ಮಲ್ಲೇಶ್ವರಂ: ಕೋದಂಡರಾಮಪುರ ಕಬಡ್ಡಿ ಆಟದ ಮೈದಾನದಲ್ಲಿ ಡಿಸೆಂಬರ್ 12ರಿಂದ 14ರವರಗೆ ಅಂತರಾಷ್ಟ್ರೀಯ ಕಬಡ್ಡಿ ಪಟುಗಳಾದ ಎಸ್.ಬಿ.ಶಿವಲಿಂಗಯ್ಯ, ಚಿನ್ನಸ್ವಾಮಿರೆಡ್ಡಿ ಸ್ಮರಣಾರ್ಥ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿ ಕುರಿತು ಅಧ್ಯಕ್ಷರಾದ ಬಿ.ಕೆ.ಶಿವರಾಂರವರು ಕಪ್ ಬಿಡುಗಡೆ ಮಾಡಿ ಮೂರು ದಿನಗಳ ಕಾಲ ಜರುಗುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಕುರಿತು ಮಾಧ್ಯಮ ಉದ್ದೇಶಿಸಿ ಮಾತನಾಡಿದರು.ಮಲ್ಲೇಶ್ವರಂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅನೂಪ್ ಅಯ್ಯಂಗಾರ್, ಸಮಾಜ ಸೇವಕರಾದ ಶ್ರೀವಲ್ಲಭರವರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.ಅಧ್ಯಕ್ಷರಾದ ಬಿ.ಕೆ.ಶಿವರಾಂರವರು* ಮಾತನಾಡಿ ದೇಶಿಯ ಕ್ರೀಡೆ ಕಬ್ಬಡಿಯನ್ನು ಪ್ರೋತ್ಸಾಹಿಸಲು ಯಂಗ್ ಸ್ಟರ್ಸ್ ಕಬಡ್ಡಿ ಕ್ಲಬ್ ಅತ್ಯಂತ ಹಳೆಯದಾದ ಕ್ಲಬ್ 1965ರಲ್ಲಿ ಸ್ಥಾಪನೆಯಾಯಿತು.
ಈ ಕ್ಲಬ್ ನಲ್ಲಿ 400ರಿಂದ 500ಕ್ಕಿಂತ ಹೆಚ್ಚು ಕಬಡ್ಡಿ ಪಟುಗಳು ತರಭೇತಿ ಪಡೆದು 80ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರ, ರಾಜ್ಯ ಮತ್ತು ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದಾರೆ.1982ರಲ್ಲಿ ಏಷಿಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ನಮ್ಮ ಕ್ಲಬ್ ಆಟಗಾರರಾದ ವೈ.ಕುಪ್ಪರಾಜ್ ಮತ್ತು ಚಿನ್ನಸ್ವಾಮಿರೆಡ್ಡಿರವರು ಭಾರತ ತಂಡದಲ್ಲಿ ಪ್ರತಿನಿಧಿಸಿದ್ದರು,ಅಂದು ಚಿನ್ನದ ಪದಕ ಗಳಿಸಿತ್ತು ಭಾರತ ತಂಡ. 60ವರ್ಷ ಇತಿಹಾಸವಿರುವ ನಮ್ಮ ಕ್ಲಬ್ 25ರಾಜ್ಯಮಟ್ಟದ, 4ಅಖಿಲ ಭಾರತ ಹಾಗೂ ಕೆವಿಎಲ್ ಮಾದರಿಯಲ್ಲಿ ವಾಲಿಬಾಲ್ ಪಂದ್ಯಾವಳಿ, ಪುಟ್ ಬಾಲ್, ಖೋ-ಖೋ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶ, ಯುವ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಯಾರಿ ಮಾಡಬೇಕು ಎಂಬ ನಿಟ್ಟಿನಲ್ಲಿ ಎಸ್.ಬಿ.ಶಿವಲಿಂಗಯ್ಯ, ಚಿನ್ನಸ್ವಾಮಿರೆಡ್ಡಿರವರ ಸ್ಮರಣಾರ್ಥ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಮೂರು ದಿನಗಳ ಕಾಲ ಆಯೋಜಿಸಲಾಗಿದೆ. 12ನೇ ತಾರೀಖು ಸಂಜೆ 6ಗಂಟೆಗೆ ಉದ್ಘಾಟನೆಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣರವರು, ಧಾರ್ಮಿಕ ದತ್ತಿ ಇಲಾಖೆ ಸಮಿತಿ ಸದಸ್ಯರಾದ ಕೆ.ಎಂ.ನಾಗರಾಜ್, ಶಾಸಕರುಗಳಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನಂ ನಾಯ್ಡು, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ಹೊನ್ನಪ್ಪಗೌಡ, ಶ್ರೀಮತಿ ವಸಂತಚಿನ್ನಸ್ವಾಮಿರೆಡ್ಡಿ, ಶ್ರೀಮತಿ ಆಶಾ ಸೋಮಶೇಖರ್ ರವರು ಉದ್ಘಾಟನೆ ಮಾಡಲಿದ್ದಾರೆ.
