ಸದ್ವಿಚಾರಗಳ ಮೂಲಕ ಸಮಾಜ ಬೆಸೆಯುವ ಕಾರ್ಯವಾಗಲಿ: ಪುತ್ತಿಗೆ ಶ್ರೀಗಳ ಆಶಯ : ಕರಾವಳಿ ವಿಕಾಸ ಸಂಭ್ರಮ'- ಸಮಾಜವನ್ನು ಒಗ್ಗೂಡಿಸುವಲ್ಲಿ ಅರ್ಥಪೂರ್ಣ ಪ್ರಯತ್ನ

varthajala
0

ಉಡುಪಿ: ಮಾಧ್ಯಮಗಳಲ್ಲಿ ಸದ್ವಿಚಾರಗಳು ಮೂಡಿಬಂದು ಸಮಾಜವನ್ನು ಬೆಸೆಯುವ ಕಾರ್ಯವಾಗಬೇಕು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.


ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ 'ಸುಗುಣಮಾಲಾ' ಮಾಸಪತ್ರಿಕೆ ಹಾಗೂ ಬೆಂಗಳೂರಿನ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ 'ವಿಕಾಸ' ನೇತೃತ್ವದಲ್ಲಿ  ಗೀತಾ ಮಂದಿರದ ಪುತ್ತಿಗೆ ಶ್ರೀನೃಸಿಂಹ ಸಭಾಭವನದಲ್ಲಿ ನಡೆದ 'ಕರಾವಳಿ ವಿಕಾಸ ಸಂಭ್ರಮ' ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬ್ರಾಹ್ಮಣ ಸಮುದಾಯದ ಬಗ್ಗೆ ಕೆಲವರು ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಅದು ಸರಿಯಲ್ಲ. ಅದನ್ನು ಹೋಗಲಾಡಿಸಲು ಮಾಧ್ಯಮ ಕ್ಷೇತ್ರದಲ್ಲಿರುವ ವಿಪ್ರ ಪತ್ರಕರ್ತರೆಲ್ಲರೂ ಒಂದಾಗಬೇಕು ಎಂದು ಶ್ರೀಪಾದರು ಆಶಿಸಿದರು. ಪರ್ಯಾಯ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ ಕಾರ್ಣಿಕ್, ಉದ್ಯಮಿ ರಘುನಾಥ ಸೋಮಯಾಜಿ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು. ಪತ್ರಕರ್ತರಾದ ಪ್ರಕಾಶ್ ಇಳಂತಿಲ ಮತ್ತು ಜಿತೇಂದ್ರ ಕುಂದೇಶ್ವರ ಅಭ್ಯಾಗತರಾಗಿದ್ದರು.

ಈ ಸಂದರ್ಭದಲ್ಲಿ ಇಂದಿರಾ ನಾಡಿಗ್ ಅವರ 'ಹಸಿಗನಸು' ಕಾದಂಬರಿಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಆದಿತ್ಯ ಪ್ರಸಾದ್ ಅವರ 'ಗೋಪಾಳದಿಂದ ನೇಪಾಳದೆಡೆಗೆ' ಪ್ರವಾಸ ಕಥನವನ್ನು ಕಿನ್ನಿಗೋಳಿ 'ಯುಗಪುರುಷ' ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹಾಗೂ ಆಸ್ಟ್ರೇಲಿಯಾದ ಉಮೇಶ್ ದತ್ ಹಿಂದೂ ಧರ್ಮದ ಆಚರಣೆಗಳಿಗೆ ವೈಜ್ಞಾನಿಕ ತಳಹದಿಯ ಸಂಶೋಧನಾ ಪುಸ್ತಕ 'ದಿ ಅಸ್ಟ್ರೋ ಕೊಡೆಸ್ಟ್ಸ್' ಅನಾವರಣಗೊಳಿಸಲಾಯಿತು.

ಕಳೆದ 40 ವರ್ಷಗಳಿಂದ ಪುತ್ತಿಗೆ ಮಠದಿಂದ ಪ್ರಕಟವಾಗುತ್ತಿರುವ ಆಧ್ಯಾತ್ಮಿಕ ಮಾಸಪತ್ರಿಕೆ 'ಸುಗುಣಮಾಲಾ ನಡೆದುಬಂದ ದಾರಿ' ಕುರಿತು ಸಂಪಾದಕೀಯ ಸಲಹಾ ಮಂಡಳಿ ಸದಸ್ಯ ಓಂ ಪ್ರಕಾಶ್ ಭಟ್ ಮಾತನಾಡಿದರು. ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಎಂ. ಪ್ರಸನ್ನ ಆಚಾರ್ಯ, ಸುಗುಣಮಾಲಾ ಸಂಪಾದಕ ಮಹಿತೋಷ ಆಚಾರ್ಯ ಉಪಸ್ಥಿತರಿದ್ದರು.

'ವಿಕಾಸ' ಅಧ್ಯಕ್ಷ ಶ್ರೀನಾಥ ಜೋಶಿ ಮತ್ತು ಪ್ರಧಾನ ಕಾರ್ಯದರ್ಶಿ ಹನುಮೇಶ್ ಕೆ. ಯಾವಗಲ್ ವೇದಿಕೆಯಲ್ಲಿದ್ದರು. ಪ್ರಣವ ಮೀಡಿಯಾ ಹೌಸ್'ನ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಯೋಗ ಥೆರಪಿಸ್ಟ್ ಸ್ಫೂರ್ತಿ ಯಾವಗಲ್ ಅವರಿಂದ ಪ್ರಾರ್ಥನಾ ಕಥಕ್ ನೃತ್ಯ ನಡೆಯಿತು.

