ತುಳು ಭಾಷಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷಯನ್ನಾಗಿ ಘೋಷಣೆ ಮಾಡಲು ಸಮಿತಿ ರಚನೆ ವರದಿ ನಂತರ ಅಗತ್ಯ ಕ್ರಮ- ಸಚಿವ ಶಿವರಾಜ ತಂಗಡಗಿ

varthajala
0

 ಬೆಂಗಳೂರು : ಕಾನೂನು ಇಲಾಖೆಯ ಅಭಿಪ್ರಾಯದಂತೆ ತುಳು ಭಾಷಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾμÉಯೆಂದು ಘೋಷಣೆ ಮಾಡುವ ಕುರಿತು ವಿವಿಧ ರಾಜ್ಯಗಳಲ್ಲಿ ಎರಡನೇ ಭಾಷಯನ್ನು ಅಧಿಕೃತಿ ಭಾμÉಯೆಂದು ಘೋಷಿಸಲು ಅನುಸರಿಸಿರುವ ಮಾನದಂಡಗಳ ಕುರಿತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಅಧ್ಯಯನ ತಂಡವನ್ನು ರಚಿಸಲಾಗಿದ್ದು, ಸಂಪೂರ್ಣವಾಗಿ ಅಧ್ಯಯನ ನಡೆಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸದರಿ ತಂಡವು ಆಂಧ್ರಪ್ರದೇಶ ರಾಜ್ಯಕ್ಕೆ ನಿಯೋಜಿಸಲು ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇಂದು ವಿಧಾನಸಭೆಯಲ್ಲಿ ಪುತ್ತೂರು ವಿಧಾನಸಭಾ ಸದಸ್ಯ ಅಶೋಕ್ ಕುಮಾರ್ ರೈ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಧ್ಯಯನ ತಂಡವು ಆಂಧ್ರಪ್ರದೇಶ ರಾಜ್ಯದಲ್ಲಿ ಉರ್ದು ಭಾಷಯನ್ನು ಎರಡನೇ ಅಧಿಕೃತ ಭಾಷಯಾಗಿ ಘೋಷಿಸಲು ಅನುಸರಿಸಿರುವ ಮಾನದಂಡಗಳ ಕುರಿತು ಪರಿಶೀಲಿಸಲು ಆಂಧ್ರಪ್ರದೇಶ ರಾಜ್ಯಕ್ಕೆ ದಿನಾಂಕ: 19-01-2026 ಮತ್ತು 20-01-2026ರಂದು ಭೇಟಿ ನೀಡಿದ್ದು ಅಧ್ಯಯನ ತಂಡವು ವರದಿ ಸಲ್ಲಿಸಬೇಕಾಗಿದೆ. ಅಧ್ಯಯನ ತಂಡ ವರದಿ ನೀಡಿದ ನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ತುಳು ಭಾಷಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷಯೆಂದು ಘೋಷಣೆ ಮಾಡುವ ಕುರಿತು ಅಂತಿಮಗೊಳಿಸಲಾಗುವುದು ಎಂದು ವಿಧಾನಸಭೆಯಲ್ಲಿ ವಿವರಿಸಿದರು.

Post a Comment

0Comments

Post a Comment (0)