ಆರೋಗ್ಯ ಮತ್ತು ಆಸ್ಪತ್ರೆ ನಿರ್ವಹಣಾ ಶಿಕ್ಷಣ ಸೇವೆಗಳ ಪ್ರಮುಖ ಕೇಂದ್ರ ಐಐಎಚ್‌ಎಮ್‌ಆರ್ 21ನೇ ಸಂಸ್ಥಾಪನಾ ದಿನಾಚರಣೆ

varthajala
0

 ಬೆಂಗಳೂರು; ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್, ಬೆಂಗಳೂರು ಐಐಎಚ್ ಆರ್ - ಬಿ ತನ್ನ 21ನೇ ಸಂಸ್ಥಾಪನಾ ದಿನಾಚರಣೆ ಮತ್ತು ಹಳೆಯ ವಿದ್ಯಾರ್ಥಿಗಳ ಸಭೆ-2025 ಎಲೆಕ್ಟ್ರಾನಿಕ್ ಸಿಟಿಫೇಸ್-1ರ ಸಂಸ್ಥೆಯ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಭವ್ಯವಾಗಿ ಆಯೋಜಿಸಲಾಯಿತು.

1984ರಲ್ಲಿ ಜೈಪುರದಲ್ಲಿ ಸ್ಥಾಪನೆಯಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್‌ಮೆಂಟ್ ರಿಸರ್ಚ್ ಸಂಸ್ಥೆಯು ದಕ್ಷಿಣ ಭಾರತದ ಅಂಗ ಸಂಸ್ಥೆಯಾಗಿ ಬೆಂಗಳೂರಿನಲ್ಲಿ 2004ರಲ್ಲಿ ಪ್ರಾರಂಭವಾಯಿತು. ಕಳೆದ ಎರಡು ದಶಕಗಳಲ್ಲಿ, ಈ ಸಂಸ್ಥೆ ಆರೋಗ್ಯ ಮತ್ತು ಆಸ್ಪತ್ರೆ ನಿರ್ವಹಣಾ ಶಿಕ್ಷಣ, ಬಹುಶಾಖಾ ಸಂಶೋಧನೆ. ತರಬೇತಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಲಹಾ ಸೇವೆಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ.
ಸಂಸ್ಥೆಯಲ್ಲಿ ಪ್ರಸ್ತುತ ಸ್ನಾತಕೋತ್ತರ ಮಟ್ಟದ ಪಿಜಿಡಿಎಂ ಕಾರ್ಯಕ್ರಮ ಮತ್ತು ಡಾಕ್ಟರಲ್ ಮಟ್ಟದ ಫೆಲೋಶಿಪ್ ಪ್ರೋಗ್ರಾಂ ಇನ್ ಮ್ಯಾನೇಜೆಂಟ್ ಅನ್ನು ನೀಡಲಾಗುತ್ತಿದ್ದು, ಆಸ್ಪತ್ರೆ ನಿರ್ವಹಣೆ, ಸಾರ್ವಜನಿಕ ಆರೋಗ್ಯ, ಆರೋಗ್ಯ ಮಾಹಿತಿ ತಂತ್ರಜ್ಞಾನ, ಔಷಧೀಯ ನಿರ್ವಹಣೆ, ಹಾಗೂ ಆರೋಗ್ಯ ಕ್ಷೇತ್ರದ ಎ ಐ ಮತ್ತು ಡೇಟಾ ಸೈನ್ಸ್ ಮೊದಲಾದ ವಿಶೇಷೀಕರಣಗಳನ್ನು ಒಳಗೊಂಡಿದೆ. ಐಐಎಚ್‌ಎಮ್‌ಆರ್  ಹಿರಿಯ ಸಲಹೆಗಾರ ಡಾ. ಸಿ. ಎಸ್. ಕೇದಾರ್, ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕರಾದಡಾ. ನಿಶಾ ವರದರಾಜ್,  ನಿರ್ದೇಶಕರಾದ ಡಾ.ಉಷಾ ಮಂಜುನಾಥ್ ಮತ್ತು ಡೀನ್ ಡಾ. ಆರ್. ಸರಳಾ ಮತ್ತಿತರರು ಭಾಗವಹಿಸಿದ್ದರು.
ದೇಶದ ವಿವಿಧ ರಾಜ್ಯಗಳು ಮತ್ತು ವಿದೇಶಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಸಹಸ್ರಾರು ಮಾಜಿ ವಿದ್ಯಾರ್ಥಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಆಸ್ಪತ್ರೆಗಳು, ಆರೋಗ್ಯ ತಂತ್ರಜ್ಞಾನ ಸಂಸ್ಥೆಗಳು,, ಔಷಧೀಯ ಕ್ಷೇತ್ರ, ಸಲಹಾ ಸಂಸ್ಥೆಗಳು ಮತ್ತು ಡಿಜಿಟಲ್ ಹೆಲ್ತ್ ಸಂಸ್ಥೆಗಳಲ್ಲಿನ ಪ್ರಮುಖ ನಾಯಕತ್ವ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಭಾಗವಹಿಸಿದ್ದರು.

Post a Comment

0Comments

Post a Comment (0)