ಬೆಂಗಳೂರು : ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಜನವರಿ 22 ರಿಂದ 31 ರವರೆಗೆ ನಡೆಯಲಿರುವ 16ನೇ ವಿಧಾನಸಭೆಯ 9ನೇ ಅಧಿವೇಶನದ ಕಾರ್ಯಕಲಾಪಗಳನ್ನು ಚಿತ್ರೀಕರಿಸಿ, ನೇರ ಪ್ರಸಾರ ಮಾಡಲು ಹಾಗೂ ಚಿತ್ರೀಕರಿಸಿದ ದೃಶ್ಯಗಳನ್ನು (ಔಟ್‍ಪುಟ್) ಉಭಯ ಸದನಗಳ ಸಚಿವಾಲಯದ ಆಂತರಿಕ ದೂರದರ್ಶನ ಶಾಖೆ (ಸಿಸಿಟಿವಿ), ವೆಬ್‍ಕ್ಯಾಸ್ಟಿಂಗ್, ಯೂಟೂಬ್ ಮತ್ತು ಇತರೆ ಖಾಸಗಿ ಚಾನಲ್‍ಗಳಿಗೆ ಸಂಪರ್ಕ ಒದಗಿಸುವ ಕಾರ್ಯವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರಿಗೆ ವಹಿಸಲಾಗಿರುತ್ತದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಚಿತ್ರೀಕರಿಸಿದ ವಿಧಾನಸಭೆಯ ಕಾರ್ಯಕಲಾಪಗಳ ಔಟ್‍ಪುಟ್ ಅನ್ನು ಇತರೆ ಖಾಸಗಿ ಸುದ್ದಿ ವಾಹಿನಿಯವರು https://youtube.com/@
ಅಲ್ಲದೆ, ಮುದ್ರಣ ಮಾಧ್ಯಮದವರು ಸದನದ ಕಾರ್ಯಕಲಾಪಗಳ ಭಾವಚಿತ್ರಗಳನ್ನು ವಾರ್ತಾ ಇಲಾಖೆಯಿಂದ ಪಡೆಯಬಹುದಾಗಿದೆ.
ಸದನದ ಕಾರ್ಯಕಲಾಪಗಳನ್ನು ವರದಿ ಮಾಡುವ ವರದಿಗಾರರುಗಳಿಗೆ ವಿಧಾನಸಭೆಯ ಸಭಾಂಗಣದ ಪತ್ರಕರ್ತರ ಗ್ಯಾಲರಿಗೆ ಪ್ರವೇಶಿಸಲು ಅವಕಾಶವಿರುತ್ತದೆ. ಆದರೆ, ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಾಮನ್ ಹಾಗೂ ಮುದ್ರಣ ಮಾಧ್ಯಮದ ಛಾಯಾಗ್ರಾಹಕರುಗಳಿಗೆ ವಿಧಾನಸಭೆಯ ಸಭಾಂಗಣದೊಳಗೆ / ಪತ್ರಕರ್ತರ ಗ್ಯಾಲರಿಗೆ ಪ್ರವೇಶಾವಕಾಶ ಇರುವುದಿಲ್ಲ. ವರದಿಗಾರರು ಸದನದ ಒಳಗೆ ಮೊಬೈಲ್ ದೂರವಾಣಿ, ಟ್ಯಾಬ್ ಇತ್ಯಾದಿಗಳನ್ನು ಕೊಂಡೊಯ್ಯುವಂತಿಲ್ಲ. ಎಲ್ಲಾ ಮುದ್ರಣ ಮಾಧ್ಯಮದವರು ಮತ್ತು ಸುದ್ದಿವಾಹಿನಿಯವರು ಸಹಕರಿಸಬೇಕೆಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.