ಬೆಂಗಳೂರು : ಕೆಂಗೇರಿ ಉಪನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಶ್ರೀಮಠದ ಅಧ್ಯಕ್ಷರಾದ ಶ್ರೀ ಸುಧೀಂದ್ರ ಕುಮಾರ್ ಅವರ ನೇತೃತ್ವದಲ್ಲಿ ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳು, ರಥೋತ್ಸವ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ಪುರಂದರ ನಮನ" ಶೀರ್ಷಿಕೆಯಲ್ಲಿ ವಿದುಷಿ ಶ್ರೀಮತಿ ರಮ್ಯಾ ಸುಧೀರ್ ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ತಾರತಮ್ಯೋಕ್ತವಾಗಿ ಮತ್ತು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ವಿದ್ವಾನ್ ಟಿ.ಎಸ್. ರಮೇಶ್ ಮತ್ತು ತಬಲಾ ವಾದನದಲ್ಲಿ ವಿದ್ವಾನ್ ಕೇದಾರನಾಥ್ ಸಾಥ್ ನೀಡಿದರು. ಶ್ರೀಮಠದ ಜಂಟಿ ಕಾರ್ಯದರ್ಶಿಗಳಾದ ಶ್ರೀ ಜಯಸಿಂಹ ಅವರು ಕಲಾವಿದರಿಗೆ ಗುರುಗಳ ಪ್ರಸಾದ ಮತ್ತು ಶೇಷವಸ್ತ್ರ ನೀಡಿ ಗೌರವಿಸಿದರು.