36 ಕಬಡ್ಡಿ ತಂಡಗಳು ಭಾಗವಹಿಸಲಿದ್ದಾರೆ ಪ್ರಥಮ ಬಹುಮಾನ 75ಸಾವಿರ ರೂಪಾಯಿ ನಗದು ಪುರಸ್ಕಾರ, ದ್ವೀತಿಯ 50ಸಾವಿರ, 3ಮತ್ತು 4 ಸ್ಥಾನಕ್ಕೆ 25ಸಾವಿರ ರೂಪಾಯಿ ಬಹುಮಾನ ಪಾರಿತೋಷಕ. ಉತ್ತಮ ಆಟಗಾರ, ಉತ್ತಮ ದಾಳಿಗಾರ, ಉತ್ತಮ ಅಲ್ ರೌಂಡರ್, ಉತ್ತಮ ರೈಡರ್ 5ಸಾವಿರ ಬಹುಮಾನ ನೀಡಲಾಗುತ್ತದೆ.
ದೇಶಿಯ ಸಾಂಪ್ರಾದಾಯಿಕ ಶೈಲಿಯಲ್ಲಿ ಕುಂಕುಮ, ಹರಿಶಿನ, ಪಚ್ಚಕರ್ಪೂರ,ಹರಳಣ್ಣೆ ಶ್ರೀಗಂಧ ವನ್ನು ಹಾಕಿ ಅಂಕಣವ್ನನು ಸಜ್ಜುಗೊಳಿಸಲಾಗಿದೆ.
ವಿಧಾನಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಶಾಸಕರಾದ ಮುನಿರತ್ನರವರು, ಗುತ್ತಿಗೆದಾರರಾದ ಚಿನ್ನಸ್ವಾಮಿರಾಜುರವರು, ಯಂಗ್ ಸ್ಟರ್ಸ್ ಕಬಡ್ಡಿ ಕ್ಲಬ್‌ನ ಸಂಸ್ಥಾಪಕರಾದ ಮಣಿ ಹಾಲಿ ಕಾರ್ಯದರ್ಶಿಗಳು ಅವರ ಸಹೋದ್ಯೋಗಿಗಳಾದ ರಾಚಯ್ಯ,ಕೈಲಾಸ್‌ನಾಥ್ ಮಿಶ್ರ, ರತ್ನಾಕರ,
ಮುನಿರತ್ನ (ನೈನಿ), ಮುನಿರತ್ನ (ಐಟಿಐ),ನರಸಯ್ಯ,(ಕುಳ್ಳ), ರಾಜಗೋಪಾಲ ರೆಡ್ಡಿ,ನಾ.
ವೆಂಕಟೇಶ್, ನರಸಿಂಹ, ನಾಗಭೂಷಣ್ ದಾಮೋಧರ ಕುಲಕರ್ಣಿ, ಸಿದ್ದಾರೆಡ್ಡಿ,ಶ್ರೀನಿವಾಸ ಪ್ರಭುಕೃಷ್ಣರೆಡ್ಡಿ ಮಣಿ (ಭೂಸಿ), ರಾಜೇಂದ್ರ ರಾಜು, ಉದಯ್ ಶಂಕರ್, ಚಂದ್ರ ರೆಡ್ಡಿ. ಚಂದ್ರಶೇಖರ್ ನಾಯ್ಡು. ಜಗನಾಥರೆಡ್ಡಿ ಇನ್ನು ಮುಂತಾದ ಹಿರಿಯ ಮತ್ತು ಕಿರಿಯ ಕಬಡ್ಡಿ ಆಟಗಾರರು ಯಂಗ್ ಸ್ಟರ್ಸ್ ಕಬಡ್ಡಿ ಕ್ಲಬ್‌ಗೆ ಶ್ರಮಿಸಿರುತ್ತಾರೆ. ಇದಲ್ಲದೆ ಯಂಗ್‌ಸ್ಟರ್ಸ್ ಕಬಡ್ಡಿ ಕ್ಲಬ್‌ನ ಏಳಿಗೆಯಲ್ಲಿ ಬೆಂಗಳೂರು ಅರುಣ ಸ್ಪೋರ್ಟ್ಸ್ ಕ್ಲಬ್ ಹಾಗೂ ಕಾಡು ಮಲ್ಲೇಶ್ವರ ಗೆಳೆಯರ ಬಳಗ ಪ್ರಮುಖ ಪಾತ್ರ ವಹಿಸಿರುತ್ತದೆ
.jpg)