡೆಯಲಿ ಸೇವೆ ಸಲ್ಲಿಸಿ ಭಾರತದ ಕೀರ್ತಿಯನ್ನು ಸದಾ ಕಾಲ ವಿಶ್ವಕ್ಕೆ ಹರಡುತ್ತಿರುವ ಎಲ್ಲಾ ಸೈನಿಕರಿಗೆ ಭಾರತೀಯರ ಗೌರವವಂದನೆ ಇರುತ್ತದೆ. ವಾಯು ಯಾನ ಮಾನವನ ವಿಶೇಷವಾದ ಜ್ಞಾನದ ಪ್ರತೀಕ . ಆಧ್ಯಾತ್ಮಿಕ ಶಕ್ತಿಯಜೊತೆಗೆ ಯೋಚನೆ, ಬುದ್ಧಿವಂತಿಕೆ ಕುಶಲತೆ,  ಕೌಶಲ್ಯ ರಹಸ್ಯವಾಗಿದೆ. ಪುರಾಣಗಳಲ್ಲಿ ವಿಶೇಷವಾದ ಇತಿಹಾಸ, ಶಕ್ತಿ  ಇದೆ. ಇಂದು ರಾಷ್ಟ್ರ ರಕ್ಷಣೆ , ಮಾನವನ ಹಾಗೂ ಪ್ರಾಣಿಗಳ ಸಂರಕ್ಷಣೆಯಲ್ಲಿ ವಾಯಪಡೆ ಮಹತ್ತರವಾದ ಕಾರ್ಯವನ್ನು ನಿರ್ವಹಿಸುತ್ತಿದೆ. ಯುದ್ಧ, ಭಯೋತ್ಪಾದನೆ, ಪ್ರವಾಹ ಬರ, ವಿಶೇಷವಾದ ನೈಸರ್ಗಿಕ ಪ್ರಕೋಪಗಳಿಗೆ ಒಳಗಾದಾಗ ವಾಯುಪಡೆ ಸದಾಕಾಲ ಸಿದ್ಧವಿದ್ದು ಸಂರಕ್ಷಿಸುತ್ತಿದೆ. ಭಾರತದ ವಾಯುಪಡೆ ವಿಶ್ವಾಸಾರ್ಹ ಸ್ಥಾನವನ್ನು ಪಡೆದಿದೆ. ಯುದ್ಧದ ಸಂದರ್ಭಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ  ಸಾವಿರಾರು ಸೈನಿಕರ ತ್ಯಾಗ ಬಲಿದಾನಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ . ದೇಶದ ಎಲ್ಲ ಪಠ್ಯಗಳಲ್ಲಿ ಭಾರತದ ಸೇನಾ ಮಹತ್ವದ ಬಗ್ಗೆ ಇತಿಹಾಸ ತಿಳಿಸುವ  ಸ್ವಾಭಿಮಾನ ಮೂಡಿಸಿ ದೇಶಾಭಿಮಾನ ಹೆಚ್ಚಿಸುವ ಕಾರ್ಯವಾಗಬೇಕುಎಂದು ತಿಳಿಸಿದರು. 


ಜಿಲ್ಲಾ ಯುವ ಸಂಘಟನೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ  ಮಾತನಾಡಿ ಯುವಕರು ಸೈನಿಕ ಸೇವೆಗೆ ಸೇರಿಕೊಳ್ಳುವ ಬಗ್ಗೆ ಪ್ರಯತ್ನಿಸಬೇಕು . ಭಾರತದ ಸೈನ್ಯ, ನೌಕಾಪಡೆ , ವಾಯುಪಡೆ, ಮಹತ್ತರ ಸ್ಥಾನದಲ್ಲಿದೆ. ವಾಯು ಪಡೆಗೆ ಸೇರುವ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವಿದ್ಯಾರ್ಥಿ ಜೀವನದಿಂದಲೇ ದೈಹಿಕ ಮತ್ತು ಮಾನಸಿಕ ವಾಗಿ ಸಿದ್ದರಾಗಿ ದೇಶ ಸೇವೆಗೆ ನಾವೆಲ್ಲರೂ ಬದ್ಧರಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಮಹೇಶ್, ಸುಮನ್, ರಮೇಶ್, ಅಭಿ, ಸುಂದರ್ ,ರವಿ ,ಮುರುಗೇಶ್ ಮುಂತಾದವರು ಉಪಸ್ಥಿತರಿದ್ದರು.

Post a Comment

0Comments

Post a Comment (0)