ಈ ಸಂದರ್ಭದಲ್ಲಿ 'ವಿಕಾಸ ಉಡುಪಿ ಶ್ರೀಕೃಷ್ಣ ಸದ್ಭಾವನಾ ಪ್ರಶಸ್ತಿ'ಯನ್ನು ಹಿರಿಯ ಭರತನಾಟ್ಯ ಕಲಾವಿದೆ ವಿದುಷಿ ಗಾಯತ್ರಿ ಚಂದ್ರಶೇಖರ್ ಮತ್ತು ದ್ರಾವಿಡ ವಿಶ್ವವಿದ್ಯಾಲಯದ ಡೀನ್ ಪ್ರೊ. ಬಿ.ಎಸ್. ಶಿವಕುಮಾರ್ ಅವರಿಗೆ, ವೈದ್ಯಲೋಕ- ಹೆಲ್ತ್ ವಿಷನ್ ಪ್ರಾಯೋಜಿತ 'ವಿಕಾಸ ವೈದ್ಯರತ್ನ' ಪ್ರಶಸ್ತಿಯನ್ನು ಡಾ.ಆನಂದ ಶೇಡ್ಬಾಳ, ಸಂಪದ ಸಾಲು ಪ್ರಾಯೋಜಿತ 'ವಿಕಾಸ ಸಂಗೀತ ರತ್ನ' ಪ್ರಶಸ್ತಿಯನ್ನು ವಿದುಷಿ ಪವನಾ ಬಿ. ಆಚಾರ್ ಮಣಿಪಾಲ ಅವರಿಗೆ ನೀಡಿ ಪುರಸ್ಕರಿಸಲಾಯಿತು.

'ಮಾಧ್ಯಮ ಲೋಕದ ಸವಾಲುಗಳು' ಕುರಿತ ವಿಚಾರಗೋಷ್ಠಿಯಲ್ಲಿ ಮಣಿಪಾಲ ಮಾಹೆ ಪ್ರೊ. ಸತ್ಯಬೋಧ ಜೋಶಿ, ಹಿರಿಯ ಪತ್ರಕರ್ತರಾದ ನಿತ್ಯಾನಂದ ಎಸ್. ಪಡ್ರೆ ಮತ್ತು ಡಾ.ಆಶಾ ಕೃಷ್ಣಸ್ವಾಮಿ ವಿಚಾರ ಮಂಡಿಸಿದರು. 










ಸ್ಮಾರಕ ಪ್ರಶಸ್ತಿ

ಹಲವಾರು ಹಿರಿಯ ಪತ್ರಕರ್ತರ ಸ್ಮರಣಾರ್ಥ ನೀಡುವ 'ವಿಕಾಸ ಮಾಧ್ಯಮ ಸಾಧಕ ಪ್ರಶಸ್ತಿ'ಗಳಾದ ಪಾ.ವೆಂ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ- ಕಿರಣ್ ಮಂಜನಬೈಲು ಉಡುಪಿ, ಬನ್ನಂಜೆ ಗೋವಿಂದಾಚಾರ್ಯ ಸ್ಮರಣಾರ್ಥ ಪ್ರಶಸ್ತಿ- ಡಾ.ಮಂದಾರ ರಾಜೇಶ ಭಟ್ ಮೂಡುಬಿದಿರೆ, ಬನ್ನಂಜೆ ರಾಮಾಚಾರ್ಯ ಸ್ಮರಣಾರ್ಥ ಪ್ರಶಸ್ತಿ- ಸಾಂತೂರು ಶ್ರೀನಿವಾಸ ತಂತ್ರಿ ಉಜಿರೆ, ದಾಮೋದರ ಕಕ್ರಣ್ಣಾಯ ಸ್ಮರಣಾರ್ಥ ಪ್ರಶಸ್ತಿ-  ಚಂದ್ರಶೇಖರ ಕುಳಮರ್ವ ಮಂಗಳೂರು (ಉಪಯುಕ್ತ ನ್ಯೂಸ್ ಸಂಪಾದಕರು), ಸಂತೋಷ್ ಕುಮಾರ್ ಗುಲ್ವಾಡಿ ಸ್ಮರಣಾರ್ಥ ಪ್ರಶಸ್ತಿ- ವೆಂಕಟೇಶ ಪೈ,ಸಂಜೆಪ್ರಭ  ಬೆಂಗಳೂರು, ದಾಮೋದರ ಐತಾಳ ಸ್ಮರಣಾರ್ಥ ಪ್ರಶಸ್ತಿ- ಶ್ವೇತ ಇಂದಾಜೆ ಮಂಗಳೂರು, ಕೊಡೆತ್ತೂರು ಅನಂತಪದ್ಮನಾಭ ಉಡುಪ ಸ್ಮರಣಾರ್ಥ ಪ್ರಶಸ್ತಿ- ಶ್ಯಾಮ್ ಹೆಬ್ಬಾರ್ ಬೆಂಗಳೂರು, ಈಶ್ವರಯ್ಯ ಅನಂತಪುರ ಸ್ಮರಣಾರ್ಥ ಪ್ರಶಸ್ತಿ- ಶ್ರೀಕೃಷ್ಣ ಭಟ್ ಮಾಯ್ಲೆಂಗಿ ಹಾಗೂ ಮಂಜುನಾಥ ಭಟ್ ಸ್ಮರಣಾರ್ಥ ಪ್ರಶಸ್ತಿ- ಹರೀಶ್ ಕೆ. ಆದೂರು ಮೂಡುಬಿದಿರೆ ಅವರಿಗೆ ಸಾಹಿತಿ ಡಾ. ವೀಣಾ ಬನ್ನಂಜೆ  ಪ್ರದಾನಿಸಿದರು. ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಸುಧೀಂದ್ರ  ದೇಶಪಾಂಡೆ   ಇದ್ದರು.

Post a Comment

0Comments

Post a Comment (0)