ಗ್ರೀಕ್, ರೋಮನ್ ಮತ್ತು ತ್ಸಾರ್ ರಷ್ಯಾ ಸೇರಿದಂತೆ ಪ್ರಪಂಚದ ಪ್ರಬಲ ಸಾಮ್ರಾಜ್ಯಗಳು ಕಾಲಕಾಲಕ್ಕೆ ಉದಯಿಸಿ ನಾಶವಾದವು. ಆದರೆ ಭಾರತವು ಇಂದಿಗೂ ಅಷ್ಟೇ ಶಕ್ತಿಯಿಂದ ದೃಢವಾಗಿ ನಿಂತಿದೆ, ಏಕೆಂದರೆ ಈ ರಾಷ್ಟ್ರದ ಅಸ್ತಿತ್ವವು ರಾಜಕೀಯ ರಚನೆಯಲ್ಲಿಲ್ಲ, ಬದಲಿಗೆ ಜನರ ಮನಸ್ಸಿನಲ್ಲಿರುವ ಸಂಸ್ಕೃತಿ, ನಂಬಿಕೆ, ಧರ್ಮನಿಷ್ಠ ಮೌಲ್ಯಗಳು ಮತ್ತು ಪವಿತ್ರ ಸಂಪ್ರದಾಯಗಳಲ್ಲಿದೆ. ರಾಮ, ಕೃಷ್ಣ, ಶಿವ, ಗೋವು, ಗಂಗಾ, ಮಾತೃಭೂಮಿಯ ಕುರಿತಾದ ಅನುಭೂತಿಗಳು ಇಂದಿಗೂ ಭಾರತೀಯರ ಪ್ರಜ್ಞೆಯಲ್ಲಿ ಜಾಗೃತವಾಗಿವೆ ಮತ್ತು ಹೃದಯದಲ್ಲಿ ಮಿಡಿಯುತ್ತಿವೆ. ಅದಕ್ಕಾಗಿಯೇ ಭಾರತವು ಅವಿನಾಶಿಯಾಗಿದೆ. ರಾಷ್ಟ್ರವನ್ನು ನಾಶಮಾಡಲು ಅನೇಕ ಪ್ರಯತ್ನಗಳಾದವು; ಆದರೆ ಅವತಾರಗಳು, ಸಂತರು ಮತ್ತು ರಾಷ್ಟ್ರಪುರುಷರು ಕಾಲಕಾಲಕ್ಕೆ ಭಾರತವನ್ನು ರಕ್ಷಿಸಿದ್ದಾರೆ ಎಂದು ಇತಿಹಾಸವು ತೋರಿಸುತ್ತದೆ; ಮತ್ತು ಆದ್ದರಿಂದ, ಭಾರತದ ಧಾರ್ಮಿಕ ಜೀವನ ಮತ್ತು ಭಾವನಾತ್ಮಕ ಜೀವನವನ್ನು ರಕ್ಷಿಸುವುದೇ ಧರ್ಮರಕ್ಷಣೆ ! ಇಂದು ಭಾರತವು ತಾಂತ್ರಿಕವಾಗಿ, ಸಾಮರಿಕವಾಗಿ ಮತ್ತು ಆರ್ಥಿಕವಾಗಿ ವೇಗವಾಗಿ ಮುನ್ನಡೆಯುತ್ತಿದ್ದರೂ, ಭಯೋತ್ಪಾದನೆ, ನಕ್ಸಲಿಸಂ, ಸಾಂಸ್ಕೃತಿಕ ವಿಘಟನೆ, ಉಗ್ರವಾದಿ ವಿಚಾರಧಾರೆ ಮತ್ತು ಆಂತರಿಕ ಬಿಕ್ಕಟ್ಟುಗಳಂತಹ ಅನೇಕ ಸವಾಲುಗಳು ಎದುರಿಗಿವೆ. ಕೇವಲ ರಾಜಕೀಯ ನೀತಿಗಳಿಂದ ಅಥವಾ ಮತಗಳಿಗಾಗಿ ಕುಗ್ಗುವ ಜಾತ್ಯತೀತತೆಯಿಂದ ರಾಷ್ಟ್ರವು ಸುರಕ್ಷಿತವಾಗಿರುವುದಿಲ್ಲ. ರಾಷ್ಟ್ರವನ್ನು ಜೀವಂತವಾಗಿರಿಸುವ ಶಕ್ತಿ ಎಂದರೆ ಧರ್ಮಾಧಾರಿತ ಜೀವನ ಮೌಲ್ಯಗಳು, ಸಾಧಕತ್ವ, ಶೌರ್ಯ ಮತ್ತು ಸಾಮಾಜಿಕ ಬದ್ಧತೆ. ಅದಕ್ಕಾಗಿಯೇ ಭಾರತೀಯ ರಾಷ್ಟ್ರೀಯ ಪುನರುತ್ಥಾನದ ಮಾರ್ಗವು ಸನಾತನ ಧರ್ಮದ ಮೂಲಕವೇ ಹೋಗುತ್ತದೆ ಎಂದು ಯೋಗಿ ಶ್ರೀ ಅರವಿಂದರು ಸ್ಪಷ್ಟಪಡಿಸಿದ್ದರು. 