ಸಾಲುಮರದ ತಿಮ್ಮಕ್ಕ ಸೇವಾರತ್ನ ಪ್ರಶಸ್ತಿ -2026 ಪ್ರಧಾನ

varthajala
0

 ಬೆಂಗಳೂರಿನಲ್ಲಿ ಸುವರ್ಣ ಕರ್ನಾಟಕ ಮಾನವ ಹಕ್ಕುಗಳ  ಸಂಸ್ಥೆ ಹಾಗೂ ಡಾ ನಾಗಲಕ್ಷ್ಮಿ ಚೌದರಿ ಜನಸೇವಾ ಸಂಸ್ಥೆ ವತಿಯಿಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸೇವಾರತ್ನ ಪ್ರಶಸ್ತಿ -2026  ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಸಿ ಎಂ ಗಣೇಶ್ ಗೌಡ್ರು ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 


ಈ ವೇಳೆ ದಿವ್ಯ ಸಾನಿಧ್ಯವನ್ನು  ಶ್ರೀ ನಿಶ್ಚಲಾನಂದ ನಾಥ ಮಹಾಸ್ವಾಮೀಜಿ ವಹಿಸಿದ್ದರು. 
ಮುಖ್ಯ ಅತಿಥಿಗಳಾಗಿ ಸಹಕಾರ  ಸಂಘಗಳ ಅಪರ ನಿಬಂಧಕರು ಲಕ್ಷ್ಮೀಪತಯ್ಯ ಕೆ. ಎ. ಎಸ್, ಪೊಲೀಸ್ ಅಧಿಕಾರಿಗಳಾದ ಬಸವರಾಜ್ ಮಾಲಗತ್ತಿ, 

 ರಾಜಾಜಿನಗರ ಇ ಎಸ್ ಐ ಸಿ ಹಾಸ್ಪಿಟಲ್ ಚರ್ಮರೋಗ ವಿಭಾದ ಮುಖ್ಯಸ್ಥರಾದ ಡಾ ಗಿರೀಶ್ ಎಂ ಎಸ್ ರವರಿಗೆ ಸಾಲು ಮರದ ತಿಮ್ಮಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Post a Comment

0Comments

Post a Comment (0)