ಶಕ್ತಿ ಯೋಜನೆಯಿಂದ ಮುಜರಾಯಿ ದೇವಾಲಯಗಳ ಆದಾಯ ಹೆಚ್ಚಳ : ಸಚಿವ ರಾಮಲಿಂಗಾರೆಡ್ಡಿ

varthajala
0

  ಬೆಂಗಳೂರು:  ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದು. ಇದರಿಂದ ರಾಜ್ಯದ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದೇವಸ್ಥಾನದ ಅದಾಯ ಗಣನೀಯವಾಗಿ ವೃದ್ದಿಸಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ಧಾರೆ. 

 ಕೋರಮಂಗಲ ನಂಜಪ್ಪ ರೆಡ್ಡಿ ಲೇಔಟ್ ನಲ್ಲಿರುವ ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ನಿಂದ ಆಯೋಜಿಸಿದ್ದ 43ನೇ ವೈಕುಂಠ ಏಕಾದಶಿ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷಪೂಜೆ ಸಲ್ಲಿಸಿ, ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದರು. ಬೆಳಗ್ಗೆಯಿಂದಲೇ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ದೇವಸ್ಥಾನದ ಸುತ್ತಮುತ್ತ ಹೂವು, ಹಣ್ಣು, ಕಾಯಿ ಮತ್ತು ಇನ್ನಿತರೆ ಮಳಿಗೆಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಇದ್ದರಿಂದ ವ್ಯಾಪಾರಿಗಳು ಆರ್ಥಿಕವಾಗಿ ಸಬಲವಾಗಿದ್ದಾರೆ ಎಂದರು. ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯುತ್ತಿದೆ. ಭಕ್ತಾದಿಗಳಿಗೆ ಸುವ್ಯವಸ್ಥೆ ಮಾಡಲಾಗಿದೆ. ವೈಕುಂಠ ಏಕಾದಶಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, 40 ಸಾವಿರ ಲಾಡುಗಳನ್ನು ವಿತರಿಸಲಾಗುತ್ತಿದೆ. 

 ನಮ್ಮ ಸರ್ಕಾರದ ಯೋಜನೆಗಳಿಗೆ ಮತ್ತು ರಾಜ್ಯದ ಅಭಿವೃದ್ಧಿಗೆ ಗೋವಿಂದನ ಕೃಪಾಶೀರ್ವಾದ ಇರಲಿ ಎಂದು ಆಶಿಸಿದರು. ಟ್ರಸ್ಟ್ ಅಧ್ಯಕ್ಷರಾದ ಎಸ್.ಜಯರಾಮರೆಡ್ಡಿ ಮಾತನಾಡಿ, 120ವರ್ಷಗಳ ಹಿಂದೆ ನಮ್ಮ ತಾತ ಹೊಲ ಉಳುಮೆ ಮಾಡುತ್ತಿದ್ದಾಗ ಮುತ್ತರಾಯಸ್ವಾಮಿ, ಈಶ್ವರನ ವಿಗ್ರಹ ಸಿಕ್ಕಿದ ನಂತರ ಈ ದೇವಸ್ಥಾನ ಪ್ರತಿಷ್ಟಾಪನೆ ಮಾಡಲಾಯಿತು. 

ಬಳಿಕ ವೆಂಕಟೇಶ್ವರನ ಪ್ರತಿಮೆ ಸ್ಥಾಪಿಸಲಾಯಿತು. ಗುರುಗಳ ಆಶೀರ್ವಾದ ಇರಬೇಕು ಎನ್ನುವ ದೃಷ್ಟಿಯಿಂದ ಸಾಯಿ ಬಾಬಾ, ದತ್ತಾತ್ರೇಯ, ಅದಿ ಶಂಕರಚಾರ್ಯ, ರಾಮಾನುಜ, ಮಾಧ್ವಚಾರ್ಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂದರು. 

Post a Comment

0Comments

Post a Comment (0)