ಮಲ್ಲೇಶ್ವರದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ವೈಸ್ ಆಫ್ ಎಕ್ಸ್‌ಪೀರಿಎನ್ಸ್ (Voice of Experience) ಕಾರ್ಯಕ್ರಮ ಆಯೋಜನೆ

varthajala
0
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ವೈಸ್ ಆಫ್ ಎಕ್ಸ್‌ಪೀರಿಎನ್ಸ್ (Voice of Experience) ಎಂಬ ಕಾರ್ಯಕ್ರಮವನ್ನು 19 ಜನವರಿ 2026 ರಂದು ಆಯೋಜಿಸಲಾಯಿತು.

ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜಿನ ಹಿರಿಯ ಶಿಕ್ಷಕರು ಹಾಗೂ ಮಾಜಿ ಪ್ರಾಂಶುಪಾಲರು  ತಮ್ಮ ಅನುಭವಗಳನ್ನು ಯುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲು ಕಾಲೇಜಿನ ಟ್ರಸ್ಟ್ ಹಾಗೂ ಮ್ಯಾನೇಜ್ಮೆಂಟ್ ಕಡೆಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾಲೇಜಿನ ಪ್ರಾಂಶುಪಾಲರು ಡಾ. ನಂದ ಕುಲಕರ್ಣಿ  ನಮ್ಮ ಕಾಲೇಜಿನ ಮಾಜಿ ಪ್ರಾಂಶುಪಾಲರುರಾದ ಡಾ. ನಾಗಲಕ್ಷ್ಮಿ  ಬಿ. ಎನ್ ಅವರನ್ನು ಉದ್ದೇಶಿಸಿ ಮಾತನಾಡಿ, ಅವರು ನಮ್ಮ ಕಾಲೇಜಿನ ಬಗ್ಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ನಮ್ಮ ಕಾಲೇಜು ಉನ್ನತ ಮಟ್ಟಕ್ಕೆ ತಲುಪಲು ಇವರ ಸಾಮರ್ಥ್ಯವು ಅಧಿಕವಾಗಿದೆ. ಅವರ ಕಾರ್ಯ ಸಾಧನೆ ಈಗಿನ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಮಾದರಿಯಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಾಜಿ ಪ್ರಾಂಶುಪಾಲರು ಡಾ. ನಾಗಲಕ್ಷ್ಮಿ  ಬಿ. ಎನ್, ಎಂಲ್ಯಾಕ್ ನನ್ನ ವೃತ್ತಿಪರ ಮನೆಯಾಗಿದೆ. ನಾವು ನಮ್ಮ ಕೆಲಸದಲ್ಲಿ ನಿರಂತರವಾಗಿ ಉನ್ನತ ಮಟ್ಟಕ್ಕೆ ತಲುಪಲು ನಮ್ಮ ಕಾಲೇಜಿನ ಮೂಲವನ್ನು ಮೊದಲು ತಿಳಿದುಕೊಳ್ಳಬೇಕು. ನಾವು ನಮ್ಮ ಕರ್ತವ್ಯವನ್ನು ಗೌರವಿಸಿ ಕಾರ್ಯ ನಿರ್ವಹಿಸಿದಾಗ ಮಾತ್ರ ನಮ್ಮ ಕಾಲೇಜು ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯ. ಎಂಲ್ಯಾಕ್ ನ ಸ್ಥಾಪಕರಾದ ಡಾ. ಕೆ.ಎನ್.ವಿ ಶಾಸ್ತ್ರಿ ಅವರ ಮೂಲ ಉದ್ದೇಶ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಧೈರ್ಯ ಹಾಗೂ ಗೌರವದಿಂದ ಜೀವನದಲ್ಲಿ ಮುನ್ನುಗ್ಗಬೇಕು ಎನ್ನುವುದು.  ಹಾಗೆಯೇ ಇಲ್ಲಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರ ಹಾಗೂ ಅವಕಾಶಗಳು ಎಲ್ಲರಿಗೂ ಸ್ಫೂರ್ತಿಯನ್ನು ತುಂಬುತ್ತಿದೆ. ಎಲ್ಲರೂ ಕಾಲೇಜಿನ ಸಂಸ್ಕೃತಿ, ಶಿಸ್ತು, ಜವಾಬ್ದಾರಿ ಮತ್ತು ಸಮಯಪಾಲನೆಯನ್ನು ಕಟ್ಟುನಿಟ್ಟಾಗಿ ಪಡಿಸಿದರೆ ನಮ್ಮ ಕಾಲೇಜು ಅತ್ಯುನ್ನತ ಮಟ್ಟಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ ಎಂದರು. 

ನಂತರ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ಡೈರೆಕ್ಟರ್ ಡಾ. ಶರ್ಮಿಸ್ಠ ದತ್ತ, ಆಡಳಿತ ಅಧಿಕಾರಿ ಡಾ.  ಅನ್ನದಾನೀಶ ಬಿ.ಎ, ಸಹಾಯಕ ಆಡಳಿತ ಅಧಿಕಾರಿ ಡಾ.  ಮಂಜುಳಾ ಕೆ, ಪಿಯುಸಿ ಪ್ರಾಂಶುಪಾಲರು ವಾದಿರಾಜ್ ಮಾನ್ವಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Post a Comment

0Comments

Post a Comment (0)