ಕನ್ನಡದ ಸಿನಿಮಾಗಳನ್ನು ಹಿಂದಿ ಭಾಷೆಯಲ್ಲಿ ರೀಮೇಕ್‍ಗೊಳಿಸಿ ಯಶ ಕಂಡ ನಟ ಧಮೇರ್ಂದ್ರ ನಿಧನಕ್ಕೆ ಪರಿಷತನಲ್ಲಿ ಸಂತಾಪ

varthajala
0
ಬೆಳಗಾವಿ / ಬೆಂಗಳೂರು, 

ಕನ್ನಡದ ಸಿನಿಮಾಗಳಾದ ಗಂಧದ ಗುಡಿ, ತಾಯಿಗೆ ತಕ್ಕ ಮಗ, ಹುಲಿ ಹೆಬ್ಬುಲಿ ಚಿತ್ರಗಳನ್ನು ಹಿಂದಿ ಭಾಷೆಗೆ ರೀಮೇಕ್ ಮಾಡಿ ಯಶಸ್ವಿಗೊಳಿಸಿದ್ದ ಹಿಂದಿ ಚಿತ್ರರಂಗದ ನಟ ನರ‍್ಮಾಪಕ ಹಾಗೂ ಮಾಜಿ ಸಂಸದರಾಗಿದ್ದ ಪದ್ಮಭೂಷಣ ಧಮೇರ್ಂದ್ರ ಅವರ ನಿಧನಕ್ಕೆ ವಿಧಾನ ಪರಿಷತನಲ್ಲಿ ಸಂತಾಪ ಸೂಚಿಸಲಾಯಿತು.
1935ರ ಡಿಸೆಂಬರ್ 8ರಂದು ಪಂಜಾಬ್‍ನ ನಸ್ರಾಲಿಯಲ್ಲಿ ಜನಿಸಿದ್ದ ಶ್ರೀಯುತರು 24.11.2025ರಂದು ನಿಧನರಾದರು.
ಶ್ರೀಯುತರು ಮೆಟ್ರಿಕ್ಯುಲೇಷನ್‍ವರೆಗೆ ವ್ಯಾಸಂಗ ಮಾಡಿದ್ದು, 1960ರಲ್ಲಿ ಚಲನಚಿತ್ರ ರಂಗಕ್ಕೆ ಪಾದರ‍್ಪಣೆ ಮಾಡಿ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಇಂಡಿಯಾಟೈಮ್ಸ್ ಸರ‍್ವಕಾಲಿಕ ಟಾಪ್ 25 ಬಾಲಿವುಡ್ ಚಿತ್ರಗಳ ಪೈಕಿ ಶ್ರೀಯುತರು ನಟಿಸಿದ್ದ ಶೋಲೆ ಚಿತ್ರವನ್ನು ಅತ್ಯುತ್ತಮ ಚಿತ್ರ ಎಂದು ಪರಿಗಣಿಸಿ ವರ‍್ಷಿಕ ಫಿಲ್ಮಫೇರ್ ಪ್ರಶಸ್ತಿ ಸಮಾರಂಭದಲ್ಲಿ ವಿಶೇಷ ಪ್ರಶಸ್ತಿ ನೀಡಿಲಾಗಿತ್ತು. 1983ರಲ್ಲಿ ವಿಜಯತಾ ಫಿಲ್ಡ್ ನರ‍್ಮಾಣ ಕಂಪನಿ ಸ್ಥಾಪಿಸಿ, ಯಶಸ್ವಿ ಚಿತ್ರಗಳನ್ನು ನರ‍್ಮಿಸಿದ್ದರು.
ಶ್ರೀಯುತರು 2004 ರಿಂದ 2009ರವರೆಗೆ ಬಿಕಾನೆರ ಕ್ಷೇತ್ರದಿಂದ ಲೋಕಸಭೆಯ ಸದಸ್ಯರಾಗಿ ಕರ‍್ಯನರ‍್ವಹಿಸಿದ್ದರು.
ಶ್ರೀಯುತರು ಕಲೆ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಭಾರತ ರ‍್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಲಿವಿಂಗ್ ಲೆಜೆಂಡ್ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಪ್ರಶಸ್ತಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ನೊಬೆಲ್ ಪ್ರಶಸ್ತಿಗಳಲ್ಲದೆ ಇನ್ನು ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ಶ್ರೀಯುತರ ನಿಧನದಿಂದಾಗಿ ದೇಶವು ಒಬ್ಬ ಅತ್ಯುತ್ತಮ ನಟರನ್ನು ಕಳೆದುಕೊಂಡಂತಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆಯ ನರ‍್ಣಯ ಮಂಡಿಸಿದರು. ಮೃತರ ಗೌರವರ‍್ಥ ಸದಸ್ಯರು ಎದ್ದು ನಿಂತು ಒಂದು ನಿಮಿಷದ ಮೌನ ಆಚರಿಸಿದರು.

Post a Comment

0Comments

Post a Comment (0)