ವಿಶೇಷ ಚೇತನ ಮಕ್ಕಳಿಂದ ‘ಅಪ್ಪು ಕ್ರೀಡೋತ್ಸವ’ ಜನವರಿ 9ರಂದು ಪುನೀತ್ ರಾಜ್‌ಕುಮಾರ್ ಸ್ಮರಣೆಯಲ್ಲಿ ಕ್ರೀಡಾಕೂಟ

varthajala
0

  ಬೆಂಗಳೂರು: ಯೂತ್ಸ್ ಆಫ್ ಮಲ್ಲೇಶ್ವರ (ರಿ) ಬೆಂಗಳೂರು ವತಿಯಿಂದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಸವಿ ಸ್ಮರಣಾರ್ಥವಾಗಿ ವಿಶೇಷ ಚೇತನ ಮಕ್ಕಳಿಗಾಗಿ 4ನೇ ವರ್ಷದ “ಅಪ್ಪು ಕ್ರೀಡೋತ್ಸವ”*ವನ್ನು ಜನವರಿ 9, 2026ರಂದು  ಆಟದ ಮೈದಾನ  ಮಲ್ಲೇಶ್ವರ  ಆಯೋಜಿಸಲಾಗಿದೆ. ಈ ಕುರಿತ ಮಾಧ್ಯಮಗೋಷ್ಠಿ, ಜರ್ಸಿ ಮತ್ತು ಕ್ಯಾಪ್‌ಗಳ ಬಿಡುಗಡೆ ಕಾರ್ಯಕ್ರಮ ಮಲ್ಲೇಶ್ವರಂನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯೂತ್ಸ್ ಆಫ್ ಮಲ್ಲೇಶ್ವರ ಅಧ್ಯಕ್ಷ ಎಂ. ಹೇಮಂತ್ ಗೌಡ, ಆಯೋಜಕರು ಬಿ.ಟಿ. ಚಂದ್ರಮೌಳಿ, ಕೆ.ಎಸ್. ಶ್ರೀವಲ್ಲಭ, ರಾಜ್ ಶಶಿಧರ್, ಶ್ರೀಮತಿ ಶೈಲಾ ಅಯ್ಯಂಗಾರ್, ರಾಜು ದೈವಿಕ್ ಹಾಗೂ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಅಬ್ದುಲ್ ಆಫಿಜ್ ಉಪಸ್ಥಿತರಿದ್ದರು. ಈ ವರ್ಷ 750ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಕ್ರೀಡೋತ್ಸವಕ್ಕೆ ಉಚಿತ ಪ್ರವೇಶವಿದ್ದು, ಜೂನಿಯರ್, ಸಬ್ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳ ಸ್ಪರ್ಧೆಗಳು ನಡೆಯಲಿವೆ. ಉದ್ಘಾಟನೆ: ಜನವರಿ 9, ಶುಕ್ರವಾರ ಬೆಳಗ್ಗೆ 9:30ಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಅವರೊಂದಿಗೆ ಚಲನಚಿತ್ರ ನಿರ್ಮಾಪಕ ಡಿ. ಸುರೇಶ್ ಗೌಡ, ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್, ಮಾಜಿ ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ಬೆಟ್ಟೇಗೌಡ ಬಹುಮಾನ ವಿತರಣೆ: ಮಧ್ಯಾಹ್ನ 3:30ಕ್ಕೆ ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯ ಕೆ.ಎಂ. ನಾಗರಾಜ್, ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಕಾಡುಮಲ್ಲೇಶ್ವರ ಗೆಳೆಯರ ಬಳಗ ಅಧ್ಯಕ್ಷ ಬಿ.ಕೆ. ಶಿವರಾಂ, ಆದರಣೀಯ ಅತಿಥಿಗಳಾಗಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಬಿಎಂಟಿಸಿ ಅಧ್ಯಕ್ಷ ವಿ.ಎಸ್. ಆರಾಧ್ಯ ಭಾಗವಹಿಸಲಿದ್ದಾರೆ. ಪ್ಲಾಸ್ಟಿಕ್ ಮುಕ್ತ - ಶೂನ್ಯ ಕಸ ಕ್ರೀಡಾಕೂಟ ಸಾಮಾಜಿಕ ಹೊಣೆಗಾರಿಕೆಯ ಸಂದೇಶವನ್ನೂ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮತ್ತು ಶೂನ್ಯ ಕಸದ ರೂಪದಲ್ಲಿ ನಡೆಸಲಾಗುತ್ತದೆ.

Post a Comment

0Comments

Post a Comment (0)