ರೈಲ್ವೆ ಇಲಾಖೆಯಿಂದ ಯಲಹಂಕ ತಾಲ್ಲೂಕಿನ ಬೆಟ್ಟಹಲಸೂರಿನಿಂದ ರಾಜಾನುಕುಂಟೆ ಪ್ರಸ್ತಾವಿತ ಸ್ಪಷಲ್‌ ರೈಲ್ವೆ ಯೋಜನೆಗಾಗಿ ಭೂ ಸ್ವಾಧೀನ ಕೈಬಿಡಿ -ಕರ್ನಾಟಕ ರಾಜ್ಯ ರೈತಸಂಘ ಒತ್ತಾಯ. ತಾವು ಬೆಳೆದಿದ್ದ ಹಣ್ಣು, ತರಕಾರಿ,ಸೊಪ್ಪು ಪ್ರದರ್ಶಿಸಿ ಕೃಷಿ ಸಂಸ್ಕೃತಿ ಉಳಿಸುವಂತೆ ಆಗ್ರಹ*

varthajala
0

ಬೆಂಗಳೂರು,ಜ.30: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಸುಪಾಸಿನ ಸಿಂಗನಾಯಕನಹಳ್ಳಿ, ತಿಮ್ಮಸಂದ್ರ, ಬೆಟ್ಟಹಲಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈಲ್ವೆ ಇಲಾಖೆಯಿಂದ ಪ್ರಸ್ತಾವಿತ ಸ್ಪೆಷಲ್‌ ರೈಲು ಯೋಜನೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳುತ್ತಿರುವುದನ್ನು ಸಣ್ಣ ಮತ್ತು ಅತಿ ಸಣ್ಣ ರೈತರು ಪ್ರತಿರೋಧಿಸಿದ್ದು, ತಮ್ಮ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರ‍್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಪ್ರಮುಖರು ತಾವು ಬೆಳೆದಿರುವ ಹಣ್ಣು, ತರಕಾರಿ, ಸೊಪ್ಪುಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರರ‍್ಶಿಸಿ ಭೂ ಸ್ವಾಧೀನವನ್ನು ವಿರೋಧಿಸಿದರು. 

ಸಂಘಟನೆಯ ಅಧ್ಯಕ್ಷ ಅರಳಾಪುರ ಮಂಜೇಗೌಡ್ರು ಮಾತನಾಡಿ, ಬೆಂಗಳೂರು ನಗರ ಹಾಗೂ ರಾಜ್ಯಕ್ಕೆ ಅಗತ್ಯವಾಗಿರುವ ಹಣ್ಣು ತರಕಾರಿಯನ್ನು ಬೆಳೆಯುತ್ತಿದು. ಭೂ ಸ್ವಾಧೀನಪಡಿಸಿಕೊಂಡರೆ ಕೃಷಿ ಸಂಸ್ಕೃತಿ ನಾಶವಾಗುತ್ತದೆ. ಯಲಹಂಕ ಸಮೀಪದ ರಾಜನಕುಂಟೆಯಿಂದ ಬೆಟ್ಟಹಲಸೂರುವರೆಗೆ ಹೊಸ ರೈಲು ಮರ‍್ಗದ ಪ್ರಸ್ತಾವನೆ ಅವೈಜ್ಞಾನಿಕವಾಗಿದ್ದು, ಇದರಿಂದ ಯಾವುದೇ ಉಪಯೋಗವಿಲ್ಲ. ಈ ಯೋಜನೆಯನ್ನು ರದ್ದುಗೊಳಿಸಬೇಕು.

