ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ, ಜೀವನ ಶೈಲಿ ,ನೈತಿಕ ಶಿಕ್ಷಣ, ಯೋಗ ಮತ್ತು ಮನೆಮದ್ದು ಕುರಿತು ಕಾರ್ಯಕ್ರಮ

varthajala
0

 


ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕು ತಿಪ್ಪಸಂದ್ರ ದಲ್ಲಿರುವ ಕೆ.ಪಿ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಿನಾಂಕ 16.12.2025 ರಂದು ಸಮಾಜ ಸಂಪರ್ಕ ವೇದಿಕೆ (ರಿ.) ಬೆಂಗಳೂರು ಹಾಗೂ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ.)  ಮಾಗಡಿ. ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಂತಹ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ, ಜೀವನ ಶೈಲಿ, ನೈತಿಕ ಶಿಕ್ಷಣ, ಯೋಗ ಮತ್ತು ಮನೆಮದ್ದು, ಈ ವಿಷಯಗಳ ಬಗ್ಗೆ ನುರಿತ ಉಪನ್ಯಾಸಕರು ಅರಿವು ಮೂಡಿಸಿದರು. ಯೋಗ ಪ್ರಾತ್ಯೇಕ್ಷಿಕೆ  ಬಗ್ಗೆ ಯೋಗ ಗುರುಗಳಾದ ವಿದ್ವಾನ್ ಡಾ. ಹೆಚ್. ಎ. ಕುಮಾರ್ ರವರು ಮಾತನಾಡಿ ಯೋಗ ಮತ್ತು ಮೌಲ್ಯ ಶಿಕ್ಷಣ ಆಧುನಿಕ ಯುಗದ ಅಗತ್ಯಗಳಲೊಂದು, 

ಇಂತಹ ಶಿಕ್ಷಣವನ್ನು ಬಾಲ್ಯದಲ್ಲಿಯೇ ಮಕ್ಕಳಿಗೆ ದೊರಕಿಸಿ ಕೊಡಬೇಕು  ಎಂದು ತಿಳಿಸಿದರು  ಹಾಗೂ ಆರೋಗ್ಯ ಶಿಕ್ಷಣವು ಎಲ್ಲಾ ವಯೋಮಾನದವರಲ್ಲಿ ಜ್ಞಾನ ಮತ್ತು ಆರೋಗ್ಯ ಅಭ್ಯಾಸಗಳನ್ನು ಉತ್ತೇಜಿಸುವ ವೇದಿಕೆಯನ್ನು ರೂಪಿಸಬೇಕು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಹಿಡಿದು ಮಾನಸಿಕ ಆರೋಗ್ಯದವರೆಗೆ ವ್ಯಾಪಕ ಶ್ರೇಣಿಯ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮತ್ತು ನೀತಿ ಮತ್ತು ಆರ್ಥಿಕ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಮೂಲಕ ಸಮುದಾಯದ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಆರೋಗ್ಯ -ಶಿಕ್ಷಣ ಮತ್ತು ಮನೆಮದ್ದು ವಿಷಯದ ಬಗ್ಗೆ ಡಾ. ಬಸವರಾಜ್‌ ಪ್ರಾಧ್ಯಾಪಕರು ರವರು ಆದಿಚುಂಚನಗಿರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ನಗರೂರು ಹಾಗೂ ಡಾ.ಸಿ.ನಂಜುಂಡಯ್ಯರವರು ಸಮಾಜ ಸಂಪರ್ಕ ವೇದಿಕೆ, ನಿರ್ದೇಶಕರು ಹಾಗೂ ನಿವೃತ್ತ ಪ್ರಾಂಶುಪಾಲರು ,  ಸಂಚಾಲಕರು ,ಮಾತನಾಡಿ ಸಂಸ್ಕಾರ, ಸಂಸ್ಕೃತಿ ಮಾನವೀಯ ಮೌಲ್ಯ, ವಿನಾಶದ ಅಂಚಿನಲ್ಲಿರು ಕಾಲಘಟ್ಟದಲ್ಲಿ ನಾವಿದ್ದು ಈಗಲೇ ಯುವ ಜನಾಂಗ ಎಚ್ಚೆತ್ತುಕೊಂಡು ನಮ್ಮ ಸಂಸ್ಕೃತಿ, ಸಂಸ್ಕಾರಯುತ ಸಮಾಜ ಕಟ್ಟಬೇಕಾಗಿದೆ ಎಂದು  ನೈತಿಕ ಶಿಕ್ಷಣದ ಬಗ್ಗೆ ಮತು ಪ್ರಾಸ್ತವಿಕ ನುಡಿಗಳನ್ನಡಿದರು ಹಾಗೂ ಜಿ .ಆರ್‌. ಗೋಪಾಲ್  ಉಪಪ್ರಾಂಶುಪಾಲರು  ಅಧ್ಯಕ್ಷತೆಯನ್ನ ವಹಿಸಿದ್ದರು, 


ಅತಿಥಿಗಳಾಗಿ  ಡಾ. ನರಸಿಂಹಮೂರ್ತಿ ಪ್ರಾಂಶುಪಾಲರು ಭಾಗವಹಿಸಿ  ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು, ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಹಾಗೂ ಜ್ಞಾನ ವಿಜ್ಞಾನ ಪುಸ್ತಕ ವಿತರಣೆ ಮಾಡಿದರು, ಶಾಲೆಯ ವಿದ್ಯಾರ್ಥಿಗಳು,  ಬೋಧಕ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು, ಡಿ ಜಿ ಗಂಗಾಧರ್‌ ಶಿಕ್ಷಕರು, ಕಾರ್ಯಕ್ರಮದ ನಿರೂಪಣೆಯನ್ನು  ಮಾಡಿದರು.

Post a Comment

0Comments

Post a Comment (0)