ಬೆಂಗಳೂರು :ರಾಜ್ಯದ ಸಕ್ಕರೆ ಕಾರ್ಖಾನೆಗಳು 2025-26ನೇ ಸಾಲಿನಲ್ಲಿ 2026ನೇ ಜನವರಿ 15ಕ್ಕೆ ಕೊನೆಗೊಳ್ಳುವಂತೆ ಶೇಕಡ 75ರಷ್ಟು ಕಬ್ಬು ನುರಿಸುವ ಕಾರ್ಯವನ್ನು ಮುಗಿಸಿರುತ್ತವೆ ಅಲ್ಲದೇ ಕಳೆದ 202425ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು 521.67 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಿರುತ್ತವೆ ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಲಯದ ಆಯುಕ್ತರು ತಿಳಿಸಿದ್ದಾರೆ.
ಪ್ರಸಕ್ತ ಹಂಗಾಮಿನಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಕಾರ್ಖಾನೆಗಳು 2026ನೇ ಜನವರಿ 15ಕ್ಕೆ ಕೊನೆಗೊಳ್ಳುವಂತೆ 390.83 ಲಕ್ಷ ಮೆಟ್ರಿಕ್ ಕಬ್ಬು ನುರಿಸಿರುತ್ತವೆ. ಸಕ್ಕರೆ ಕಾಖಾನೆಗಳು ಈಗಾಗಲೇ ಘೋಷಿಸಿರುವಂತೆ ಕಬ್ಬು ಕಟಾವು ಮತ್ತು ಸಾಗಾನಿಕೆ ವೆಚ್ಚವು ಸೇರಿದಂತೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪಾವತಿಸಿಬೇಕಾದ ಒಟ್ಟು ಕಬ್ಬು ಬಿಲ್ಲು ಮೊತ್ತ ರೂ. 15609.01 ಕೋಟಿಗಳಷ್ಟಾಗಿದ್ದು, ಈ ಪೈಕಿ ಕಾರ್ಖಾನೆಗಳು ರೂ. 10935.58 ಕೋಟಿಗಳಷ್ಟು ಪಾವತಿಸಿದ್ದು, ಇನ್ನೂ ರೂ. 4682.18 ಕೋಟಿಗಳಷ್ಟು ಪಾವತಿಸಲು ಬಾಕಿ ಇರುತ್ತದೆ. ಪ್ರಸಕ್ತ ಹಂಗಾಮು ಚಾಲ್ತಿಯಲ್ಲಿರುವುದರಿಂದ ಕಬ್ಬು ಬಿಲ್ಲು ಬಾಕಿ ಪಾವತಿಸಲು ಅವಕಾಶವಿರುತ್ತದೆ. ಕಬ್ಬು ಬಿಲ್ಲು ಪಾವತಿ ಪ್ರಮಾಣ ಶೇಕಡ 70 ರಷ್ಟು ಆಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Post a Comment
0Comments