ಜ್ಞಾನಾಧಾರಿತ ಆರ್ಥಿಕತೆಯಿಂದ ನಾವೀನ್ಯತೆ ಆಧಾರಿತ ಶಕ್ತಿಯಾಗಿ ಭಾರತ ರೂಪುಗೊಳ್ಳಬೇಕು: ರಾಜ್ಯಪಾಲರು

varthajala
0

 ಬೆಂಗಳೂರು 20.01.2026: “ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಡಿಜಿಟಲ್ ಸರ‍್ಪಡೆಯಂತಹ ಸವಾಲುಗಳಿಗೆ ಪರಿಹಾರಗಳನ್ನು ನೀಡುವ ನವೋದ್ಯಮಗಳನ್ನು ವಿಶ್ವವಿದ್ಯಾಲಯಗಳು ಪ್ರೋತ್ಸಾಹಿಸಬೇಕು” ಎಂದು ರ‍್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ದಕ್ಷಿಣ ವಲಯದ ಕುಲಪತಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

“ವಿಶ್ವವಿದ್ಯಾಲಯಗಳು ಉದ್ಯಮಶೀಲತೆಯ ಕೇಂದ್ರಗಳಾದಾಗ ಮಾತ್ರ ಭಾರತವು ಜ್ಞಾನಾಧಾರಿತ ರ‍್ಥಿಕತೆಯಿಂದ ನಾವೀನ್ಯತೆ ಆಧಾರಿತ ಸೂಪರ್ ಪವರ್‌ಗೆ ಚಲಿಸುತ್ತದೆ. ಯುವಜನತೆ ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸುವಂತೆ ಮಾಡಲು, ಅವರಿಗೆ ಇತ್ತೀಚಿನ ಜ್ಞಾನ ಮತ್ತು ತಂತ್ರಜ್ಞಾನವನ್ನು ಪರಿಚಯಿಸುವ ಅವಶ್ಯಕತೆಯಿದೆ, ಇದರಿಂದ ಅವರು ತಮ್ಮ ಕೆಲಸದ ದಕ್ಷತೆಯನ್ನು ಬಳಸಿಕೊಳ್ಳಬಹುದು ಮತ್ತು ಸ್ವ-ಉದ್ಯೋಗದತ್ತ ಪ್ರೇರಣೆ ಪಡೆಯಬಹುದು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಹುದು” ಎಂದರು.“ದಕ್ಷಿಣ ಭಾರತವು ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಯಾವಾಗಲೂ ನಾಯಕತ್ವವನ್ನು ಒದಗಿಸಿದೆ. ಬೆಂಗಳೂರಿನಂತಹ ನಗರಗಳು ಶಿಕ್ಷಣ, ಸಂಶೋಧನೆ ಮತ್ತು ಕೈಗಾರಿಕೆಗಳು ಒಟ್ಟಿಗೆ ಸೇರಿದಾಗ, ಜಾಗತಿಕ ಮಟ್ಟದ ನವೋದ್ಯಮಗಳು ಮತ್ತು ನಾವೀನ್ಯತೆಗಳು ಹುಟ್ಟುತ್ತವೆ ಎಂಬುದನ್ನು ಸಾಬೀತುಪಡಿಸಿವೆ.

