ಆಗಸ್ಟ್ 2022 ರಿಂದ ಜನವರಿ 2026ರವರೆಗೆ ರ‍್ನಾಟಕ ರ‍್ವೋದಯ ಮಂಡಲವು 68 ವಿದ್ಯಾಸಂಸ್ಥೆಗಳಲ್ಲಿ ಹಾಗೂ ಐದು ಕಾರಾಗೃಹಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕರ‍್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜ ಪರಿರ‍್ತನೆಯ ಮಹತ್ವದ ಹೆಜ್ಜೆ ಇಟ್ಟಿದೆ.
ಡಾ. ಹೆಚ್. ಎಸ್. ಸುರೇಶ್ ಅವರ ನೇತೃತ್ವದಲ್ಲಿ ಗಾಂಧೀ ಚಿಂತನೆ, ಸಾಮಾಜಿಕ ರ‍್ತವ್ಯ, ಕುಟುಂಬ ಮೌಲ್ಯಗಳು ಕುರಿತ ಸಂವಾದ, ಸ್ರ‍್ಧೆಗಳು ಹಾಗೂ ಪ್ರಕಟಣೆಗಳು ಜನಮಾನಸ ತಲುಪಿವೆ. ರಾಜ್ಯದ ವಿವಿಧ ಜಿಲ್ಲೆಗಳ ರ‍್ವೋದಯ ಮಂಡಲಗಳು ಪರಿಸರ, ಯುವಶಕ್ತಿ ಹಾಗೂ ಮಹಿಳಾ ಜಾಗೃತಿ ಕ್ಷೇತ್ರಗಳಲ್ಲಿ ಗಮನರ‍್ಹ ಕರ‍್ಯನರ‍್ವಹಿಸುತ್ತಿವೆ.
ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಕರ‍್ಯಕ್ರಮ ಮಾದರಿಯು ಸಾಮಾಜಿಕ ವಲಯದಲ್ಲಿ ಮೆಚ್ಚುಗೆ ಗಳಿಸಿದ್ದು, ಗಾಂಧೀ ತತ್ವಗಳ ಪುನರುಜ್ಜೀವನಕ್ಕೆ ರ‍್ವೋದಯ ಮಂಡಲ ಪ್ರಮುಖ ವೇದಿಕೆಯಾಗಿ ರೂಪುಗೊಂಡಿದೆ. ಬಾಕ್ಸ್ ಜ.30 ರಂದು ಕಲಬುರಗಿಯಲ್ಲಿ ರಾಷ್ಟ್ರೀಯ ರ‍್ವೋದಯ ದಿನಾಚರಣೆ – ಯುದ್ಧ ವೀರರಿಗೆ ಗೌರವ ಕಲಬುರಗಿ: ರ‍್ನಾಟಕ ರ‍್ವೋದಯ ಮಂಡಳ ಹಾಗೂ ಹುತಾತ್ಮ ಅಪ್ಪಾರಾವ್ ಪಾಟೀಲ್ ಫೌಂಡೇಶನ್ ವತಿಯಿಂದ ಜನವರಿ 30ರಂದು ನಗರದಲ್ಲಿ ರಾಷ್ಟ್ರೀಯ ರ‍್ವೋದಯ ದಿನ ಹಾಗೂ ಹುತಾತ್ಮರ ದಿನಾಚರಣೆ ನಡೆಯಲಿದೆ.ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾದ ಈ ಕರ‍್ಯಕ್ರಮದ ಅಂಗವಾಗಿ ಬೆಳಿಗ್ಗೆ ಜಗತ್ ರ‍್ಕಲ್‌ನಿಂದ ರ‍್ದಾರ್ ಪಟೇಲ್ ಚೌಕ್‌ವರೆಗೆ ಫ್ರೀಡಂ ವಾಕ್ ನಡೆಯಲಿದ್ದು, ಸ್ವಾತಂತ್ರ‍್ಯ ಹೋರಾಟದ ಫೋಟೋ ಪ್ರರ‍್ಶನ ಮತ್ತು ಐತಿಹಾಸಿಕ ವಸ್ತುಗಳ ಪ್ರರ‍್ಶನ ನಡೆಯಲಿದೆ. ಶಾಂತಿ ಕರ‍್ಯರ‍್ತ ಶ್ರೀ ಇ.ಪಿ. ಮೆನನ್ ಅವರಿಗೆ ರಾಷ್ಟ್ರೀಯ ರ‍್ವೋದಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಜೊತೆಗೆ ಶ್ರಮಜೀವಿಗಳು, ಸಮಾಜ ಸೇವಕರು ಹಾಗೂ ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬ ಸದಸ್ಯರಿಗೆ ಗೌರವ ಸಲ್ಲಿಸಲಾಗುವುದು. ರ‍್ವೋದಯ ಮೌಲ್ಯಗಳು, ದೇಶಭಕ್ತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಮಹತ್ವದ ಕರ‍್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿಕಲಬುರಗಿ ಉತ್ತರ ಕ್ಷೇತ್ರದ ಶಾಸಕ ಶ್ರೀ ಅಲ್ಲಂಪ್ರಭು ಪಾಟೀಲ್ ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಹುತಾತ್ಮ ಅಪ್ಪಾರಾವ್ ಪಾಟೀಲ್ ಫೌಂಡೇಶನ್ ಕರ‍್ಯರ‍್ಶಿ ಪ್ರೋ ಬಿ.ಎ.ಪಾಟೀಲ್ ಮತ್ತು ರ‍್ನಾಟಕ ರ‍್ವೋದಯ ಮಂಡಳ ಅಧ್ಯಕ್ಷ ಡಾ.ಹೆಚ್.ಎಸ್.ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.