ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಹಾಯ ಧನ ಪಡೆಯಲು ಸುಳ್ಳು ದಾಖಲೆ ಸಲ್ಲಿಸಿದವರ ವಿರುದ್ಧ ಎಫ್.ಐ.ಆರ್ ದಾಖಲೆ

varthajala
0

 ಬೆಂಗಳೂರು: ಕರ್ನಾಟಕ Pಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮದುವೆ ಸಹಾಯಧನ ಪಡೆಯಲು ಸುಳ್ಳು ದಾಖಲೆ ಸಲ್ಲಿಸಿದ ಸತ್ಯಪ್ಪ ಕೆಂಚಪ್ಪ ಹಣಬರಟ್ಟಿ ಸಾ. ಜನತಾ ಪ್ಲಾಟ್ ಮೋದಗಾ ತಾ:ಜಿ ಬೆಳಗಾವಿ ಮತ್ತು ರಾಮು ಸಿದ್ದಪ್ಪ ಶಿಂದೆ ಸಾ. ಸುಳೇಬಾವಿ ತಾಜಿ ಬೆಳಗಾವಿ ಇವರನ್ನು ಪತ್ತೆಹಚ್ಚಿ ಬೆಳಗಾವಿ ನಗರ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್.ಐ.ಆರ್ ದಾಖಲಿಸಲಾಗಿರುತ್ತದೆ.ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಲವು ಕಾರ್ಯಕ್ರಮಗಳನ್ನು ಯೋಜನೆಗಳನ್ನು  ಜಾರಿಗೊಳಿಸಲಾಗಿದ್ದು, ವಿವಿಧ ಸೌಲಭ್ಯಗಳಡಿಯಲ್ಲಿ ಸಹಾಯ ಧನಗಳನ್ನು ನೀಡಲಾಗುತ್ತಿದೆ.

ಈ ಸೌಲಭ್ಯಗಳನ್ನು ಪಡೆಯಲು ಹಾಗೂ ನೋಂದಣಿಯಾಗಲು ನಕಲಿ/ತಿರುಚಿದ/ಸುಳ್ಳು ದಾಖಲೆಗಳನ್ನು ಸಲ್ಲಿಸುವುದು ಶಿಕ್ಷಾರ್ಹ ಅಪರಾಧ.  ಈ ಸಂಬಂಧ ಮಂಡಳಿಯು ಹಲವು ಕ್ರಮಗಳನ್ನು ಕೈಗೊಂಡು ಅನರ್ಹ ಕಾರ್ಮಿಕರ ನೋಂದಣಿಯನ್ನು ರದ್ದುಪಡಿಸಿರುತ್ತದೆ.  ಅರ್ಹವಲ್ಲದ ಸೌಲಭ್ಯದ ಅರ್ಜಿಗಳನ್ನು ಹಾಗೂ ಸುಳ್ಳು ದಾಖಲೆಗಳನ್ನೊಳಗೊಂಡ ಸೌಲಭ್ಯದ ಅರ್ಜಿಗಳನ್ನು ತಿರಸ್ಕರಿಸಿ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಹಾಗೂ ಹಲವು ಬಾರಿ ಕಾರ್ಮಿಕ ಕಾರ್ಡ್‍ನ್ನು ಹಿಂದಿರುಗಿಸಿ ನೋಂದಣಿಯನ್ನು ರದ್ದುಪಡಿಸಿಕೊಳ್ಳುವಂತೆ ಮನವಿಯನ್ನು ಮಾಡಲಾಗಿರುತ್ತದೆ.
ಆದಾಗ್ಯೂ ಇಂತಹ ಪ್ರಕರಣಗಳು ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಶೀಲನೆಯನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಮಂಡಳಿಯ ಸೌಲಭ್ಯಗಳನ್ನು ಪಡೆಯಲು/ನೋಂದಣಿಯಾಗಲು ನಕಲಿ/ತಿರುಚಿದ/ಸುಳ್ಳು ದಾಖಲೆಗಳನ್ನು ಸಲ್ಲಿಸುವುದು ಶಿಕ್ಷಾರ್ಹ ಅಪರಾಧವೆಂದು ಅವರ ವಿರುದ್ಧ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)