ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಶುಕ್ರವಾರದ (ಜನವರಿ 30) ವಿಶೇಷತೆಗಳು

varthajala
0

 ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ನೆರ‍್ಲ್ಯಾಂಡ್ ನ ‘ಪರ‍್ಟ್ ಬ್ಯಾಗೇಜ್‍’ನ ಪ್ರರ‍್ಶನದ ಮೂಲಕ ಚಿತ್ರೋತ್ಸವ ಪ್ರಾರಂಭವಾಗಲಿದೆ. ಈ ಚಿತ್ರವನ್ನು ನೋಡಲಾಗದವರಿಗೆಂದೇ, ಚಿತ್ರವನ್ನು ಇಂದು ಮರುಪ್ರರ‍್ಶಿಸಲಾಗುತ್ತಿದೆ. ಸಿನಿಪೊಲಿಸ್‍ನ ಐದನೇ ಸ್ಕ್ರೀನ್‍ನಲ್ಲಿ ಮಧ್ಯಾಹ್ನ 3.10ಕ್ಕೆ ಈ ಚಿತ್ರದ ಮರುಪ್ರರ‍್ಶನವಿರಲಿದೆ. 

ಇಂದಿನ ಪ್ರಮುಖ ವಿಶೇಷತೆಯೆಂದರೆ, ಸಂಜೆ 5.30ಕ್ಕೆ ಲುಲು ಮಾಲ್‍ನ ಓಪನ್‍ ಫೋರಂನಲ್ಲಿ ನವದೆಹಲಿಯ ಪೊಲಿಷ್ ಇನ್‌ಸ್ಟಿಟ್ಯೂಟ್ ಸಹಯೋಗದೊಂದಿಗೆ ಪ್ರಖ್ಯಾತ ಪೋಲೆಂಡಿನ ಚಲನಚಿತ್ರ ನರ‍್ದೇಶಕರಾದ ಆಂದ್ರೆ ವಾಜ್ಡಾ ಕುರಿತಾದ ʼಆಂದ್ರೆ ವಾಜ್ಡಾ – ಶತಮಾನೋತ್ಸವ ಸ್ಮರಣೆ, ಉಪನ್ಯಾಸ ಮತ್ತು ಪೋಲಿಷ್ ಚಲನಚಿತ್ರ ಸಂಸ್ಕೃತಿ’ ಕುರಿತು ಸಂವಾದ ನಡೆಯಲಿದೆ. ಲುಲು ಮಾಲ್‍ನ ಮುಖ್ಯ ದ್ವಾರದ ಬಳಿ ಬಯಲು ಪ್ರರ‍್ಶನದಲ್ಲಿ ರಾತ್ರಿ ಏಳಕ್ಕೆ ಡಾ. ರಾಜಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರ ಪ್ರರ‍್ಶನವಾಗಲಿದೆ. ಲುಲು ಮಾಲ್‍ ಅಲ್ಲದೇ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲ್ಮ್ ಮತ್ತು ಕಲ್ಚರಲ್‍ ಸೊಸೈಟಿಯಲ್ಲೂ ಚಿತ್ರಗಳು ಪ್ರರ‍್ಶನಗೊಳ್ಳಲಿವೆ.

ಇನ್ನು, ಸಮಕಾಲೀನ ವಿಶ್ವ ಸಿನಿಮಾ ವಿಭಾಗದಲ್ಲಿ ಸ್ಪಾನಿಶ್‍ ಚಿತ್ರ ‘ಎ ಪೊಯೆಟ್‍’ (ಸ್ಕ್ರೀನ್‍ 5 – ಸಂಜೆ 05.40ಕ್ಕೆ), ನರ‍್ವೆಯ ‘ಡ್ರೀಮ್ಸ್’ (ಸ್ಕ್ರೀನ್‍ 4 – ಸಂಜೆ 05.10ಕ್ಕೆ), ಸ್ಪೇನ್‍ನ ‘ದಿ ಡೆವಿಲ್‍ ಸ್ಮೋಕ್ಸ್’ (ಸ್ಕ್ರೀನ್‍ 1 – ಬೆಳಿಗ್ಗೆ 10.40ಕ್ಕೆ), ಟ್ಯೂನೀಷಿಯಾದ ‘ವೇರ್‍ ದಿ ವಿಂಡ್‍ ಕಮ್ಸ್ ಫ್ರಮ್‍’ (ಸ್ಕ್ರೀನ್‍ 3 – ರಾತ್ರಿ 07.40ಕ್ಕೆ), ಸ್ಪೇನ್‍ನ ‘ವೆನಿಲ್ಲಾ’ (ಸ್ಕ್ರೀನ್‍ 4 – ಬೆಳಿಗ್ಗೆ 10.20ಕ್ಕೆ), ಕೊರಿಯಾದ ‘ವಾಡ್‍ ಡಸ್‍ ದಿ ನೇಚರ್ ಸೇ ಟು ಯೂ’ (ಸ್ಕ್ರೀನ್‍ 8 – ಮಧ್ಯಾಹ್ನ 2.50ಕ್ಕೆ) ಮುಂತಾದ ಚಿತ್ರಗಳು ಪ್ರರ‍್ಶನಗೊಳ್ಳಲಿವೆ.
ಒಟ್ಟಾರೆ, ಸಿನಿಪೊಲೀಸ್‍ ಮಲ್ಟಿಪ್ಲೆಕ್ಸ್ ನಲ್ಲಿ 40ಕ್ಕೂ ಹೆಚ್ಚು ಚಿತ್ರಗಳು ಪ್ರರ‍್ಶನವಾಗಲಿವೆ. ಈ ಚಿತ್ರೋತ್ಸವದಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಏಷ್ಯನ್‍ ಸಿನಿಮಾ, ಚಿತ್ರ ಭಾರತಿ, ಕನ್ನಡ ಸಿನಿಮಾ, ಸಮಕಾಲೀನ ವಿಶ್ವ ಸಿನಿಮಾ, ಕನ್ನಡ ಜನಪ್ರಿಯ ಸಿನಿಮಾ, ಫಿಪ್ರೆಸ್ಕಿ - ವಿರ‍್ಶಕರ ವಾರ, ಜೀವನ ಕಥನ ಆಧಾರಿತ ಚಿತ್ರಗಳು, ಪೋಲೆಂಡ್‍ ದೇಶ ವಿಶೇಷ, ಭಾರತೀಯ ಉಪಭಾಷಾ ಚಿತ್ರಗಳು ವಿಭಾಗದಡಿ ಪ್ರರ‍್ಶನಗೊಳ್ಳಲಿವೆ. ಆಯಾ ದೇಶದ ಸ್ಥಿತಿ-ಗತಿ, ಜನ ಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸಲಿವೆ.

Post a Comment

0Comments

Post a Comment (0)