ದಾವಣಗೆರೆ 30.01.2026: “ಶಿಕ್ಷಣವು ಜೀವನದ ಶ್ರೇಷ್ಠ ಕೊಡುಗೆಯಾಗಿದೆ. ಶಿಕ್ಷಣವು ನಮಗೆ ಉದ್ಯೋಗದ ಜೊತೆಗೆ ನೈತಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಒದಗಿಸುತ್ತದೆ. ಶಿಕ್ಷಣವು ವ್ಯಕ್ತಿಯ ಜೀವನವನ್ನು ಹೊಸ ಆಲೋಚನೆಗಳು, ಜ್ಞಾನ ಮತ್ತು ಸಾಧ್ಯತೆಗಳಿಂದ ತುಂಬುವ ನಿರಂತರ ಪ್ರಯಾಣವಾಗಿದೆ” ಎಂದು ರ‍್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.ದಾವಣಗೆರೆ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಪ್ರಿಯ ವಿದ್ಯರ‍್ಥಿಗಳೇ, ನೀವು ಇಂದು ಪಡೆಯುತ್ತಿರುವ ಪದವಿಗಳು ಸಂಶೋಧನೆ, ಶಿಸ್ತು ಮತ್ತು ಬೌದ್ಧಿಕ ಶ್ರೇಷ್ಠತೆಯಲ್ಲಿ ನಿಮ್ಮ ಶೈಕ್ಷಣಿಕ ಯಶಸ್ಸಿಗೆ ಸಾಕ್ಷಿಯಾಗಿದೆ. ನೀವು ನಿಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ವೈಯಕ್ತಿಕ ಪ್ರಗತಿಗೆ ಹಾಗೂ ಸಮಾಜ, ದೇಶ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಉಪಯೋಗಿಸಿಕೊಳ್ಳಿ” ಎಂದು ಕರೆ ನೀಡಿದರು. “ವಿದ್ಯಾವಂತ ಯುವಕರು ಸಮಾಜಕ್ಕೆ ಸಕಾರಾತ್ಮಕ ಬದಲಾವಣೆಯನ್ನು ತರಬಹುದಾಗಿದೆ.ಯುವಜನತೆ ವಿಜ್ಞಾನ, ತಂತ್ರಜ್ಞಾನ, ವ್ಯವಹಾರ, ಕಲೆ ಅಥವಾ ಸಾಮಾಜಿಕ ಕ್ಷೇತ್ರ ಸೇರಿದಂತೆ ಆಯ್ಕೆ ಮಾಡುವ ಯಾವುದೇ ಕ್ಷೇತ್ರದಲ್ಲಿ ತಾವು ಸಲ್ಲಿಸುವ ಸೇವೆ ಮತ್ತು ಪ್ರಯತ್ನಗಳು ರಾಷ್ಟ್ರದ ಪ್ರಗತಿಗೆ ಕಾರಣವಾಗುತ್ತವೆ. ಈಗ ನಾವೆಲ್ಲರೂ ನಾವೀನ್ಯತೆ ಮತ್ತು ಸ್ರ‍್ಧೆಯ ಯುಗದಲ್ಲಿದ್ದೇವೆ. ಇದು ಡಿಜಿಟಲ್ ಯುಗ, ಇಲ್ಲಿ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ ಮತ್ತು ಮುಂದುವರಿದ ತಂತ್ರಜ್ಞಾನಗಳು ಜಗತ್ತನ್ನು ರೂಪಿಸುತ್ತಿವೆ. ಇಂತಹ ಯುಗದಲ್ಲಿ ಕಲಿಕೆ, ನಾವೀನ್ಯತೆ ಮತ್ತು ಸೃಜನಶೀಲತೆಯೊಂದಿಗೆ ಮುಂದುವರಿಯಬೇಕು” ಎಂದು ತಿಳಿಸಿದರು.“ಸ್ವಾಮಿ ವಿವೇಕಾನಂದರು ಯುವ ಶಕ್ತಿಯು ಯಾವುದೇ ರಾಷ್ಟ್ರದ ಅಭಿವೃದ್ಧಿಯ ಅಡಿಪಾಯ ಎಂದು ನಂಬಿದ್ದರು. ಭಾರತವು ಇಂದು ವಿಶ್ವದ ಅತಿದೊಡ್ಡ ಯುವ ಜನಸಂಖ್ಯೆಯನ್ನು ಹೊಂದಿದೆ ಮತ್ತು ಯುವ ಶಕ್ತಿಯು ಭಾರತದ ದೊಡ್ಡ ಆಸ್ತಿಯಾಗಿದೆ. ಇಂದಿನ ಯುಗದಲ್ಲಿ ರಾಷ್ಟ್ರಕ್ಕೆ ಪ್ರಶ್ನೆಗಳನ್ನು ಕೇಳುವ, ಹೊಸ ಚಿಂತನೆಯನ್ನು ತರುವ, ಅಪಾಯಗಳನ್ನು ತೆಗೆದುಕೊಳ್ಳುವ ಮತ್ತು ಪರಿಹಾರಗಳನ್ನು ಕಂಡುಕೊಳ್ಳುವ ಯುವಕರು ಬೇಕು.ಇಂದಿನ ಭಾರತವು ಸ್ಟರ‍್ಟ್-ಅಪ್‌ಗಳ ಭಾರತವಾಗಿದೆ. ಸಣ್ಣ ಆಲೋಚನೆಗಳು ದೊಡ್ಡ ಬದಲಾವಣೆಗಳನ್ನು ತರುತ್ತಿವೆ. ವಿದ್ಯರ‍್ಥಿಗಳೇ, ಕನಸುಗಳನ್ನು ಕ್ಯಾಂಪಸ್ ನಿಯೋಜನೆಗಳಿಗೆ ಸೀಮಿತಗೊಳಿಸಬೇಡಿ, ಕ್ಯಾಂಪಸ್‌ನಿಂದ ವಿಚಾರಗಳ ನರ‍್ಮಾಣದತ್ತ ಸಾಗಿ. ವೈಫಲ್ಯಕ್ಕೆ ಹೆದರಬೇಡಿ. ಸ್ಟರ‍್ಟ್ ಅಪ್ ಗಳ ಜಗತ್ತಿನಲ್ಲಿ, ವೈಫಲ್ಯವು ಅಂತ್ಯವಲ್ಲ, ಆದರೆ ಒಂದು ಅಮೂಲ್ಯ ಪಾಠವಾಗಿರುತ್ತದೆ. ನೀವೆಲ್ಲರೂ "ಅಭಿವೃದ್ಧಿ ಹೊಂದಿದ ಭಾರತ" ಎಂಬ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವ ಭಾರತ ಮತ್ತು ರ‍್ನಾಟಕವನ್ನು ಪ್ರತಿನಿಧಿಸುತ್ತೀರಿ. ಈ ಗುರಿಯನ್ನು ಸಾಧಿಸುವಲ್ಲಿ ನಿಮ್ಮ ಜ್ಞಾನ, ಕಠಿಣ ಪರಿಶ್ರಮ ಮತ್ತು ನಿಮ್ಮ ರ‍್ತವ್ಯ ಪ್ರಜ್ಞೆ ನರ‍್ಣಾಯಕವೆಂದು ಸಾಬೀತುಪಡಿಸುತ್ತದೆ” ಎಂದು ತಿಳಿಸಿದರು.Post a Comment
0Comments