ಬೆಂಗಳೂರು : ಅಖಿಲ ಭಾರತ ಪೊಲೀಸ್ ಕ್ರೀಡಾ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ಸಿಆರ್‍ಪಿಎಫ್, ಕರ್ನಾಟಕ ಮತ್ತು ಕೇರಳ ವಲಯ, ಗ್ರೂಪ್ ಸೆಂಟರ್ ಸಿಆರ್‍ಪಿಎಫ್, ಯಲಹಂಕ ವತಿಯಿಂದ ಬೆಂಗಳೂರಿನ ಆಲೂರಿನ ಕೆಎಸ್‍ಸಿಎ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಿದ್ದ ವಲಯ-ಬಿ ನ 2ನೇ ಅಖಿಲ ಭಾರತ ಪೊಲೀಸ್ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ದಕ್ಷಿಣ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರವಿದೀಪ್ ಸಿಂಗ್ ಸಾಹಿ ಅವರು ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೈಹಿಕ ಸದೃಢತೆಯನ್ನು ಉತ್ತೇಜಿಸುವಲ್ಲಿ, ಶಿಸ್ತನ್ನು ಬೆಳೆಸುವಲ್ಲಿ, ತಂಡದ ಕೆಲಸವನ್ನು ಬಲಪಡಿಸುವಲ್ಲಿ ಮತ್ತು ಪೊಲೀಸ್ ಪಡೆಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವಲ್ಲಿ ಕ್ರೀಡೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕ್ರೀಡಾ ಮನೋಭಾವ, ಏಕತೆ, ಶಿಸ್ತು ಮತ್ತು ಸೌಹಾರ್ದತೆಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.
2ನೇ ಅಖಿಲ ಭಾರತ ಪೊಲೀಸ್ ಟಿ-20 ಕ್ರಿಕೆಟ್ ಟೂರ್ನಮೆಂಟ್ - ವಲಯ ಬಿ ಇಂದಿನಿಂದ 2026 ನೇ ಫೆಬ್ರವರಿ 01 ರವರೆಗೆ ಆಲೂರಿನ ಕೆಎಸ್‍ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳ ಹತ್ತು ತಂಡಗಳು ಭಾಗವಹಿಸಲಿವೆ. ನಂತರ ಕರ್ನಾಟಕ ಮತ್ತು ಕೇರಳದ ರೋಮಾಂಚಕ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಸ್ಕøತಿಕ ಪ್ರದರ್ಶನಗಳು ನಡೆದವು.
ಈ ಸಮಾರಂಭವನ್ನು ಕೆಎಸ್‍ಸಿಎ ನ ಕೇರಳ ಮತ್ತು ಕರ್ನಾಟಕ ವಲಯದ ಪೊಲೀಸ್ ಮಹಾನಿರ್ದೇಶಕ ಡಾ. ವಿಪುಲ್ ಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಅವರ ನಾಯಕತ್ವ ಮತ್ತು ಮಾರ್ಗದರ್ಶನವು ಪಡೆಯೊಳಗೆ ಕ್ರೀಡೆ ಮತ್ತು ಕಲ್ಯಾಣ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಮಾರಂಭದಲ್ಲಿ ಕೆಎಸ್‍ಸಿಎ ಕಾರ್ಯದರ್ಶಿ ಸಂತೋμï ಮೆನನ್, ಸಿಆರ್‍ಪಿಎಫ್ ಮತ್ತು ಇತರ ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.