ಹೈದರಾಬಾದ : ಸಮಾಜದಲ್ಲಿ ತುಂಬಿರುವ ಮೂಢನಂಬಿಕೆಯಿ0ದ ಭಕ್ತರು ಹೊರಗೆ ಬರಬೇಕು, ಭಕ್ತಿಯಿಂದ ದೇವರನ್ನು ಭಜಿಸಿ ಒಲಿಸಿಕೊಳ್ಳಬೇಕು.
ದೇವರ ಹೆಸರ ಮೇಲೆ ನಡೆಯುವ ಬಲಿ ನಿಲ್ಲಬೇಕು. ಶ್ರೇಷ್ಠ ಗುರು ಭಕ್ತಿ ಭಾವದಿಂದ ಕೃಷ್ಣ ನನ್ನು ಒಲಿಸಿಕೊಂಡಿರುವುದು ಕನಕದಾಸರು ನೀಡಿರುವ ತತ್ವ ಸಂದೇಶವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದು ಕರ್ನಾಟಕದ ಹಾಲುಮತ ಗುರುಪೀಠದ ಪರಂ ಪೂಜ್ಯ ರೇವಣ್ಣಸಿದ್ದೇಶ್ವರ ಶಾಂತಮಯ ಸ್ವಾಮಿಜಿ ನುಡಿದರು. ಅವರು ಭಾನುವಾರ ನಗರದ ಜಿಯಾಗೂಡ ನಗರಸಭೆ ಗ್ರೌಂಡನಲ್ಲಿ ಭಕ್ತ ಕನಕದಾಸರ 538ನೇ ಜಯಂತಿ ಉತ್ಸವದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು. ಆಸೆ ಎಂಬುದು ಇರಬಾರದು ಬಂಗಾರದ0ತ ಮಾತುಗಳ ನಿರಂತರವಾಗಿ ಕೇಳುತ್ತಿರಬೇಕು.ಶಿವಶರಣರ ವಚನದಂತೆ ಮಾತು ಮಾಣಿಕ್ಯದಂತಿರಬೇಕು. ಮಾತು ಪ್ರೀತಿಯ ಮಾತಾಡಬೇಕು. ಮಾತಿನಿಂದ ಜಗಳವಾಗಬಾರದು. ಮಾತಿನಿಂದ ಎಲ್ಲರೂ ಒಂದೇ ಕಡೆ ಸೇರಿರಬೇಕು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ನೆಲೆಸಬೇಕು ಅಂದಾಗ ಮಾತ್ರ ಮಾನವೀಯ ಮೌಲ್ಯಗಳು ಜೀವಂತವಾಗಿ ಇರಲ್ಲು ಸಾಧ್ಯವಿದೆ ಎಂದು ಶ್ರೀಗಳು ನುಡಿದರು. ಸಮಾರಂಭವು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ನಗರದ ಟ್ರಾಫಿಕ್ ಡಿಸಿಪಿ ಕನ್ನಡಿಗರಾದ ರಾಹುಲ ಹೆಗಡೆ ಐಪಿಎಸ್ ಇಂದು ನಾವು ಕರ್ನಾಟಕದ ಮಹಾನ್ ಕವಿ, ಭಕ್ತ ಮತ್ತು ಸಮಾಜ ಸುಧಾರಕರಾದ ಶ್ರೀ ಕನಕ ದಾಸರನ್ನು ಸ್ಮರಿಸಲು ಇಲ್ಲಿ ನಾವುಗಳು ಸೇರಿದ್ದೇವೆ. ತಮ್ಮ ಕಾವ್ಯ ಮತ್ತು ಕೀರ್ತನೆಗಳ ಮೂಲಕ ಅವರು ಜನರಿಗೆ ಸತ್ಯ, ನೀತಿ ಮತ್ತು ಮಾನವೀಯತೆಯ ಮಾರ್ಗವನ್ನು ತೋರಿಸಿದರು. ಎಂದು ಕನಕದಾಸರ ಕೀರ್ತನೆಗಳನ್ನು ಮೆಲುಕು ಹಾಕಿದರು. ಕನಕ ದಾಸರು ನಮಗೆ ಎರಡು ಸರಳ ಆದರೆ ಶಕ್ತಿಯುತ ಸಂದೇಶ ನೀಡಿದ್ದಾರೆ. 1) “ನಿಧಿಯಿಂದ ಧರ್ಮ, ಧರ್ಮದಿಂದ ನಿಧಿ.” ಅಂದರೆ - ನಮ್ಮ ಸಂಪತ್ತು ಧರ್ಮದ ಮಾರ್ಗದಲ್ಲಿ ಉಪಯೋಗವಾದಾಗ ಮಾತ್ರ ಮೌಲ್ಯವಿರುತ್ತದೆ. 2) ಮನುಜ ಹೇಳುವ ಮಾತು ಮಣಿಯಬೇಕು.” ಅಂದರೆ ಒಳ್ಳೆಯ ಮಾತು, ವಿನಯ, ಮಾನವೀಯತೆ ಸದಾ ಮುಖ್ಯ.ಉಡುಪಿಯ ಕನಕನ ಕಿಂಡಿ ಘಟನೆ ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಭಕ್ತನ ಶುದ್ಧ ಹೃದಯದ ಮುಂದೆ ದೇವರು ತಾನೇ ತಿರುಗಿ ದರ್ಶನ ನೀಡಿದ ಎಂಬುದು ಇಡೀ ಪ್ರಪಂಚಕೆ ಪ್ರಸಿದ್ದಿಯನ್ನು ಪಡೆದಿದೆ. ಭಕ್ತಿ, ಶ್ರಮ ಮತ್ತು ನಂಬಿಕೆಯ ಶಕ್ತಿಯನ್ನು ನಮಗೆ ಬೋಧಿಸುತ್ತದೆ. ಕನಕ ದಾಸರು ಎಲ್ಲರನ್ನು ಸಮಾನವಾಗಿ ನೋಡುವ ಗುಣವನ್ನು ಸಾರಿದರು.ಅವರ ಸಂದೇಶ ಇಂದು ನಮ್ಮ ಸಮಾಜಕ್ಕೂ ಬಹಳ ಮುಖ್ಯ ಜಾತಿ-ಭೇದ ಬೇಡ; ಮನುಷ್ಯನು ಮನುಷ್ಯನಾಗಿಯೇ ಬದುಕಬೇಕು, ನಾವು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರೂ, ಕನ್ನಡ, ಕರ್ನಾಟಕ ಮತ್ತು ನಮ್ಮ ಸಂಸ್ಕೃತಿ ಎಂದಿಗೂ ನಮ್ಮ ಹೃದಯದಿಂದ ದೂರವಾಗುವುದಿಲ್ಲ. ಎಲ್ಲರನ್ನು ಒಂದೇಡೆಗೆ ಸೇರಿಸುವಂತೆ ಕಾರ್ಯ ಮಾಡುತ್ತದೆ. ಒಕ್ಕಟೂ ಸಮಾಜದ ಅಭಿವೃದ್ದಿಗೆ ನಾಂದಿ ಹಾಡುತ್ತದೆ.ಇಂತಹ ಆಚರಣೆಗಳಿಂದ ನಮ್ಮನ್ನು ನಮ್ಮ ಮೂಲ ಮೌಲ್ಯಗಳಿಗೆ ಮತ್ತಷ್ಟು ಹತ್ತಿರ ಮಾಡುತ್ತದೆ ಎಂದು ರಾಹುಲ ಹೆಗಡೆ ಐಪಿಎಸ್ ನುಡಿದರು.