17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- ಅನ್ ಲೈನ್ ಮೂಲಕ ಮಾಧ್ಯಮ ನೋಂದಣಿ ಆರಂಭ

varthajala
0

 ಬೆಂಗಳೂರು : ಜನವರಿ 29ರಿಂದ ಫೆಬ್ರವರಿ 06 ರವರೆಗೆ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಮಾಧ್ಯಮ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಮಾಧ್ಯಮ ಮಿತ್ರರು https://biffes.org/ ವೆಬ್‍ಸೈಟ್‍ನಲ್ಲಿ Media Registration ಮೂಲಕ ತಮ್ಮ ಮಾಹಿತಿಯನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಮಾಡುವಾಗ ತಮ್ಮ ಹೆಸರು, ಇ-ಮೇಲ್, ವಿಳಾಸ, ಹುಟ್ಟಿದ ದಿನಾಂಕ ಮುಂತಾದ ಮಾಹಿತಿಗಳನ್ನು ದಾಖಲಿಸುವುದರ ಜೊತೆಗೆ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್  ಲೈಸನ್ಸ್ ಅಥವಾ ಪಾಸ್‍ಪೋರ್ಟ್ ಸಂಖ್ಯೆ ಸಲ್ಲಿಸುವುದರ (ಈ ದಾಖಲೆಗಳಲ್ಲಿ ಯಾವುದಾದರೂ ಒಂದು) ಜೊತೆಗೆ ಅದರ ಪೋಟೋ ಸಹ ಲಗತ್ತಿಸಬೇಕು. ಜೊತೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಕೊಟ್ಟಿರುವ ಮಾನ್ಯತೆ ಪತ್ರ ಅಥವಾ ಕೆಲಸ ಮಾಡುತ್ತಿರುವ ಮಾಧ್ಯಮ ಸಂಸ್ಥೆಯ ಐಡಿ ಕಾರ್ಡ್ ಲಗ್ಗತಿಸಿ ಮುಂದಿನ ಐದು ದಿನಗಳ ಒಳಗೆ ದಾಖಲಿಸಿಕೊಳ್ಳಬಹುದಾಗಿದೆ. 

ಮೀಡಿಯಾ ಪಾಸ್ ಅನುಮೋದನೆಗೊಂಡ ನಂತರ ಪಾಸುಗಳ ವಿತರಣೆ ಬಗ್ಗೆ ಇ-ಮೇಲ್ ಮೂಲಕ ತಿಳಿಸಲಾಗುವುದು. ನಂತರ ತಮ್ಮ ಪಾಸ್‍ಗಳನ್ನು ನಂದಿನಿ ಲೇಔಟ್‍ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿಯಲ್ಲಿ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದೆ.

Post a Comment

0Comments

Post a Comment (0)