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ದ ಸಂದೇಶ, ಈ ಹಿನ್ನೆಲೆಯಲ್ಲಿ, ದೆಹಲಿಯಲ್ಲಿ ನಡೆಯಲಿರುವ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ' ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಆದರೆ ರಾಷ್ಟ್ರ ಚೇತನವನ್ನು ಪುನರುಜ್ಜೀವನಗೊಳಿಸುವ ಒಂದು ಐತಿಹಾಸಿಕ ಸಮಾರಂಭವಾಗಿದೆ. ಡಿಸೆಂಬರ್ 13 ಮತ್ತು 14, 2025 ರಂದು ಭಾರತ ಮಂಟಪಂನಲ್ಲಿ ನಡೆಯುವ ಈ ಮಹೋತ್ಸವದಲ್ಲಿ ರಕ್ಷಣೆ, ಸಂಸ್ಕೃತಿ, ಸಾಮಾಜಿಕ ಜೀವನ, ರಾಷ್ಟ್ರೀಯ ಭದ್ರತೆ, ಸಂಪ್ರದಾಯ ಮತ್ತು ತತ್ತ್ವಶಾಸ್ತ್ರದ ನಡುವಿನ ಸಂಬಂಧಗಳ ಬಗ್ಗೆ ವಿದ್ವತ್ಪೂರ್ಣ ಚರ್ಚೆಗಳು ನಡೆಯಲಿವೆ. 250 ಕ್ಕೂ ಹೆಚ್ಚು ವೈವಿಧ್ಯಮಯ ಶಿವಕಾಲೀನ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಾಂಪ್ರದಾಯಿಕ ಯುದ್ಧಕಲೆಯ ಪ್ರಾಯೋಗಿಕ ಪ್ರದರ್ಶನ, ವಿಶೇಷ ತಜ್ಞರ ಮಾರ್ಗದರ್ಶನ, ಸಂತ-ಮಹಂತರ ಪ್ರೇರಣೆ ಮತ್ತು 'ವಿಶ್ವಕಲ್ಯಾಣಕಾರಿ ಸನಾತನ ರಾಷ್ಟ್ರ' ಎಂಬ ವಿಷಯದ ಕುರಿತು ಆಳವಾದ ಅಧಿವೇಶನವು ರಾಷ್ಟ್ರಕ್ಕೆ ಹೊಸ ದಿಕ್ಕನ್ನು ನೀಡಲಿವೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಧರ್ಮಯುದ್ಧಕ್ಕಾಗಿ ಹೇಗೆ ಶಂಖನಾದ ಮಾಡಿದನೋ, ಅದೇ ರೀತಿ ಇಂದಿನ ಈ ಮಹೋತ್ಸವವೂ ಭಾರತವನ್ನು ಧರ್ಮಾಧಾರಿತ, ಸುರಕ್ಷಿತ ಮತ್ತು ಜಾಗೃತ ರಾಷ್ಟ್ರದ ಕಡೆಗೆ ಕೊಂಡೊಯ್ಯುವ ಹೊಸ ಶಂಖನಾದವಾಗಿದೆ. ಪ್ರತಿ ಸನಾತನ ಧರ್ಮೀಯರು ಈ ಸಂದೇಶವನ್ನು ಅಳವಡಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ಇಳಿಸಿದರೆ, ಈ ಮಹೋತ್ಸವವು ಹೊಸ ಯುಗದ, ರಾಮರಾಜ್ಯದ ಆರಂಭವೆನಿಸಿಕೊಳ್ಳಲಿದೆ.