ಇಂದು ಕನಕ ದಾಸರ ಉಪದೇಶಗಳನ್ನು ನೆನಪಿಸಿಕೊಂಡು, ನಾವು ದಿನನಿತ್ಯ ಜೀವನದಲ್ಲಿ, ಸತ್ಯವಾಗಿ ಬಾಳೋಣ, ಒಳ್ಳೆಯ ಮಾತಾಡೋಣ ಮತ್ತು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡೋಣ.ಇದು ನಾವು ಕನಕದಾಸರಿಗೆ ನಿಜವಾದ ಗೌರವ ನೀಡಿದಂತೆ, ಶ್ರೀ ಕನಕ ದಾಸರ ಕೃಪೆ ಎಲ್ಲರ ಮೇಲೂ ಇರಲಿ. ಎಲ್ಲರೂ ಸುಖವಾಗಿ, ಆರೋಗ್ಯವಾಗಿ ಮತ್ತು ಬೆಳವಣಿಗೆಯ ಹಾದಿಯಲ್ಲಿ ಮುಂದುವರಿಯಲಿ.” ಎಂದು ಎಲ್ಲರಿಗೂ ಶುಭಾಷಯ ಕೋರಿದರು. ಕನಕಶ್ರೀ ಪ್ರಶಸ್ತಿ ವಿತರಣೆ : ಹೈದರಾಬಾದ ನಗರದಲ್ಲಿ ಕನಕದಾಸ ಜಯಂತಿ ಮಾಡಲು ಸರ್ವ ರೀತಿಯಿಂದ ಸುಮಾರು 40 ವರ್ಷದಿಂದ ಸತತವಾಗಿ ಪ್ರಯತ್ನ ಮಾಡಿ ಇಂದು ಯಶಸ್ವಿಯಾಗಿ ಕನಕದಾಸ ಜಯಂತಿ ನಿರ್ವಹಿಸಲು ಶ್ರಮಿಸಿದ ಕುರುಬ ಸಮಾಜದ ಹಿರಿಯರು ಅನುಭಾವಿಗಳಾದ ವೈಜಿನಾಥಪ್ಪ ಹಿರೋಡೆ ಹಾಗೂ ಜಗನಾಥ (ಟೇಲರ್ )ಕುಂಟಬಿರ ಅವರಿಗೆ ಕನಕಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ತುಮಟುಂಟ ಅರುಣಕುಮಾರ, ಭಾಲ್ಕಿಯ ಬಾಲಾಜಿ ಜಬಾಡೆ, ನಾಗರಾಜ ಸೋರಾಳೆ, ದರಪಲ್ಲಿ ನರಸಿಂಹ, ಧರ್ಮೇಂದ್ರ ಪೂಜಾರಿ ಮಾತನಾಡಿದರು. ವೇದಿಕೆಯ ಮೇಲೆ ವೈಜಿನಾಥಪ್ಪ ಹಿರೋಡೆ, ಜಗನಾಥ ಕುಂಟಬಿರ್, ರಾಜಕುಮಾರ ಮನ್ನಳಿ, ಬಸವರಾಜ ಲಾರಾ, ಅಮರನಾಥ ಹಿರೋಡೆ, ಶಿವಾಜಿ ಕುಂಟಬಿರ್, ಪ್ರಭು ಪೂಜಾರಿ ಉಪಸ್ಥಿತರಿದರು. ಮೊದಲಿಗೆ ಕನಕದಾಸರ ಭಾವಚಿತ್ರಕ್ಕೆ ಪರಂಪೂಜ್ಯ ಶ್ರೀ ರೇವಣ್ಣಸಿದ್ದೇಶ್ವರ ಶಾಂತಮಯ್ಯ ಸ್ವಾಮಿಜಿ ಪೂಜೆ ಸಲ್ಲಿಸುವ ಮೂಲಕ ಪುಷ್ಪವೃಷ್ಠಿ ಮಾಡಿದರು. ವೈಜಿನಾಥಪ್ಪ ಹಿರೋಡೆ ಸ್ವಾಗತಿಸಿದರು. ಹಣಮಂತ ಹಿರೋಡೆ ನಿರೂಪಿಸಿದರು.Post a Comment
0Comments