ಎಡದಿಂದ, ಅನಂತ್ ಜೋಶಿ - ದಿವ್ಯಾಂಗ್ ಮೈತ್ರಿ ಕ್ರೀಡಾ ಅಕಾಡೆಮಿ ಮ್ಯಾನೇಜರ್, ಕ್ಷಮಾ ರಂಗನ್ - ಎಬಿಲಿಟಿ ಸ್ಪೋರ್ಟ್ಸ್ ಲೀಗ್ ಸಂಸ್ಥಾಪಕ, ದಾಸ್ ಸೂರ್ಯವಂಶಿ- ಕರ್ನಾಟಕ ಅಂಗವಿಕಲ ಆಯುಕ್ತ, ಅಶ್ವಲ್ ಗೌಡ - ಕಶಾಮಾ ಇನ್ನೋವೇಶನ್ ಫೌಂಡೇಶನ್,ಈ ಬಾರಿ ಒಟ್ಟು ಆರು ಫ್ರಾಂಚೈಸ್ ತಂಡಗಳು ಭಾಗವಹಿಸಿದ್ದು, IPL ಮಾದರಿಯ ಫಾರ್ಮ್ಯಾಟ್— ಲೀಗ್ ಪಂದ್ಯಗಳು, ಸೆಮಿಫೈನಲ್ಗಳು ಮತ್ತು ಗ್ರ್ಯಾಂಡ್ ಫೈನಲ್ — ಅನುಸರಿಸಲಾಗುತ್ತಿದೆ. ಡಿಸೆಂಬರ್ 13 ರಂದು ಫೈನಲ್ ಪಂದ್ಯ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ದೇಶದಾದ್ಯಂತ ಅಭಿಮಾನಿಗಳಿಗೆ ವೀಕ್ಷಣೆ ಸುಲಭವಾಗುವಂತೆ ಪೂರ್ಣ ಟೂರ್ನಮೆಂಟ್ FanCode ನಲ್ಲಿ ಲೈವ್ ಪ್ರಸಾರವಾಗುತ್ತಿದೆ. ಲೀಗ್ ಯಶಸ್ವಿಯಾಗಲು ಬೆಂಬಲ ನೀಡಿದ ಎಲ್ಲಾ ಪಾಲುದಾರರಿಗೆ ಆಯೋಜಕರು ಕೃತಜ್ಞತೆ ಸಲ್ಲಿಸಿದ್ದಾರೆ. ಟೇಕ್ ಸ್ಪೋರ್ಟ್ಸ್ ಶೀರ್ಷಿಕೆ ಪಾಲುದಾರರಾಗಿ ಇದ್ದು, ಸೈಕಲ್ (Principal Partner), ರೋಟರಿ ದಿಶಾ (Impact Partner), NPS (Jersey Partner) ಮತ್ತು FanCode (Live Streaming Partner ಪ್ರಮುಖ ಬೆಂಬಲ ನೀಡಿದ್ದಾರೆ. ಜೊತೆಗೆ moonwalkr, Red FM, Anand, Cognizant, Le Yantra, Kingfisher, DCCI, WCI, Evolute IQ, BPCA, BISFF, ALMT Legal ಮತ್ತು Auraclusiv ಸಹಭಾಗಿಗಳಾಗಿದ್ದಾರೆ.
ASL T20 2025 ಕ್ರಿಕೆಟ್ ಟೂರ್ನಮೆಂಟ್ ಮಾತ್ರವಲ್ಲ ಇದು ವಿಶೇಷ ಸಾಮರ್ಥ್ಯ ಹೊಂದಿದ ಕ್ರಿಕೆಟಿಗರ ಪ್ರತಿಭೆ, ಸಮರ್ಪಣೆ ಮತ್ತು ಛಲವನ್ನು ಮುಖ್ಯವಾಹಿನಿಗೆ ತರುವ ಚಳುವಳಿ ಎಂದು ಆಯೋಜಕರು ಹೇಳಿದ್ದಾರೆ. ಲೀಗ್ನ ಸಂದೇಶ — “ಸಾಮರ್ಥ್ಯಕ್ಕೆ ಮಿತಿಯೇ ಇಲ್ಲ”.
.jpeg)