ಮಹಾರಾಷ್ಟ್ರ ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ 5 ಮಂದಿ ಸಹ ಪ್ರಯಾಣಿಕರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ

varthajala
0

  ಬೆಂಗಳೂರು : ಮಹಾರಾಷ್ಟ್ರ ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮತ್ತು ಇತರ 5 ಮಂದಿ ಸಹ ಪ್ರಯಾಣಿಕರು ಈ ದಿನ ಬೆಳಿಗ್ಗೆ ವಿಮಾನ ಅಪಘಾತದಲ್ಲಿ ನಿಧನರಾಗಿರುವುದಕ್ಕೆ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರು ಸಂತಾಪ ವ್ಯಕ್ತಪಡಿಸಿದರು. ಅಜಿತ್ ಪವಾರ್ ಅವರು ಅಹಮದ್ ನಗರದ ದಿಯೊಲಾಲಿಯಲ್ಲಿ ಜನಿಸಿದ್ದು, 1982ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿಗೆ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಶ್ರೀಯುತರು ಪುಣೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 1991ರಲ್ಲಿ ಬಾರಾಮತಿ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದ ಅವರು ಕೇಂದ್ರ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕೃಷಿ ಮತ್ತು ವಿದ್ಯುತ್ ಖಾತೆ ರಾಜ್ಯ ಸಚಿವರಾಗಿ, ಮಣ್ಣು ಸಂರಕ್ಷಣೆ, ವಿದ್ಯುತ್ ಮತ್ತು ಯೋಜನಾ ರಾಜ್ಯ ಸಚಿವರಾಗಿ, ನೀರಾವರಿ ಇಲಾಖೆಯ ಸಂಪುಟ ದರ್ಜೆ ಸಚಿವರಾಗಿ, ಗ್ರಾಮೀಣಾಭಿವೃದ್ಧಿ ಸಚಿವರಾಗಿ ಹಾಗೂ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದ ವಿವಿಧ ಸರ್ಕಾರಗಳ ಆರು ಅವಧಿಗೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರು ಪ್ರಸ್ತುತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಂಪುಟದಲ್ಲಿಯೂ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಡವರ, ದೀನ ದಲಿತರ ಮತ್ತು ರೈತರ ದನಿಯಾಗಿ, ನೇರ ನಿಷ್ಠುರ ಮತ್ತು ದಿಟ್ಟ ರಾಜಕಾರಣಿ, ಹಿರಿಯ ಸಹಕಾರಿ ದುರೀಣ. ಅಜಿತ್ ದಾದಾ ಎಂದೇ ಖ್ಯಾತರಾಗಿದ್ದ ಶ್ರೀಯುತರು ಈ ದಿನ ಅವರ ಕ್ಷೇತ್ರವಾದ ಬಾರಾಮತಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿಮಾನದಲ್ಲಿ ತೆರಳುತ್ತಿದ್ದಾಗ ಉಂಟಾದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 
ಮಹಾರಾಷ್ಟ್ರ ರಾಜ್ಯದ ಹಿರಿಯ ರಾಜಕಾರಣಿ ಅಜಿತ್ ಪವಾರ್ ಅವರು ದಿನಾಂಕ 28-01-2026ರಂದು ನಿಧನ ಹೊಂದಿರುತ್ತಾರೆ ಎಂದು ಸದನದಲ್ಲಿ ತಿಳಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಅವರು ಸಂತಾಪ ಸೂಚನೆಗೆ ಬೆಂಬಲ ಸೂಚಿಸಿ ಅಜಿತ್ ಪವಾರ್ ಅವರು ದೇಶ ಕಂಡ ಓರ್ವ ವಿಶೇಷ ರಾಜಕಾರಣಿ. 10 ವರ್ಷದ ಅವಧಿಯಲ್ಲಿ ರಾಜಕೀಯ ನಾಯಕತ್ವದ ರೀತಿ, ಕೆಲಸದ ವೈಖರಿ, ತಮ್ಮ ಕಡೆ ಸೆಳೆದುಕೊಳ್ಳುವ ಹಾಗೆ ಇದ್ದು ಸಾರ್ವಜನಿಕರಿಗೆ ಬೆಳಿಗ್ಗೆ 6.30 ಗಂಟೆಯಿಂದಲೇ ಭೇಟಿ ನೀಡಲು ಅವಕಾಶ ನೀಡಲಾಗಿತ್ತು. ಶರತ್ ಪವಾರ್ ಅವರು ಬಾನಾಮತಿ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಮುಖಾಂತರ ಕೃಷಿಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಕನ್ನಡಿಗರ ಬಗ್ಗೆ ಕರ್ನಾಟಕದ ಬಗ್ಗೆ ಸುಮಧುರ ಭಾವನೆ ಹೊಂದಿದ್ದಲ್ಲದೇ ಕರ್ನಾಟಕದ ಕುರಿತು ಅನುಕೂಲಕರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಕ್ರಿಯಾಶೀಲ ನಾಯಕ. ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿ ಮೃತರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು. 
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಸಂತಾಪಕ್ಕೆ ಬೆಂಬಲ ವ್ಯಕ್ತಪಡಿಸಿ ಅಜಿತ್ ಪವಾರ್ ಅವರು ಜನಸಾಮಾನ್ಯರ ರೀತಿ ಕೆಲಸ ಮಾಡುತ್ತಿದ್ದರು. ಏಳು ಬಾರಿ ಶಾಸಕರಾಗಿ 6 ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದಾರೆ. ಕೈಗಾರಿಕೆ, ಕೃಷಿ, ನಗರಾಭಿವೃದ್ಧಿ ಖಾತೆಗಳಿಗೆ ಒತ್ತು ನೀಡಿದ್ದಾರೆ. ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಖಾತೆಗಳಿಗೆ ಶಕ್ತಿ ತುಂಬುತ್ತಿದ್ದರು. ಭಗವಂತನು ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.  
ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಲಕ್ಷ್ಮಣ್ ಸವದಿ, ಹಾಗೂ ಸದಸ್ಯರಾದ ಸುರೇಶ್ ಬಾಬು ಅವರುಗಳು ಸಂತಾಪಕ್ಕೆ ಬೆಂಬಲ ವ್ಯಕ್ತಪಡಿಸಿ ಅಜಿತ್ ಪವಾರ್ ರವರು ಮುತ್ಸದ್ಧಿ ರಾಜಕಾರಣಿ, ಸಹಕಾರಿ ರಂಗದಲ್ಲಿ ಅವರು ಮಾಡಿರುವ ಸೇವೆ ಶ್ಲಾಘನೀಯ. ಅಭಿಮಾನಿ ಬಳಗಕ್ಕೆ ನೋವಾಗಿದೆ. ಅಜಿತ್ ಪವಾರ್ ಅವರು ಮತ್ತೊಮ್ಮೆ ಹುಟ್ಟಿಬರಲಿ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ದುರ್ಘಟನೆಯಲ್ಲಿ ತೀರಿಕೊಂಡಿರುವುದು ವಿμÁದÀನೀಯ ಎಂದು ತಮ್ಮ ಸಂತಾಪ ಸೂಚನೆಗೆ ಬೆಂಬಲವನ್ನು ಸೂಚಿಸಿ ಮಾತನಾಡಿದರು. ನಂತರ ಎರಡು ನಿಮಿಷಗಳ ಕಾಲ ಮೌನವನ್ನು ಸಲ್ಲಿಸುವ ಮೂಲಕ ಮೃತರಿಗೆ ನಮನ ಸಲ್ಲಿಸಲಾಯಿತು.

Post a Comment

0Comments

Post a Comment (0)