ವೈದಿಕ ಧರ್ಮ, ರಾಷ್ಟ್ರಧರ್ಮ ಮತ್ತು 'ಶಂಖನಾದ ಮಹೋತ್ಸವ'ದ ಮಹತ್ವ !
December 10, 2025
0
ಸನಾತನ ವೈದಿಕ ಧರ್ಮವು ಭಾರತದ ಆತ್ಮವಾಗಿದೆ, ಮತ್ತು ರಾಷ್ಟ್ರದ ಅಸ್ತಿತ್ವಕ್ಕೆ ಅದೇ ನಿಜವಾದ ಆಶ್ರಯವಾಗಿದೆ. "ಯತೋ ಅಭ್ಯುದಯ ನಿಶ್ರೇಯಸ ಸಿದ್ಧಿಃ ಸ ಧರ್ಮಃ" (ಇಹಲೋಕದ ಅಭ್ಯುದಯ ಮತ್ತು ಪರಮಕಲ್ಯಾಣವನ್ನು ಸಾಧಿಸುವುದು ಧರ್ಮ) ಇದು ಭಾರತೀಯ ತತ್ತ್ವಶಾಸ್ತ್ರದ ದಿವ್ಯ ವ್ಯಾಖ್ಯಾನವಾಗಿದೆ. ಜೀವನದ ಎರಡು ಹಂತಗಳಾದ ಲೌಕಿಕ ಪ್ರಗತಿ ಮತ್ತು ಪರಮಕಲ್ಯಾಣವನ್ನು ಇದು ಸಮತೋಲನಗೊಳಿಸುತ್ತದೆ:. ಜಗತ್ತಿನಲ್ಲಿ ಅನೇಕ ವಿಚಾರಧಾರೆಗಳು ಹುಟ್ಟಿಕೊಂಡವು, ಕೆಲವು ಪ್ರಭಾವಶಾಲಿಯಾದವು, ಕೆಲವು ನಶಿಸಿಹೋದವು; ಆದರೆ ಮಾನವ ಜೀವನದ ಅಂತಿಮ ಉದ್ದೇಶವೇನು ಎಂಬುದನ್ನು ಸ್ಪಷ್ಟವಾಗಿ ಹೇಳುವ ನಿಖರತೆ ಕೇವಲ ಸನಾತನ ಧರ್ಮದಲ್ಲಿ ಮಾತ್ರವಿದೆ. ಆದ್ದರಿಂದಲೇ ಭಾರತವು ಕೇವಲ ಒಂದು ಭೂಪ್ರದೇಶದ ಹೆಸರಲ್ಲ, ಆದರೆ ಒಂದು ಸರ್ವಶ್ರೇಷ್ಠ ಸಂಸ್ಕೃತಿ, ಜೀವನವನ್ನು ನಡೆಸುವ ಒಂದು ತೇಜಸ್ವಿ ಪರಂಪರೆ, ಅವಿನಾಶಿ ಧಾರ್ಮಿಕ ಜೀವನವಾಗಿದೆ. ಇದಕ್ಕಾಗಿಯೇ ಭಾರತವು ಒಂದು ಶಾಶ್ವತ ಆಧ್ಯಾತ್ಮಿಕ ರಾಷ್ಟ್ರವಾಗಿದೆ.
