ಅನುವಾದಿತ ಪುಸ್ತಕಗಳಿಗೆ 2025ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳ ಆಹ್ವಾನ

varthajala
0

 ಬೆಂಗಳೂರು : ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ನೀಡಿಕೆಗೆ ಸಂಬಂಧಿಸಿದಂತೆ 2025ನೇ ಸಾಲಿನಲ್ಲಿ 2025 ಜನವರಿ 01 ರಿಂದ 2025 ರ ಡಿಸೆಂಬರ್ 31 ರವರೆಗಿನ ಅವಧಿಯಲ್ಲಿ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳನ್ನು ಹಾಗೂ ಅನುವಾದ ಅಧ್ಯಯನವನ್ನು ಕುರಿತ ಪುಸ್ತಕಗಳನ್ನು 2025 ನೇ ಸಾಲಿನ ಪುಸ್ತಕ ಬಹುಮಾನ ನೀಡಿಕೆಗಾಗಿ ಅರ್ಹ ಅನುವಾದಕರು/ಪ್ರಕಾಶಕರಿಂದ ಆಹ್ವಾನಿಸಲಾಗಿದೆ. ಕನ್ನಡದಿಂದ ಇತರ ಯಾವುದೇ ಭಾಷೆಗಾಗಲೀ ಇಲ್ಲದೇ ಇತರ ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಪ್ರಥಮ ಆವೃತ್ತಿಯಲ್ಲಿ ಪ್ರಕಟಗೊಂಡಿರುವ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ. 2025ರ ಸಾಲಿನಲ್ಲಿ ಅನುವಾದ ಸಾಹಿತ್ಯವನ್ನು ಕುರಿತ ಅಧ್ಯಯನ ಪುಸ್ತಕಗಳನ್ನು ಕೂಡ ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ. 

ಪ್ರಥಮ ಆವೃತ್ತಿಯಲ್ಲಿ 2025ರ ಸಾಲಿನಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳ ಬಗ್ಗೆ ಮಾಹಿತಿ ಇರುವವರು ಸಹ ಪುಸ್ತಕಗಳನ್ನು ಕಚೇರಿಗೆ ಕಳುಹಿಸಿಕೊಡಬಹುದಾಗಿದೆ. ಬಹುಮಾನಿತ ಕೃತಿಗಳಿಗೆ ಪ್ರಾಧಿಕಾರವು ನಿಗದಿಪಡಿಸಿದ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ.ಪುಸ್ತಕ ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು 2025ನೆಯ ಸಾಲಿನಲ್ಲಿ ಪ್ರಕಟಿತವಾದ ಅನುವಾದಿತ ಪ್ರಕಟಣೆಗಳ ಪ್ರತಿ ಪುಸ್ತಕದ ತಲಾ ನಾಲ್ಕು ಪ್ರತಿಗಳನ್ನು ಉಚಿತವಾಗಿ ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜ್ಞಾನಭಾರತಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056 ಹಾಗೂ ದೂರವಾಣಿ ಸಂಖ್ಯೆ : 23183311/12 ಕಚೇರಿಗೆ ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ 2026 ರ ಮಾಚ್ 31 ರೊಳಗಾಗಿ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಾಲತಾಣ www.kuvempubhashabharathi.karanataka.gov.in ಗೆ ಸಂಪರ್ಕಿಸಬಹುದು ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)