ಪ್ರೇಕ್ಷಕರನ್ನು ಮುದಗೊಳಿಸಿದ ಮಕ್ಕಳ ನೃತ್ಯ ಪ್ರದರ್ಶನ

varthajala
0

 ಬೆಂಗಳೂರು : ನಾಟ್ಯೇಶ್ವರ ನೃತ್ಯ ಶಾಲೆಯ  ಗುರುಗಳಾದ  ಕಲಾಯೋಗಿ ಶ್ರೀ ಕೆ.ಪಿ.ಸತೀಶ  ಬಾಬು ಹಾಗು ಶ್ರೀಮತಿ ವಾಣಿ ಸತೀಶ ಬಾಬು ಆಯೋಜಿಸಿದ್ದ ನಾಟ್ಯೇಶ್ವರ ನೃತ್ಯ ಶಾಲೆಯ 18ನೇ ವಾರ್ಷಿಕೋತ್ಸವ  ಕಾರ್ಯಕ್ರಮವು ಮಲ್ಲೇಶ್ವರದ ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ  ಯಶಸ್ವಿಯಾಗಿ ನಡೆಯಿತು. ಇದರಲ್ಲಿ ಗುರುಗಳಾದ ಕಲಾಯೋಗಿ ಶ್ರೀ ಕೆ. ಪಿ. ಸತೀಶ್ ಬಾಬು ಅವರೊಟ್ಟಿಗೆ ನೃತ್ಯ ಶಾಲೆಯ ಕಿರಿಯ ಹಾಗೂ ಹಿರಿಯ ಶಿಷ್ಯ ವೃಂದ ಹಾಗೂ ಆಹ್ವಾನಿತ ನೃತ್ಯ ಶಾಲೆಗಳಾದ ವಿದುಷಿ  ಶ್ರೀಮತಿ ಸಂದ್ಯಾ ಸಿ.ಆರ್. ಮಂದಿರ ನೃತ್ಯ ಶಾಲೆ ಮತ್ತು ಶ್ರೀ ಕುಮಾರ್ ರವರ ಸೂರ್ಯೋದಯ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ಅಮೋಘವಾದ ವೈವಿಧ್ಯಮಯ ನೃತ್ಯ ಪ್ರಸ್ತುತಿಯಾಯಿತು. 

 ಕಾರ್ಯಕ್ರಮಕ್ಕೆ ಅತಿಥಿಗಳಾದ ಶ್ರೀ  ರಾಘವೇಂದ್ರ ಶೆಟ್ಟಿ, (ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು), ಶ್ರೀ ಆರ್. ರಾಜಕುಮಾರ್ (ಕಲಾಂಜಲಿ ನಾಟ್ಯ ಶಾಲೆ ಹಾಗೂ ಜಿ.ಜೆ. ಆರ್.ವಿ.ಕೆ ಶಾಲೆಯ ನೃತ್ಯ  ಗುರುಗಳು) ಇವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಮೂಡಿಬಂತು. ನಾಟ್ಯ ಶಾಸ್ತ್ರದಲ್ಲಿರುವ ಶಾಸ್ತ್ರೀಯ, ಸಮಕಾಲೀನ, ಜಾನಪದ ಹೀಗೆ ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ನೃತ್ಯ ಬಂಧಗಳಿಗೆ  ಯಾವುದೇ ಚ್ಯುತಿ ಬಾರದಂತೆ ಕೃತಿಗಳ ಆಯ್ಕೆ,, ನಮ್ಮ ದೇಶದ ಶ್ರೇಷ್ಠ ದಾಸರು, ಕವಿಗಳು ರಚಿಸಿರುವ ಅದ್ಬುತ ಸಾಹಿತ್ಯಕ್ಕೆ ಮಕ್ಕಳು ನೃತ್ಯ  ಪ್ರದರ್ಶನ ನೀಡಿದ್ದು ಕಲಾರಸಿಕರ ಚಪ್ಪಾಳೆ, ಆಶೀರ್ವಾದ, ಪ್ರಶಂಸೆಗೆ ಪಾತ್ರರಾದರು.


Post a Comment

0Comments

Post a Comment (0)