ನಾವು ಈ ಮಾದರಿಯನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಬೇಕಾಗಿದೆ. “ವಿದ್ಯರ‍್ಥಿಗಳಲ್ಲಿ ಉದ್ಯಮಶೀಲತಾ ಚಿಂತನೆಯನ್ನು ಬೆಳೆಸಲು-ಶಿಕ್ಷಣ, ತಾಂತ್ರಿಕ-ರಾಷ್ಟ್ರೀಯತೆಯನ್ನು ಉತ್ತೇಜಿಸಲು ಇನ್ಕ್ಯುಬೇಷನ್ ಮತ್ತು ನಾವೀನ್ಯತೆ ಕೇಂದ್ರಗಳ ಸ್ಥಾಪನೆ, ನವೋದ್ಯಮ ಅಭಿವೃದ್ಧಿಗಾಗಿ ವಿಶ್ವವಿದ್ಯಾಲಯ-ಉದ್ಯಮ ಸಹಯೋಗ” ವಿಷಯಗಳ ಬಗ್ಗೆಯೂ ರ‍್ಚಿಸಲಾಗುವುದು. ಈ ಮೂರು ಉಪವಿಷಯಗಳು ಸಹ ಬಹಳ ರ‍್ಥಪರ‍್ಣವಾಗಿವೆ. ಉದ್ಯಮಶೀಲತೆಯು ರ‍್ಥಿಕ ಸಮೃದ್ಧಿಗೆ ಕೇವಲ ಒಂದು ಸಾಧನವಲ್ಲ, ಸಾಮಾಜಿಕ ಬದಲಾವಣೆ, ಸುಸ್ಥಿರ ಅಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಗತಿಗೆ ಪ್ರಬಲ ಸಾಧನವಾಗಿದೆ” ಎಂದು ಹೇಳಿದರು.“ಭಾರತವು ಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆಯಿಂದ ನಡೆಸಲ್ಪಡುವ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಸ್ಟರ‍್ಟ್ಅಪ್ ಇಂಡಿಯಾ, ಆತ್ಮನರ‍್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾದಂತಹ ರಾಷ್ಟ್ರೀಯ ಅಭಿಯಾನಗಳು ದೇಶದ ಭವಿಷ್ಯವು ಪದವಿ ಪಡೆದ ಯುವಕರನ್ನು ಮತ್ತು ಉದ್ಯೋಗ ಸೃಷ್ಟಿರ‍್ತರನ್ನು ಸಿದ್ಧಪಡಿಸುವಲ್ಲಿದೆ ಎಂದು ಸ್ಪಷ್ಟಪಡಿಸಿವೆ. ಈ ದಿಕ್ಕಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ನರ‍್ಣಾಯಕವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ಟರ‍್ಟ್‌ಅಪ್ ಸಂಸ್ಕೃತಿಯನ್ನು ಬೆಳೆಸುವುದರಿಂದ ವಿದ್ಯರ‍್ಥಿಗಳಲ್ಲಿ ಸಮಸ್ಯೆ ಪರಿಹಾರ, ಅಪಾಯ-ತೆಗೆದುಕೊಳ್ಳುವಿಕೆ ಮತ್ತು ಸೃಜನಶೀಲ ಚಿಂತನೆ ಬೆಳೆಯುತ್ತದೆ. ಇನ್‌ಕ್ಯುಬೇಷನ್ ಕೇಂದ್ರಗಳು, ಸ್ಟರ‍್ಟ್‌ಅಪ್ ಲ್ಯಾಬ್‌ಗಳು, ಉದ್ಯಮ-ಶೈಕ್ಷಣಿಕ ಸಹಯೋಗಗಳು ಮತ್ತು ಮರ‍್ಗರ‍್ಶನ ಕರ‍್ಯಕ್ರಮಗಳು ವಿದ್ಯರ‍್ಥಿಗಳು ತಮ್ಮ ಆಲೋಚನೆಗಳನ್ನು ಕರ‍್ಯಸಾಧ್ಯವಾದ ಉತ್ಪನ್ನಗಳು ಮತ್ತು ಸೇವೆಗಳಾಗಿ ಪರಿರ‍್ತಿಸಲು ವೇದಿಕೆಯನ್ನು ಒದಗಿಸುತ್ತವೆ” ಎಂದು ಅಭಿಪ್ರಾಯಪಟ್ಟರು.“ಈ ಸಮ್ಮೇಳನದ ವಿಷಯವಾದ "ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯಮಶೀಲತೆ ಮತ್ತು ನವೋದ್ಯಮಗಳನ್ನು ಬೆಳೆಸುವುದು" ಅತ್ಯಂತ ಸೂಕ್ತವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಪದವಿ ಪ್ರದಾನ ಕೇಂದ್ರಗಳಷ್ಟೇ ಅಲ್ಲ, ನಾವೀನ್ಯತೆ, ನಾಯಕತ್ವ ಮತ್ತು ರಾಷ್ಟ್ರ ನರ‍್ಮಾಣದ ಕೇಂದ್ರಗಳೂ ಆಗಿವೆ. ಇಂದು ಉದ್ಯಮಶೀಲತೆ ಮತ್ತು ನವೋದ್ಯಮಗಳ ಯುಗ, ಇಲ್ಲಿ ಯುವಜನರ ಆಲೋಚನೆಗಳು ದೊಡ್ಡ ಆಸ್ತಿಯಾಗಿದೆ. ಈ ಆಲೋಚನೆಗಳಿಗೆ ಸರಿಯಾದ ಮರ‍್ಗರ‍್ಶನ, ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ನೀಡಿದರೆ, ಅವು ಸ್ವಾವಲಂಬಿಯಾಗುತ್ತವೆ ಮತ್ತು ಸಮಾಜ ಮತ್ತು ದೇಶಕ್ಕೆ ಉದ್ಯೋಗಗಳನ್ನು ಸೃಷ್ಟಿಸುತ್ತವೆ.
