‘ನಕಲಿ ವೈದ್ಯ’ರ ವಿರುದ್ಧ ಜಾಗೃತಿ ಶಿಬಿರ

varthajala
0

 ಬೆಂಗಳೂರು, ಜ.28: ಭಾರತೀಯ ಚರ್ಮರೋಗ ತಜ್ಞರ ಸಂಘಟನೆಯಾದ ಇಂಡಿಯನ್ ಅಸೋಸಿಯೇಷನ್ ಆಫ್ ಡರ್ಮಟಾಲಜಿಸ್ಟ್ಸ್, ವೆನಿರಿಯಾಲಜಿಸ್ಟ್ಸ್ ಅಂಡ್ ಲೆಪ್ರಾಲಜಿಸ್ಟ್ಸ್ ಯಿಂದ ರಾಷ್ಟ್ರೀಯ ಮೆಗಾ ಆಂಟಿ–ಕ್ವಾಕರಿ ಚರ್ಮ ಆರೋಗ್ಯ ಶಿಬಿರವನ್ನು ದೇವನಹಳ್ಳಿಯ ಆಕಾಶ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. 

ಶಿಬಿರದಲ್ಲಿ 1,000ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಚರ್ಮರೋಗ ತಪಾಸಣೆ, ಉಚಿತ ಔಷಧೋಪಚಾರ ಮತ್ತು ಆಹಾರ ಒದಗಿಸಲಾಯಿತು. ನಕಲಿ ವೈದ್ಯರು (ಕ್ವಾಕರಿ) ಹಾಗೂ ಅರ್ಹತೆಯಿಲ್ಲದ ವ್ಯಕ್ತಿಗಳಿಂದ ನಡೆಯುವ ಅಪಾಯಕಾರಿ ಚಿಕಿತ್ಸೆಗಳ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿತ್ತು.
ಡಾ. ಆರ್. ರಘುನಾಥ ರೆಡ್ಡಿ ಮಾತನಾಡಿ, “ಕ್ವಾಕರಿ ಶಾಶ್ವತ ಚರ್ಮ ಹಾನಿ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂದು ಹೇಳಿದರು.
ಡಾ. ಬ್ರಿಜೇಶ್ ಕೆ ಮಾತನಾಡಿ, ಅವರು ವೈದ್ಯರ ಸಲಹೆಯಿಲ್ಲದೆ ಬಳಸುವ ಕ್ರೀಮ್ಗಳ ಅಪಾಯಗಳ ಬಗ್ಗೆ ಎಚ್ಚರಿಸಿದರು.
ಡಾ. ರಾಜೇತಾ ಧಾಮಿಸೆಟ್ಟಿ ಮಾತನಾಡಿ, ಅವರು ಸಾರ್ವಜನಿಕ ಜಾಗೃತಿಯೇ ಕ್ವಾಕರಿಯ ವಿರುದ್ಧದ ಶಕ್ತಿಶಾಲಿ ಆಯುಧ ಎಂದರು.
ಡಾ. ಅಮರೇಂದ್ರ ಪಾಂಡೆ ಮಾತನಾಡಿ, ಸ್ಟೆರಾಯ್ಡ್ ಮಿಶ್ರಿತ ಕ್ರೀಮ್ಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿದರು.
ಡಾ. ಅಕ್ಷಯ ಸಮಗಾನಿ, ಅರ್ಹ ಚರ್ಮರೋಗ ತಜ್ಞರಿಂದಲೇ ಚಿಕಿತ್ಸೆ ಪಡೆಯಬೇಕೆಂದು ಜನರಿಗೆ ಮನವಿ ಮಾಡಿದರು. ತಜ್ಞರು ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು. ಈ ಶಿಬಿರವನ್ನು ಐಎಡಿವಿಎಲ್ ಆಂಟಿ–ಕ್ವಾಕರಿ ಸಮಿತಿ, ಡರ್ಮಾಕಾನ್ 2026 ಮತ್ತು ಆಕಾಶ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಯಿತು.

Post a Comment

0Comments

Post a Comment (0)