ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಮಾಜಿ ಸಂಸದೆ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿಗೌಡ ಅವರ ಸಹೋದರನ ನಿವೇಶನ ಕಬಳಿಸಿದ ಭೂಗಳ್ಳರನ್ನು ಬೆಂಗಳೂರು ಸಿಸಿಬಿ ( ಅಪರಾಧ ವಿಭಾಗ) ಪೊಲೀಸರು ಬಂಧನಕ್ಕೆ ಕ್ರಮ ಜರುಗಿಸಿದ್ದಾರೆ. ಆರ್ ಎಂ ವಿ ಎರಡನೇ ಹಂತ ನಾಗಶೆಟ್ಟಿಹಳ್ಳಿಯ ಎಂ.ನಾರಾಯಣಸ್ವಾಮಿ, ಮುನಿರಾಜು.ಎಂ, ಎಂ.ಮುನಿಸ್ವಾಮಿ, ಎಂ.ಮಮತಾ ಎಸ್. ಸಂತೋಷ್ ಹಾಗೂ ಶ್ರೀಕಾಂತ್ ಎಂಬುವರ ವಿರುದ್ದ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿನಕ್ಕೆ ಕ್ರಮ ಜರುಗಿಸಿದ್ದು, ಪರ‍್ವಬಾವಿಯಾಗಿ ನೋಟಿಸ್ ನೀಡಿದ್ದಾರೆ . ಬೆಂಗಳೂರು ಆರ್.ಎಂ.ವಿ ಎರಡನೇ ಹಂತ, ಸಂಜಯನಗರ, ನಾಗಶೆಟ್ಟಿಹಳ್ಳಿಯ ಬಸವೇಶ್ವರ ಬಡಾವಣೆಯ ಎಂ.ನಂಜೇಗೌಡ ಅವರ ಪಿಐಡಿ ನಂ 100-566-2, ಎ ಖಾತೆ ಹೊಂದಿರುವ ನಿವೇಶನ ತಾರೀಖು 16-07-2008 ರಂದು ಬೆಂಗಳೂರು ಹೆಬ್ಬಾಳ ಉಪನೊಂದಾಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಸಂಖ್ಯೆ ಹೆಚ್.ಬಿ.ಬಿ-654/ 2008-2009 ನೊಂದಣಿಯಾಗಿದೆ.
ಆದರೆ, ಈ ಬೆಲೆ ಬಾಳುವ ನಿವೇಶನದ ನಕಲಿ ದಾಖಲೆ ಸೃಷ್ಟಿಸಿದ ಎಂ.ನಾರಾಯಣಸ್ವಾಮಿ, ಎಂ.ಮುನಿರಾಜು. ಎಂ.ಮುನಿಸ್ವಾಮಿ, ಎಂ.ಮಮತಾ ಎಸ್. ಸಂತೋಷ್. ಹಾಗೂ ಶ್ರೀಕಾಂತ್ ಅವರು ತಾರೀಖು 09-07-2025 ರಂದು ಗಂಗಾನಗರ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಅಸಲಿ ದಾಖಲೆಗಳೊಂದಿಗೆ ನಿವೇಶನ ಮಾಲೀಕರ ಸಂಬಂಧಿಯಾದ ಬಿ.ಎಲ್.ಶ್ರೀರಮೇಶ್ ಅವರು ಸಿಸಿಬಿ ಪೊಲೀಸರಿಗೆ ದೂರು ಸಲ್ಲಿಸಿದರು. ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಕಬಳಿಸಿದ ಆರು ಮಂದಿಯ ಬಂಧನಕ್ಕೆ ಕ್ರಮ ಜರುಗಿಸಿದ್ದಾರೆ. ಇದರ ಪರ‍್ವಭಾವಿಯಾಗಿ ನೋಟಿಸ್ ನೀಡಿದ್ದಾರೆ ಎಂದು ಹೈಕರ‍್ಟ್ ನ್ಯಾಯವಾದಿ ಡಿ.ಎನ್.ರಾಮಕೃಷ್ಣ ತಿಳಿಸಿದ್ದಾರೆ. ನಿವೇಶನದ ನಕಲಿ ದಾಖಲೆ ಸೃಷ್ಟಿಸಿದ ಭೂಗಳ್ಳರಿಗೆ ನಿವೇಶನ ನೊಂದಣಿ ಮಾಡಿಸಿ ಕೊಟ್ಟ ಬೆಂಗಳೂರು ಗಂಗಾನಗರ ಉಪನೊಂದಣಾಧಿಕಾರಿಯ ವಿರುದ್ದವು ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯವಾದಿ ಡಿ.ಎನ್.ರಾಮಕೃಷ್ಣ ಹೇಳಿದ್ದಾರೆ.