ಪ್ರಸ್ತುತ ಸನ್ನಿವೇಶಗಳು ಮತ್ತು ಭವಿಷ್ಯದ ನಿರೀಕ್ಷೆಗಳನ್ನು ಗಮನಿಸಿದರೆ, ಉನ್ನತ ಶಿಕ್ಷಣದ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಪಾತ್ರದ ಬಗ್ಗೆ ಚಿಂತಿಸುವ ಸಮಯ ಬಂದಿದೆ” ಎಂದು ತಿಳಿಸಿದೆ.“1925 ರಲ್ಲಿ ಸ್ಥಾಪನೆಯಾದ ಭಾರತೀಯ ವಿಶ್ವವಿದ್ಯಾಲಯಗಳ ಸಂಘವು ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯ ಪ್ರಮುಖ ಉನ್ನತ ಸಂಸ್ಥೆಯಾಗಿದೆ. ಪ್ರಾರಂಭದಿಂದಲೂ, ಈ ಸಂಸ್ಥೆಯು ದೇಶದ ವಿಶ್ವವಿದ್ಯಾಲಯಗಳಲ್ಲಿ ಸಮನ್ವಯ, ಗುಣಮಟ್ಟ ಹೆಚ್ಚಿಸುವಿಕೆ ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಸಂಶೋಧನೆ, ನಾವೀನ್ಯತೆ, ಡಿಜಿಟಲ್ ಶಿಕ್ಷಣ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನವನ್ನು ಸಹ ಸಕ್ರಿಯವಾಗಿ ಬೆಂಬಲಿಸುತ್ತದೆ. ಂIU ಕ್ರೀಡೆಗಳಿಗೂ ಗಮನರ‍್ಹ ಕೊಡುಗೆಗಳನ್ನು ನೀಡುತ್ತದೆ. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸ್ರ‍್ಧೆಗಳ ಮೂಲಕ, ಇದು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ರೂಪಿಸಿದೆ” ಎಂದು ಶ್ಲಾಘಿಸಿದರು. “ಬೆಂಗಳೂರಿನ ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾನಿಲಯವು ತನ್ನ ದೂರದೃಷ್ಟಿಯ ಶೈಕ್ಷಣಿಕ ವಾತಾವರಣ, ಸಂಶೋಧನಾ ಚಟುವಟಿಕೆಗಳು, ನವೀನ ಬೋಧನಾ ವಿಧಾನಗಳು ಮತ್ತು ರ‍್ವತೋಮುಖ ಅಭಿವೃದ್ಧಿಗೆ ಬದ್ಧತೆಗೆ ಹೆಸರುವಾಸಿಯಾಗಿದೆ. ಆಧುನಿಕ ಮೂಲಸೌರ‍್ಯ, ಅಂತರಶಿಸ್ತೀಯ ವಿಧಾನ ಮತ್ತು ಬಲವಾದ ಕೈಗಾರಿಕಾ ಸಂರ‍್ಕಗಳ ಮೂಲಕ, ವಿಶ್ವವಿದ್ಯಾಲಯವು ವಿದ್ಯರ‍್ಥಿಗಳಿಗೆ ಬೌದ್ಧಿಕವಾಗಿ ಮತ್ತು ವೈಯಕ್ತಿಕವಾಗಿ ಬೆಳೆಯಲು ಅವಕಾಶಗಳನ್ನು ಒದಗಿಸುತ್ತದೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಎಂ.ಆರ್. ಜಯರಾಮ್, ಎಐಯು ಅಧ್ಯಕ್ಷ ಪ್ರೊಫೆಸರ್ ವಿನಯ್ ಕುಮಾರ್ ಪಾಠಕ್, ಪ್ರಧಾನ ಕರ‍್ಯರ‍್ಶಿ ಡಾ. ಶ್ರೀಮತಿ ಪಂಕಜ್ ಮಿತ್ತಲ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)