ಒಟ್ಟು 80 ಎಕರೆ ಭೂ ಸ್ವಾಧೀನವಾಗುತ್ತಿದ್ದು, ಇದರಿಂದ ರೈತರ 300 ಎಕರೆಗೆ ತೀವ್ರ ತೊಂದರೆ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯಸಂಚಾಲಕರಾದ ಮಾವಳ್ಳಿಪುರ ಧನರಾಜ್ಟಿ ಪಿ.ಪ್ರಕಾಶ್ ಬಂಡಿ, ಟಿ.ಡಿ. ಅಂಬರೀಶ್, ಜೀರಿಗೆಬಾಬು, ಸೌಭಾಗ್ಯಮ್ಮ ಮತ್ತಿತರರು ಪಾಲ್ಗೊಂಡಿದ್ದರು. ರಾಜ್ಯದ್ಯಾಂತ ಹಲವು ರೈಲ್ವೆಯೋಜನೆಗಳು ಎರಡು ಮೂರು ದಶಕಗಳಿಂದ ಬಾಕಿಯಿದ್ದರೂ, ರೈಲ್ವೆ ಅಧಿಕಾರಿಗಳು ಆ ಯೋಜನೆಗಳನ್ನು ಜಾರಿಗೆತರಲು ಯಾಕೆ ನಿರಾಸಕ್ತಿ ತೋರುತ್ತಿದ್ದಾರೆ ಎಂಬುದು ರ‍್ಥವಾಗುತ್ತಿಲ್ಲ. ಕೆಲವು ಪ್ರಸ್ತಾವಿತ ರೈಲ್ವೆಯೋಜನೆಗಳು ಸುಮಾರು ದಶಕಗಳಿಂದ ಬಾಕಿ ಉಳಿದಿವೆ. ಚಿಕ್ಕಬಳ್ಳಾಪುರ–ಗೌರಿಬಿದನೂರು ನಡುವಿನ 44 ಕಿ.ಮೀ. ಉದ್ದದ ಹೊಸ ಯೋಜನೆಯನ್ನು ₹367.77 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಪ್ರಸ್ತಾವಿಸಲಾಗಿದೆ. ಅದೇ ರೀತಿ ಶ್ರೀಸತ್ಯಸಾಯಿಪ್ರಶಾಂತಿ ನಿಲಯಂ–ಚಿಕ್ಕಬಳ್ಳಾಪುರ ನಡುವಿನ ಮತ್ತೊಂದು ಯೋಜನೆಯನ್ನು ಸುಮಾರು 650 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಸ್ತಾಪಿಸಲಾಗಿದೆ. ಆ ಯೋಜನೆಗಳ ನರ‍್ಮಾಣ ಕರ‍್ಯಆರಂಭಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಬೆಟ್ಟಹಲಸೂರು ಮತ್ತು ರಾಜನಕುಂಟೆ ನಡುವಿನ ಪ್ರಸ್ತಾವಿತ ಹೊಸಮರ‍್ಗ ಸಣ್ಣ ಹಾಗೂ ಅತಿಸಣ್ಣ ರೈತರ ಮೇಲೆ ಮಾತ್ರವಲ್ಲದೆ, ಪುರಾತನ ಆಲದ ಮರ ಸೇರಿದಂತೆ ಅನೇಕ ಮರಗಳು ಹಾಗೂ ಮಾವಿನ ತೋಟಗಳ ನಾಮವಶೇಷವಾಗುವ ಆತಂಕವಿದೆ. ರಾಜನಕುಂಟೆ, ಯಲಹಂಕ ರೈಲುಜಂಕ್ಷನ್‌ ನಿಂದ ಕೇವಲ 6ಕಿ.ಮೀ. ಅಂತರದಲ್ಲಿಇರುವುದರಿಂದ ಹೊಸ ರೈಲ್ವೆ ಮರ‍್ಗ ನರ‍್ಮಾಣ ಅಗತ್ಯವಿಲ್ಲ ಎಂದು ಹೇಳಿದರು.
