ರಾಷ್ಟ್ರೀಯ ಮಹಿಳಾ ಆಯೋಗ ಅಪ್‍ಕೇ ದ್ವಾರ್ – ಮಹಿಳಾ ಜನ್ ಸುನ್ವಾಹಿ ಮಹಿಳೆಯರಿಂದ ಸಲ್ಲಿಕೆಯಾದ ಮತ್ತು ಸಲ್ಲಿಸಲ್ಪಡುವ ದೂರುಗಳ ವಿಚಾರಣೆ

varthajala
0

 ಬೆಂಗಳೂರು, ಅಕ್ಟೋಬರ್ 10, (ಕರ್ನಾಟಕ ವಾರ್ತೆ): ರಾಷ್ಟ್ರೀಯ ಮಹಿಳಾ ಆಯೋಗದ ವತಿಯಿಂದ “ರಾಷ್ಟ್ರೀಯ ಮಹಿಳಾ ಆಯೋಗ ಆಪ್‍ಕೇ ದ್ವಾರ್ – ಮಹಿಳಾ ಜನ್ ಸುನ್ವಾಹಿ” ಕಾರ್ಯಕ್ರಮವನ್ನು 2025ನೇ ಅಕ್ಟೋಬರ್ 13 ಮತ್ತು 14 ರಂದು ಪ್ರತಿ ದಿನ ಅಪರಾಹ್ನ 12 ಗಂಟೆಯಿಂದ ಬೆಂಗಳೂರಿನ ಡಾ. ಎಂ.ಹೆಚ್. ಮರಿಗೌಡ ರಸ್ತೆಯಲ್ಲಿರುವ ಸುಧಾರಣಾ ಸಂಸ್ಥೆಗಳ ಸಂಕೀರ್ಣದ ಸಂಭ್ರಮ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.


ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಗೆ ಸಂಬಂಧಿಸಿದ ಮಹಿಳೆಯರಿಂದ ಸಲ್ಲಿಕೆಯಾದ ಮತ್ತು ಸಲ್ಲಿಸಲ್ಪಡುವ ದೂರುಗಳ ವಿಚಾರಣೆಯನ್ನು ನಡೆಸಲಾಗುವುದು.

ಈ ಮೂರು ಜಿಲ್ಲೆಗಳ ವ್ಯಾಪ್ತಿಯ ಮಹಿಳೆಯರು ತಮ್ಮ ದೂರುಗಳು ಏನಾದರೂ ಇದ್ದಲ್ಲಿ ರಾಷ್ಟ್ರೀಯ ಮಹಿಳ ಆಯೋಗದ ಮುಂದೆ ನೇರವಾಗಿ ಹಾಜರಾಗಿ ದೂರುಗಳನ್ನು ಸಲ್ಲಿಸಬಹುದಾಗಿರುತ್ತದೆ. ಮಹಿಳೆಯರು ಈ ಅವಕಾಶದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)