ಬೆಂಗಳೂರು : ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ನೀಡುತ್ತ ಬಂದಿದ್ದು ಸತತ 25 ವರ್ಷಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದೆ.
ಈ ಸುಸಂದರ್ಭದಲ್ಲಿ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯ ಜನವರಿ 21 ರಂದು ಮಧ್ಯಾಹ್ನ 2:00 ಗಂಟೆಗೆ ಸಿಎಂಆರ್ ಸಭಾಂಗಣದಲ್ಲಿ 'ರಜತ ಮಹೋತ್ಸವ' ಕಾರ್ಯಕ್ರಮವನ್ನು ಆಚರಿಸುತ್ತಿದೆ. ರಜತ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಸಿ.ಪಿ. ರಾಧಾಕೃಷ್ಣನ್ ಮತ್ತು ಗೌರವ ಅತಿಥಿಗಳಾಗಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ಭಾಗವಹಿಸುತ್ತಿದ್ದಾರೆ.
ಇವರು ತಮ್ಮ ಅಮೃತಹಸ್ತದಿಂದ ನಾವೀನ್ಯತೆ, ಉದ್ಯಮಶೀಲತೆ ಮತ್ತು ಸಮಗ್ರ ಶೈಕ್ಷಣಿಕ ಉತ್ಕøಷ್ಟತೆಗೆ ಪೂರಕವಾಗಿ ಸಿಎಂಆರ್ ಐಟಿಯು ನೂತನವಾಗಿ ನಿರ್ಮಾಣ ಮಾಡಿರುವ 'ಇನ್ಕ್ಯುಬೇಶನ್ ಸೆಂಟರ್' ಮತ್ತು ಆಡಿಟೋರಿಯಂ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಗಣ್ಯ ಅತಿಥಿಗಳಾಗಿ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಅಧ್ಯಕ್ಷರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಡಾ.ಕೆ.ಸಿ. ರಾಮಮೂರ್ತಿ, ಐಪಿಎಸ್ (ನಿವೃತ್ತ) ಮತ್ತು ಎನ್‍ಪಿಎಸ್ ಸಮೂಹ ಸಂಸ್ಥೆಗಳು, ಎನ್‍ಎಎಫ್‍ಎಲ್ ಮತ್ತು ಟಿಐಎಸ್‍ಬಿ ಅಧ್ಯಕ್ಷರಾದ ಡಾ.ಕೆ.ಪಿ. ಗೋಪಾಲಕೃಷ್ಣ ಅವರು ಭಾಗವಹಿಸಲಿದ್ದಾರೆ. ಸಿಎಂಆರ್ ಜ್ಞಾನಧಾರ ಟ್ರಸ್ಟ್‍ನ ಅಧ್ಯಕ್ಷರು ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಬಿತಾ ರಾಮಮೂರ್ತಿ, ಸಿಎಂಆರ್ ಜ್ಞಾನಧಾರ ಟ್ರಸ್ಟ್‍ನ ಕಾರ್ಯದರ್ಶಿ ಕೆ.ಸಿ. ಜಗನ್ನಾಥ ರೆಡ್ಡಿ, ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಸಿಇಒ ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಸಹ-ಕುಲಾಧಿಪತಿ ಜಯದೀಪ್ ಕೆ.ಆರ್. ರೆಡ್ಡಿ, ಏಕ್ಯಾ ಶಾಲೆಗಳ ಸಂಸ್ಥಾಪಕರು ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಪ್ರೊವೋಸ್ಟ್ ಡಾ. ತ್ರಿಸ್ತಾ ರಾಮಮೂರ್ತಿ, ಸಿಎಂಆರ್ ಐಟಿ ಪ್ರಾಂಶುಪಾಲ ಡಾ. ಸಂಜಯ್ ಜೈನ್ ಮತ್ತು ಉಪ ಪ್ರಾಂಶುಪಾಲ ಡಾ.ಬಿ.ನರಸಿಂಹಮೂರ್ತಿ, ಡೀನ್‍ಗಳು, ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ರಜತ ಮಹೋತ್ಸವ ಕುರಿತು ಮಾತನಾಡಿದ ಸಿಎಂಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಕೆ.ಸಿ. ರಾಮಮೂರ್ತಿ ಅವರು, "ರಜತ ಮಹೋತ್ಸವವು ಸಿಎಂಆರ್ ಐಟಿಯ ಉತ್ಕøಷ್ಟ ಶೈಕ್ಷಣಿಕ ಪ್ರಯಾಣದಲ್ಲಿ ಅತ್ಯುತ್ತಮ ಮೈಲಿಗಲ್ಲಾಗಿದೆ. ಕಳೆದ 25 ವರ್ಷಗಳಿಂದ ಈ ಸಂಸ್ಥೆಯು ಶೈಕ್ಷಣಿಕ ಉತ್ಕøಷ್ಟತೆ, ನಾವೀನ್ಯತೆ ಮತ್ತು ರಾಷ್ಟ್ರ ನಿರ್ಮಾಣದ ಬದ್ಧತೆಗೆ ದೃಢವಾಗಿ ನಿಂತಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ಅವಿಸ್ಮರಣೀಯವಾಗಿಸಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.