ಬೆಂಗಳೂರು, ಡಿಸೆಂಬರ್ 17 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 21ನೇ ವಾರ್ಷಿಕ ಘಟಿಕೋತ್ಸವಕ್ಕೆ ಅಧಿಸೂಚನೆ ಪ್ರಕಟಿಸಿದ್ದು, 2013-14 ಮತ್ತು 2014-15 ರಲ್ಲಿ ಕರಾಮುವಿಯ ಆಂತರಿಕ ಶೈಕ್ಷಣಿಕ ಕಾರ್ಯಕ್ರಮಗಳಿಗೆ (ಇನ್ ಹೌಸ್ ಪ್ರೋಗ್ರಾಮ್ಸ್) ಪ್ರವೇಶಾತಿ ಪಡೆದು (ಸಹಭಾಗಿತ್ವ ಸಂಸ್ಥೆಗಳ ಪ್ರವೇಶಾತಿ ಹೊರತುಪಡಿಸಿ) ಏಪ್ರಿಲ್/ಮೇ 2024 ರವರೆಗೆ ಉತ್ತೀರ್ಣಗೊಂಡಿರುವ ಬಿ.ಎ., ಬಿ.ಕಾಂ., ಬಿ.ಲಿಬ್.ಐ. ಎಸ್ಸಿ., ಬಿ.ಎಡ್., ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ. ಪಿಜಿ ಡಿಪ್ಲ್ಲೊಮಾ, ಡಿಪ್ಲ್ಲೊಮಾ ಮತ್ತು ಸರ್ಟಿಫಿಕೇಟ್ ಶಿಕ್ಷಣ ಕ್ರಮಗಳ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ.
ಶುಲ್ಕ ಪಾವತಿಗೆ ಜನವರಿ 10, 2026 ಅಂತಿಮ ದಿನಾಂಕವಾಗಿದೆ. ಕರಾಮುವಿಯ ಈ ನಿರ್ಧಾರದಿಂದ ತೊಂಭತ್ತು ಸಾವಿರ (90,000) ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಹತ್ತು ವರ್ಷಗಳಿಂದ ಯುಜಿಸಿ ಮಾನ್ಯತೆ ಸಮಸ್ಯೆಯಿಂದ ಪದವಿ ಪ್ರಮಾಣ ಪತ್ರ ಇಲ್ಲದೆ ಆತಂಕ ಎದುರಿಸುತ್ತಿದ್ದ ವಿದ್ಯಾರ್ಥಿ ವೃಂದ ಸಮಾಧಾನ ಪಡುವಂತಾಗಿದೆ.
ಅರ್ಹ ವಿದ್ಯಾರ್ಥಿಗಳು ನಿಗದಿತ ದಿನಾಂಕದ ಒಳಗೆ www.ksoumysuru.ac.in ನಲ್ಲಿ ಆನ್ ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ, ಆನ್ ಲೈನ್ ಮೂಲಕವೇ ಶುಲ್ಕ ಪಾವತಿಸಿ ನಂತರ ಮುದ್ರಿತ ಅರ್ಜಿ ನಮೂನೆ ರಶೀದಿ ಜೊತೆಯಲ್ಲಿ ಎಲ್ಲಾ ಅಂಕಪಟ್ಟಿಗಳ ಪ್ರತಿಗಳನ್ನು ಲಗತ್ತಿಸಿ ಕರಾಮುವಿ ಪರೀಕ್ಷಾ ವಿಭಾಗಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು. ಅಂಕಪಟ್ಟಿಗಳಲ್ಲಿ ಎನ್.ಸಿ.ಎಲ್ ಇದ್ದಲ್ಲಿ ಮೊದಲಿಗೆ ಪರೀಕ್ಷಾ ವಿಭಾಗಕ್ಕೆ ಸೂಕ್ತ ದಾಖಲೆಗಳೊಂದಿಗೆ ಮನವಿ ಸಲ್ಲಿಸಿ ಎನ್.ಸಿ.ಎಲ್ ರದ್ದುಪಡಿಸಿ, ನಂತರ ಘಟಿಕೋತ್ಸವಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕರಾದ ಡಾ. ರೋಹಿತ್ ಹೆಚ್.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-26603664 ಹಾಗೂ 98805 26439 ಅನ್ನು ವಿದ್ಯಾರ್ಥಿಗಳು ಸಂಪರ್ಕಿಸಬಹುದಾಗಿದೆ.