ಬೆಂಗಳೂರು : ಪ್ರತಿ ವರ್ಷವೂ ಜನವರಿ 25 ನೇ ತಾರೀಖಿನಂದು “ರಾಷ್ಟ್ರೀಯ ಮತದಾರರ ದಿನಾಚರಣೆ” ಆಚರಿಸುತ್ತಿದ್ದು, ಅಂದು ಪ್ರತಿಜ್ಞಾ ಬೋಧನಾ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಆದರೆ ಈ ಬಾರಿ ಜನವರಿ 25 ನೇ ತಾರೀಖಿನಂದು ಸಾರ್ವತ್ರಿಕ ರಜಾ ದಿನವಾದ್ದರಿಂದ, ಈ ವರ್ಷ ಜನವರಿ 23 ರ ಶುಕ್ರವಾರದಂದು “ರಾಷ್ಟ್ರೀಯ ಮತದಾರರ ದಿನಾಚರಣೆ” ಆಚರಿಸಲಾಗುತ್ತಿದೆ.
ಜನವರಿ 23 ರಂದು ತಮ್ಮ ಕಛೇರಿಗಳಲ್ಲಿಯೂ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಹಾಗೂ “ರಾಷ್ಟ್ರೀಯ ಮತದಾರರ ದಿನಾಚರಣೆ” ಲೋಗೋ ವನ್ನು ಅಧಿಕೃತ ಸ್ಟೇಷನರಿ, ಸರಕು, ವೆಬ್‍ಸೈಟ್‍ಗಳಲ್ಲಿ ಸೂಕ್ತವಾಗಿ ಉಪಯೋಗಿಸುವಂತೆ ಹಾಗೂ #ಓಗಿಆ2026 ಹ್ಯಾಶ್‍ಟ್ಯಾಗ್ ಉಪಯೋಗಿಸಿ ಈ ದಿನಾಚರಣೆಗೆ ಸಂಬಂಧಿಸಿದಂತೆ ನಡೆಸುವ ಚಟುವಟಿಕೆಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಾಧ್ಯವಾದಲ್ಲಿ ಚಿತ್ರಗಳನ್ನು ಅಪ್‍ಲೋಡ್ ಮಾಡುವಂತೆ ಹಾಗೂ ಸಂಬಂಧಪಟ್ಟವರಿಗೆ ಸೂಕ್ತ ಸೂಚನೆಗಳನ್ನು ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ರಾಜಕೀಯ ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Post a Comment
0Comments