ಗ್ರಾಮಸ್ಥರು ಹಾಗೂ ರೈತರಿಗೆ ಉಪಯುಕ್ತವಾಗುವಂತೆ ರೈಲ್ವೆ ಅಂಡರ್‌ ಪಾಸ್‌ ಗಳು ಹಾಗೂ ಇತರೆ ಯೋಜನೆಗಳನ್ನು ಕರ‍್ಯನರ‍್ವಹಣೆಗೆ ತರಲು ಕ್ರಮಗಳನ್ನು ರೈಲ್ವೆ ಅಧಿಕಾರಿಗಳು ಕೈಗೊಳ್ಳಬೇಕು. ಬೆಟ್ಟಹಸೂರು, ಶೆಟ್ಟಿಗೆರೆ, ಚನ್ನಹಳ್ಳಿ, ಚಿಕ್ಕಸನ್ನೆ, ಐವಿಸಿರಸ್ತೆ ಹಾಗೂ ಕೋಡಿಮಂಚನಹಳ್ಳಿ ಹಾಗೂ ರಾಜ್ಯದ ಅನೇಕ ಕಡೆಗಳಲ್ಲಿ ನರ‍್ಮಿಸಲಾದ ಅಂಡರ್ ಪಾಸ್‌ ಗಳು ಗ್ರಾಮಸ್ಥರು ಮತ್ತು ರೈತರಿಗೆ ಅಡ್ಡಿಯಾಗಿವೆ. ಈ ಅಂಡರ್‌ ಪಾಸ್ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಹೇಳಿದರು. ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ-ದೇವನಹಳ್ಳಿ ನಡುವಿನ ರೈಲುಗಳಿಗೆ ಶಾಟ್‌ ಕಟ್‌ ಗಳನ್ನು ಒದಗಿಸಿ ಯಲಹಂಕ ನಿಲ್ದಾಣವನ್ನು ಬಿಟ್ಟುಸಾಗುವಂತೆ ಮಾಡುವ ಉದ್ದೇಶದಿಂದ ಬೆಟ್ಟಹಲಸೂರು–ರಾಜನಕುಂಟೆ ನಡುವಿನ ಹೊಸಮರ‍್ಗವನ್ನು ರೈಲ್ವೆಇಲಾಖೆ ರೂಪಿಸಿದೆ. ಈ ಯೋಜನೆಯ ಅಂದಾಜುವೆಚ್ಚ ₹248 ಕೋಟಿಆಗಿದ್ದು, ಇದು ರೈತರಿಗೆ ಮಾರಕವಾಗಿದೆ ಎಂದು ಹೇಳಿದರು. 2025ರ ಡಿಸೆಂಬರ್‌ ನಲ್ಲಿ ರ‍್ಕಾರ ಯಲಹಂಕ ತಾಲ್ಲೂಕಿನ ಬೆಟ್ಟಹಸೂರು ಹಾಗೂ ರಾಜನಕುಂಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಷ್ಕೃತ ಗಜೆಟ್ ಅಧಿಸೂಚನೆಗಳನ್ನು ಹೊರಡಿಸಿತು. ಸುಮಾರು ಎಕರೆ ಒಣ ಹಾಗೂ ಕೃಷಿಭೂಮಿ ಹಾಗೂ ತೋಟದ ಬೆಳೆಬೆಳೆಯುವ ಜಮೀನುಗಳಿಗೆ ನೋಟೀಸ್‌ ಗಳನ್ನು ಜಾರಿಮಾಡಲಾಗಿದೆ. ಈಯೋಜನೆ 2026ರಡಿಸೆಂಬರ್ ಒಳಗೆ ಪರ‍್ಣಗೊಳಿಸಲು ರೈಲ್ವೆ ಇಲಾಖೆ ತರಾತುರಿಯಿಂದ ಯೋಜನೆ ಜಾರಿಮಾಡಲು ತರ‍್ಮಾನಿಸಿದಂತೆ ಇದೇ ಎಂದು ಹೇಳಿದರು. ಸತ್ಯಸಾಯಿನಿಲಯಂ – ಚಿಕ್ಕಬಳ್ಳಾಪುರ ಯೋಜನೆಯು ಸುಮಾರು 650 ಕೋಟಿ ವೆಚ್ಚದಾಗಿದ್ದು. ಆ ಯೋಜನೆ ಜಾರಿ ಮಾಡದೆ ಆದರೆ ಗುಂತಕಲ್‌ ನಿಂದ ಚೆನ್ನೈ ಚೆನೈಕಡೆಗೆ ಸಾಗುವ ಗೂಡ್ಸ್ ರೈಲುಗಳು ಹಾಗೂ ಪ್ರಯಾಣಿಕ ರೈಲುಗಳು ಅತಿಜರೂರಾಗಿ ಕೋಲಾರ ಮೂಖಾಂತರ ಸಾಗಬಹುದು ಹಾಗೂ ಸುಮಾರು 10 ಕ್ಕೂ ಹೆಚ್ಚು ಪಟ್ಟಣಗಳು ಹಾಗೂ ಸಾವಿರಾರು ಗ್ರಾಮಗಳ ಗ್ರಾಮಸ್ಥರಿಗೆ ಅನೂಕೂಲವಾಗಲಿದೆ ಎಂದರು. ರ‍್ನಾಟಕ ರಾಜ್ಯ ರೈತಸಂಘದ ರಾಜ್ಯಕರ‍್ಯರ‍್ಶಿ ಬೆಟ್ಟಹಲಸೂರು ನಂಜುಂಡಪ್ಪ ಕಡತನ ಮಲೆರವರು “ಪ್ರಸ್ತಾವಿತ ರೈಲುಮರ‍್ಗಕ್ಕಾಗಿ ಭೂಮಿಸ್ವಾಧೀನಪಡಿಸಿಕೊಳ್ಳುವ ತಮ್ಮ ಯೋಜನೆಯನ್ನು ರೈಲ್ವೆ ಅಧಿಕಾರಿಗಳು ಮುಂದುವರಿಸಿದರೆ ಅನೇಕ ಸಣ್ಣ ಹಾಗೂ ಅತಿಸಣ್ಣ ಹಾಗೂ ನೂರಾರು ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ಜೀವನೋಪಾಯವನ್ನು ಸಹಕಳೆದು ಕೊಳ್ಳಬೇಕಾಗುತ್ತದೆ. ಹೆಚ್ಚಿನ ರೈತರು ರ‍್ಥಿಕವಾಗಿ ದರ‍್ಬಲರಾಗಿದ್ದಾರೆ ಹಾಗೂ ಬೀದಿಪಾಲಾಗುತ್ತಾರೆ ಹಾಗೂ ತಮ್ಮ ದಿನ ನಿತ್ಯದ ತರಕಾರಿಹಣ್ಣು ಇದಕ್ಕು ಸಹಾ ಅಲೆಯಬೇಕಾಗುತ್ತದೆ ಎಂದರು. ಗೌರಿಬಿದನೂರು – ಚಿಕ್ಕಬಳ್ಳಾಪುರ ಯೋಜನೆಯಿಂದಲೂ ಸಹಾ ಸುಮಾರು ಗ್ರಾಮಗಳ ಲಕ್ಷಾಂತರ ಸರ‍್ವಜನಿಕರಿಗೆ, ರೈತರಿಗೆ ಅನೂಕೂಲವಾಗುತ್ತದೆ. ಹಾಗೂ ಗೂಡ್ಸ್ ಹಾಗೂ ಪ್ರಯಾಣಿಕ ರೈಲುಗಳು ಬೆಂಗಳೂರು ಯಲಹಂಕ ಪ್ರವೇಶಿಸದೆ ಚೆನೈ ಹಾಗೂ ಚೆನೈಕಡೆಯಿಂದ ಗುಂತಕಲ್ ಕಡೆಗೆ ಹೊರವಲಯದಿಂದಲೇ ತೆರಳಲು ಅನೂಕೂಲವಾಗುತ್ತದೆ ಎಂದರು.

Post a Comment

0Comments

Post a Comment (0)